ಒಬ್ಬೊಬ್ಬ ಬ್ರೇಕ್ ಇನ್ಸ್ ಪೆಕ್ಟರ್ ೧೦೦ ಕೋಟಿಗಳ ಒಡೆಯ ಆಸ್ತಿ ತನಿಖೆ ಮಾಡಲು ಸರಕಾರಕ್ಕೆ ತಾಕತ್ ಇದಿಯಾ: ಹೆಚ್.ಡಿ. ರೇವಣ್ಣ ಸವಾಲು

ಹಾಸನ: ಏಜೆಂಟ್ ಮೂಲಕ ವಸೂಲಿ ಮಾಡುತ್ತಿರುವ ಒಬ್ಬೊಬ್ಬ ಬ್ರೇಕ್ ಇನ್ಸ್ ಪೆಕ್ಟರ್ ೧೦೦ ಕೋಟಿಗಳ ಒಡೆಯನಾಗಿದ್ದು, ಇವರ ಆಸ್ತಿ ತನಿಖೆ ಮಾಡಲು ಸರಕಾರಕ್ಕೆ ತಾಕತ್ ಇದಿಯಾ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ರವರು ಸವಾಲು ಹಾಕಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ಕುರಿತಂತೆ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಗಮನ ಕೊಡಬೇಕು. ಜನಸಾಮಾನ್ಯರಿಗೆ ತೊಂದರೆ ಕೊಟ್ಟು ಪ್ರತಿಭಟನೆ ಮಾಡುವುದು ಒಳ್ಳೆಯದಲ್ಲ. ಸಾರಿಗೆ ನೌಕರರ ಮುಷ್ಕರದಲ್ಲಿ ರಾಜಕೀಯ ಇರಬಾರದು ಎಂದ ಅವರು, ಸಾರಿಗೆ ನೌಕರರು ಮುಷ್ಕರ ಕೈಬಿಡಬೇಕು. ಮುಷ್ಕರದಿಂದ ಸಮಸ್ಯೆ ಬಗೆಹರಿಯಲ್ಲ. ಈಗಾಗಲೇ ನಾಲ್ಕು ಸಾವಿರ ಕೋಟಿ ನಷ್ಟವಾಗಿದೆ. ಕೆ.ಎಸ್.ಆರ್.ಟಿ.ಸಿ. ಆ ಸಂಸ್ಥೆ ನೌಕರರ ಆಸ್ತಿ, ಅದೇ ಮುಳುಗಿದರೆ ಮಂದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಂತಹ ಪರಿಸ್ಥಿತಿಯನ್ನು ಗಮನಿಸಿ ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ದೂರಿದರು. ಆರ್.ಟಿ.ಓ. ಮತ್ತು  ಬ್ರೇಕ್‌ಇನ್ಸ್ ಪೆಕ್ಟರ್ ಇವರು ತನಿಖೆ ಮಾಡುತ್ತಿದ್ದಾರಾ! ಬೆಳಿಗ್ಗೆ ಆದರೇ ಸಾಕು ಏಜೆಂಟ್ ಮೂಲಕ ವಸೂಲಿ ಮಾಡುವಲ್ಲಿ ನಿರತರಾಗುತ್ತಾರೆ. ಒಬ್ಬೊಬ್ಬ ಬ್ರೇಕ್ ಇನ್ಸ್ ಪೆಕ್ಟರ್ ೧೦೦ ಕೋಟಿ ರೂಗಳ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಇವರ ಆಸ್ತಿಯನ್ನು ತನಿಖೆ ಮಾಡಿಸಲು ಸರಕಾರಕ್ಕೆ ತಾಕತ್ ಇದಿಯಾ ಎಂದು ಸವಾಲು ಹಾಕಿದರು.    ನಾನು ಮುಖ್ಯಮಂತ್ರಿ, ಸಾರಿಗೆ ಸಚಿವರಲ್ಲಿ ಮನವಿ ಮಾಡುತ್ತೇನೆ. ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಸಾರಿಗೆ ನೌಕರರು ಹಠ ಮಾಡಬಾರದು. ಎಲ್ಲಾ ವಸ್ತುಗಳ ಬೆಲೆ ದುಬಾರಿಯಾಗಿದೆ. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಪರಿಷ್ಕರಿಸಬೇಕು ಎಂದು ಹೇಳಿದರು. ಇಬ್ಬಯ ಪ್ರಾಥಮಿಕ ಶಾಲೆಗಳಲ್ಲೆ ೨೫ ಸಾವಿರ ಪ್ರಾಥಮಿಕ ಶಿಕ್ಷಕರ ಹುದ್ದೆ ಖಾಲಿ ಇದ್ದು, ತುಂಬುವ ಕೆಲಸ ಮಾಡಬೇಕು. ಇನ್ನು ಸಂಸದರ ಗ್ರಾಂಟ್ ನಿಲ್ಲಿಸಿದ್ದಾರೆ. ಡೆಲ್ಲಿಯಲ್ಲಿ ಇದ್ದ ಕ್ಯಾಂಟಿನ್ ತೆಗೆದಿದ್ದಾರೆ. ಮುಂದೆ ಏನಾದರೂ ಎಂಪಿ ಗ್ರಾಂಟ್ ತಡೆ ಹಿಡಿದರೇ ಸಮಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟರು.


