ಜೂನ್.1 ರವರೆಗೆ.ಲಾಕ್ ಡೌನ್ ಮುಂದುವರಿಕೆ: ಗ್ರಾಮೀಣ ಪ್ರದೇಶದಲ್ಲಿ ಬೆಳಿಗ್ಗೆ 6 ರಿಂದ 10 ರ ವರೆಗೆ ಅವಕಾಶ

ಚಿಕ್ಕಮಗಳೂರು : ಜೂನ್ 1ರವರೆಗೆ ನಗರ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ತೆರೆಯಲು ನಿರ್ಬಂಧ . ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಹೋಮ್ ಡೆಲಿವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಮೇಶ್ ತಿಳಿಸಿದ್ದಾರೆ
ಗ್ರಾಮೀಣ ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ,  ಕೃಷಿ ಪರಿಕರ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ 10ರವರೆಗೆ ಅನುಮತಿ ನೀಡಲಾಗಿದೆ.ಕೃಷಿ ಪರಿಕರಗಳನ್ನು ವಾಹನಗಳಲ್ಲಿ ಸಾಗಿಸಬಹುದಾಗಿದೆ .  ಹಳ್ಳಿ ಪ್ರದೇಶದ ಸಣ್ಣಪುಟ್ಟ ಅಂಗಡಿಗಳನ್ನು ತೆರೆಯಬಹುದು .



ಸ್ಥಳೀಯವಾಗಿ ಮಾತ್ರ ಖರೀದಿಸಬೇಕು .ಗ್ರಾಮೀಣ ಪ್ರದೇಶದಿಂದ ನಗರಪ್ರದೇಶಗಳಿಗೆ  ಜನ /ವಾಹನ  ಓಡಾಡುವಂತಿಲ್ಲ  .
ಪಟ್ಟಣ ಪಂಚಾಯಿತಿ ,ಪುರಸಭೆ ,ನಗರಸಭೆ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಹೋಮ್ ಡೆಲಿವರಿಗೆ  ಅವಕಾಶ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ .
ಬಹುತೇಕ ಹಿಂದಿನ ಮಾರ್ಗಸೂಚಿಯನ್ನೇ ಅನ್ವಯಿಸಲಾಗಿದೆ .ಅಂತರ ಜಿಲ್ಲೆ/ ರಾಜ್ಯ ಪ್ರವೇಶಕ್ಕೆ ಸರ್ಕಾರದ ನೀತಿ ನಿಯಮಗಳು ಅನ್ವಯಿಸುತ್ತವೆ .

Post a Comment

Previous Post Next Post