ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಯಲ್ಲೇ ಒಳಚರಂಡಿಯ ವ್ಯವಸ್ಥೆ

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೩ನೇ ವರ‍್ಡ್ ಗೆ ಬರುವ ಕೊನೆ ಪೇಟೆಯಲ್ಲಿ ಸೂಕ್ತವಾದ ಒಳಚರಂಡಿಯ ವ್ಯವಸ್ಥೆ ಇಲ್ಲದ ಕಾರಣ ಚರಂಡಿಯ ನರ‍್ಮಲ್ಯವೆಲ್ಲಾ  ಮುಖ್ಯ ರಸ್ತೆಯಲ್ಲಿ ಹರಿಯುತ್ತಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ  ಅಥವಾ ಸಂಬಂಧಪಟ್ಟ ಚುನಾಯಿತ ಸದಸ್ಯರಾಗಲಿ ಇತ್ತ ಕಡೆ ಗಮನ ಹರಿಸದೇ ಇರುವುದು ಸರ‍್ವಜನಿಕರಿಗೆ ಹಾಗೂ ಅಕ್ಕಪಕ್ಕದ ಗ್ರಾಹಕರಿಗೆ ಪ್ರತಿ ನಿತ್ಯ ತೊಂದರೆ ಅನುಭವಿಸುವಂತಾಗಿದೆ .


ಪಟ್ಟಣದ ಪ್ರಮುಖ ರಸ್ತೆಯಾದ ಬಿಕ್ಕೋಡಿಗೆ  ಸಂರ‍್ಕ ನೀಡುವ ಕೊನೆ ಪೇಟೆಯಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸರ‍್ವಜನಿಕರು ಹಾಗೂ ನೂರಾರು ಗ್ರಾಹಕರು ತಮ್ಮ ಕೆಲಸದ ಸಲುವಾಗಿ ಓಡಾಡುವಂತಹ ಈ ರಸ್ತೆಯಲ್ಲಿ ಈ ರೀತಿಯಾದಂತಹ ಅವ್ಯವಸ್ಥೆ ಕಂಡು ಬಂದಿರುವುದು ಬಹಳ ಖಂಡನೀಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ಎಡೆಮಾಡಿಕೊಟ್ಟಂತಿದೆ.

ಪಟ್ಟಣ ಪಂಚಾಯಿತಿ ವತಿಯಿಂದ ಪ್ರತಿನಿತ್ಯ ಕಸದ ವಿಲೇವಾರಿ ಗಾಡಿಯು ಬಂದರೂ ಸಹ ಯಾವುದೇ ಒಬ್ಬ ಪೌರಕರ‍್ಮಿಕರಾಗಲೀ ಅಥವಾ ನೌಕರರ ಆಗಲಿ ಈ ಬಗ್ಗೆ ಗಮನಹರಿಸಿ ಕೂಡಲೇ ಸೂಕ್ತರೀತಿಯಲ್ಲಿ ಕ್ರಮ ವಹಿಸಬೇಕು ಎಂಬುದು ಎಲ್ಲರ ಆಶಯ .

ಈ ವ್ಯವಸ್ಥೆಯ ಬಗ್ಗೆ ಮಾತನಾಡಿರುವ ಬೇಕರಿ ಮಾಲೀಕರಾದ ಫಣೀಶ್ ಚರಂಡಿಯ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ನಿಜಕ್ಕೂ ಅನಾರೋಗ್ಯಕ್ಕೆ ಎಡೆ ಮಾಡಿಕೊಟ್ಟಂತಾಗಿದೆ , ನಮ್ಮ ವ್ಯಾಪಾರದ ಮೇಲೂ ಸಹ ದುಷ್ಪರಿಣಾಮವನ್ನು ಬೀರುತ್ತಿದೆ 

Post a Comment

Previous Post Next Post