     ಜಿಲ್ಲೆಯಲ್ಲಿ ಕ್ರಷರ್ ಗಳಿಗೆ ಬೋಡರ‍್ಸ್ ಮತ್ತು ಜಲ್ಲಿ ಕೊರೆಸುವ ೧೦೨ ಕೋರೆಗಳಿದ್ದು, ಇದರಲ್ಲಿ ೮೮ ಕೋರೆಗಳು ಕೆಲಸ ಮಾಡುತ್ತಿದೆ.  ೮೩ ಕ್ರರ‍್ಸ್ ಗಳಿದ್ದು, ಇದರಲ್ಲಿ ೪೮ ಕ್ರಷರ್ ನಿರ್ವಹಿಸುತ್ತಿದ್ದು, ಉಳಿದವು ಕೆಲಸ ಮಾಡುತ್ತಿಲ್ಲ. ಕೂಡಲೇ ಕ್ರರ‍್ಸ್ ಮತ್ತು ಕೋರೆ ಮಾಲೀಕರನ್ನು ಕರೆಯಿಸಿ ಸಭೆ ಮಾಡಿ ನಿಮ್ಮ ಸ್ಥಿತಿ ಏನಿದೆ ಅದನ್ನು ತಿಳಿದು ಹಾಕಲಿ ನನ್ನದೇನು ಅಭ್ಯಂತರವಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬAಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ ಅವರು ಕೋರೆಗಳ ನಿಲ್ಲಿಸಿ ಜಲ್ಲಿಗಳ ಅಭಾವ ಮಾಡಬಾರದು. ಜೂನ್ ತಿಂಗಳಲ್ಲಿ ಎರಡು ನಾಲೆಗಳಿಗೆ ನೀರು ಬಿಡಬೇಕು. ನಾಲೆ ಕೆಲಸವಾಗುತ್ತಿದೆ. ಕೆಲ ಕಡೆ ಕೆಲಸವೇ ನಿಂತು ಹೋಗಿದೆ. ಕೆಲವರು ಇಲಿಗಲ್ ಮಾಡಿಕೊಂಡು ರಾತ್ರಿ ಎಲ್ಲಾ ಜಲ್ಲಿ ಹೊಡೆಯುತ್ತಿದ್ದಾರೆ. ನಾನೇನಾದರೂ ಹೇಳಕ್ಕೆ ಹೋದರೆ ಅಡ್ಡಿಪಡಿಸಿದರೂ ಎಂದು ಹೇಳುತ್ತಾರೆ ಎಂದು ದೂರಿದರು. ಇಲ್ಲಿ ಮಾಜಿ ಸಚಿವರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹಳ್ಳಿ ಮೈಸೂರು ಹೋಬಳಿ, ಕಲ್ಲೋಡೆ ಬೋರೆಕಾವಲ್ ಗ್ರಾಮದ ಸರ್ವೆ ನಂ.೧/೧ ರಲ್ಲಿ ರಂಗೇನಹಳ್ಳಿ ಏತ ನೀರಾವರಿ ಯೋಜನೆಯ ಉದ್ದೇಶಿತ ನೀರಿನ ತೊಟ್ಟಿ ಮತ್ತು ಪೈಪ್ ಲೈನ್ ಹಾಗೂ ಗುಡ್ಡೇನಹಳ್ಳಿ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಮತ್ತು ವಿತರಣೆ ಕಾಲುವೆ ಮಧ್ಯೆ ಕಲ್ಲು ಗಣಿಗಾರಿಕೆಗೆ ಸರಕಾರದ ನಿಯಮ ಎಲ್ಲಾವನ್ನು ಗಾಳಿಗೆ ತೂರಿ ಅನುಮತಿ ನೀಡಿರುವ ಜಿಲ್ಲಾ ಕಂದಾಯ ಅಧಿಕಾರಿಗಳು ಮತ್ತು ಜಿಲ್ಲಾ ಗಣಿಗಾರಿಕೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಕೋರಲಾಗಿದೆ ಎಂದರು. ಜೂನ್ ತಿಂಗಳಲ್ಲಿ ನೀರು ಬಿಡಬೇಕು. ಇಲ್ಲವಾದರೇ ರೈತರ ಬೆಳೆಗೆ ಸಮಸ್ಯೆ ಆಗುತ್ತದೆ. ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಕಳೆದ ಎರಡು ದಿವಸವಷ್ಟೆ ಬಾಚೆನಹಳ್ಳಿ ಬಳಿ ಬ್ಲಾಸ್ಟ್ ಆಗಿದ್ದು, ಮೃತ ಕುಟುಂಬಕ್ಕೆ ೫ ಲಕ್ಷ ರೂಗಳನ್ನು ಕೊಡುವಂತೆ ಹೇಳಲಾಗಿದ್ದು ಈ ಘಟನೆಯಲ್ಲಿ ಯಾರೆ ದೊಡ್ಡ ವ್ಯಕ್ತಿ ಇರಲಿ ಕ್ರಮತೆಗೆದುಕೊಳ್ಳುವಂತೆ ಆಗ್ರಹಿಸಿದ ಅವರು, ನನಗೂ ಈ ಬ್ಲಾಸಿಂಗ್ ಗೂ ಸಂಬAಧವಿಲ್ಲ ಎಂದು ಹೇಳಿದರು.  


Post a Comment

Previous Post Next Post