ಅಹಮದಾಬಾದ್ : ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಹಣಾಹಣಿಯಲ್ಲಿ, ಕೇವಲ್ 1 ರನ್ ಮೂಲಕ ಆರ್‌ಸಿಬಿ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 42 ಬಾಲ್‌ಗಳಲ್ಲಿ 75 ರನ್ ಸಿಡಿಸಿದ ಎ ಬಿ ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ 20 ಓವರ್‌ನ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತ್ತು.
ಇದನ್ನು ಬೆನ್ನಟ್ಟಿ ಹೊರಟ ಡೆಲ್ಲಿ ನೋಡು ನೋಡುತ್ತಿದಂತೆ ಮೊದಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹೊಸ್ತಿಲಿನಲ್ಲಿ ನಿಂತಿತ್ತು ಈ ಸಂದರ್ಭದಲ್ಲಿ ನಾಯಕ ರಿಷಬ್ ಪಂತ್‌ಗೆ ಜೊತೆಯಾದ ಆಲ್ ರೌಂಡರ್ ಹಿಟ್ಮಾಯರ್ ಕೇವಲ 25 ಎಸೆತಗಳಲ್ಲಿ 53 ರನ್ ಸಿಡಿಸಿ ಗೆಲುವನ್ನು ಡೆಲ್ಲಿಯ ಕಡೆ ವಾಲುವಂತೆ ಮಾಡಿದರು ಇದೇ ಸಂದರ್ಭದಲ್ಲಿ ನಿಧಾನಗತಿಯ ಆಟವಾಡುತ್ತಿದ್ದ ರಿಷಬ್ ಪಂತ್ 48 ಎಸೆತಗಳಲ್ಲಿ 58 ರನ್ ಗಳಿಸಿ ಇಬ್ಬರೂ ಆಟಗಾರರು ನಾಟ್‌ಔಟ್ ಆಗಿ ಉಳಿದರು.
ಕೊನೆಯ ಓವರ್‌ನಗಲ್ಲಿ ಕೇವಲ 14 ರನ್‌ಗಳ ಅವಶ್ಯಕತೆ ಇದ್ದೂ ಈ ಇಬ್ಬರೂ ಆಟಗಾರರು ಡೆಲ್ಲಿಯನ್ನು ಗೆಲುವಿನ ದಡ ಸೇರಿಸಿಬಿಡುತ್ತಾರೆ ಎನ್ನುವಾಗ ಆರ್‌ಸಿಬಿಯ ಮೊಹಮ್ಮದ್ ಸಿರಾಜ್‌ನ ಆಕ್ರಮಣಕಾರಿ ಔಲಿಂಗ್‌ನಿಂದಾಗಿ ಕೇವಲ 1 ರನ್ ಮೂಲಕ ಆರ್‌ಸಿಬಿ ರೋಚಕ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್ ಅಲ್ಲಿ ಅಗ್ರಸ್ಥಾನಕ್ಕೇರಿತು.
Tags
ಕ್ರೀಡೆ