ಪ್ರತಿನಿತ್ಯದ ಮಾರುಕಟ್ಟೆಯನ್ನು ಸ್ಥಳ ತೆರವುಗೊಳಿಸುವಂತೆ ಪಟ್ಟಣ ಪಂಚಾಯಿತಿ ವತಿಯಿಂದ ಸೂಚನೆ.

    ಆಲೂರು ತಾಲ್ಲೂಕಿನಲ್ಲಿ ಪ್ರತಿನಿತ್ಯದ ಮಾರುಕಟ್ಟೆಯನ್ನು ಹಿಂದೆ ಪಟ್ಟಣ ಪಂಚಾಯಿತಿ ವತಿಯಿಂದ ಸೂಚಿಸಲಾಗಿದ್ದ ಸ್ಥಳದಲ್ಲಿಯೇ ಮುಂದುವರೆಸಬೇಕೆಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ಇಂದು ಈಗ ಇರುವ ಮಾರುಕಟ್ಟೆಯ ಸ್ಥಳಕ್ಕೆ ಭೇಟಿ ನೀಡಿ ಎರಡನೇ ಅಲೆಯ ಕರೋನಾ ಬಹಳ ಬೇಗ ಹರಡುತ್ತಿದ್ದು ಕರೋನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಿಂದೆ ಸೂಚಿಸಲಾಗಿದ ವಾಟೆಹೊಳೆ ಜಲಾನಯನ ಇಲಾಖೆಗೆ ಸೇರಿದ ಸ್ಥಳದಲ್ಲಿ ಶನಿವಾರದಿಂದ ನಡೆಸಬೇಕು ಎಂದು ಸೂಚಿಸಿದರು .


ಕೋವಿಂದ್ ತೀವ್ರಗೊಳ್ಳುತ್ತಿರುವ ಕಾರಣದಿಂದಾಗಿ ಪಟ್ಟಣದ ಮಧ್ಯ ಭಾಗದಲ್ಲಿ ನಡೆಯುತ್ತಿರುವ ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಆದ್ದರಿಂದಾಗಿ ಎಲ್ಲಾ ರ‍್ತಕರು ಈ ಆದೇಶವನ್ನು ಪಾಲಿಸಬೇಕಿತ್ತು ತಿಳಿಸಿ ಸದ್ಯದಲ್ಲೇ ಸದಸ್ಯರ ಸಭೆ ಕರೆದು ಪಟ್ಟಣದ ಮಸೀದಿ ಮುಂಭಾಗದಲ್ಲಿರುವ ವಿಶಾಲ ಜಾಗದಲ್ಲಿ ಮಾರುಕಟ್ಟೆ ನಡೆಸುವ ಬಗ್ಗೆ ರ‍್ಚಿಸಲಾಗುವುದು ಎಂದು ಗ್ರಾಹಕರಿಗೆ ಮನವರಿಕೆ ಮಾಡಿದರು .

    ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ವೇದ ಸುರೇಶ್ ವ್ಯಾಪಾರಸ್ಥರಿಗೆ ಗ್ರಾಹಕರಿಗೆ ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲೇ ಮಾರುಕಟ್ಟೆ ವಾರದ ಸಂತೆ ನಡೆಸಲು ಅತಿ ಶೀಘ್ರದಲ್ಲೇ ರ‍್ಚಿಸಿ ತರ‍್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು .

Post a Comment

Previous Post Next Post