ಕೋವೀಡ್ ಹೆಸರಿನಲ್ಲಿ ಶಾಸಕ ಪ್ರೀತಮ್ ಗೌಡ‌ ಮಾಜಿ‌ ಸಚಿವ ಹೆಚ್ ಡಿ.ರೇವಣ್ಣರಿಂದ‌ ಕೀಳುಮಟ್ಟ.


ಹಾಸನ: ಕೊವೀಡ್  ಸಂಕಷ್ಟದ ‌ಸಂರ‍್ಭದಲ್ಲಿ  ಶಾಸಕ ಪ್ರೀತಮ್ ಗೌಡ ಹಾಗೂ ಮಾಜಿ‌ ಸಚಿವ ಹೆಚ್.ಡಿ.ರೇವಣ್ಣ  ಕೀಳುಮಟ್ಟದ ರಾಜಕೀಯ ‌ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ‌ ಹಾಗೂ ರಾಜ್ಯ ನೌಕರರ ಸಂಘದ ಮಾಜಿ  ಅಧ್ಯಕ್ಷ ಬಾಗೂರು ಮಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪತ್ರರ‍್ತರೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಕೊರೋನಾ  ಸೋಂಕಿನಿಂದ ಜನರ ಸಾವು‌ನೋವು‌ ಹೆಚ್ಚಳವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ   ಜೀವ ಉಳಿಸುವುದು ರ‍್ಕಾರದ ಆದ್ಯ ರ‍್ತವ್ಯವಾಗಿದೆ.‌ಈ‌ ದೃಷ್ಟಿಯಿಂದ ರ‍್ಕಾರ ಅಗತ್ಯ ವೈದ್ಯಕೀಯ ‌ಸೌಲಭ್ಯ ಒದಗಿಸಬೇಕಾಗಿದೆ ಎಂದು‌ ಆಗ್ರಹಿಸಿದರು.

 ಜಿಲ್ಲೆಯ ರಾಜಕಾರಣಿಗಳ ಒತ್ತಡದಿಂದ ರ‍್ಕಾರ  ‌ಹಾಸನ‌‌ ಜಿಲ್ಲೆಗೆ‌ ಆಕ್ಸಿಜನ್ ‌ಮತ್ತು‌ ವೆಂಟಿಲೇಟರ್  ನೀಡಿರುವುದು ಸ್ವಾಗತರ‍್ಹ ಆದರೆ ಇದನ್ನು ಶಾಸಕ‌ಪ್ರೀತಮ್ ಗೌಡ‌ ಹಾಗೂ‌ ಮಾಜಿ‌ ಸಚಿವ‌ ಹೆಚ್.ಡಿ.ರೇವಣ್ಣ‌  ನಮ್ಮಿಂದಲೇ  ಈ‌ ಸೌಲಭ್ಯ ‌ಬಂದಿರುವುದು‌ ಎಂದು ರಾಜಕೀಯ ‌ ಮಾಡಲು ಹೊರಟಿದ್ದಾರೆ. ಇದು ರ‍್ಕಾರದ ತೆರಿಗೆ ಹಣದಿಂದ ಜನರ ಹಿತಕ್ಕಾಗಿ ಬಂದಿರುವುದು. ಇದು ಯಾರ‌ ಮನೆಯ‌ ಸ್ವಂತ‌ ಹಣದಿಂದ ಬಂದಿರುವುದಲ್ಲ  ‌. ಸರ‍್ಥನೆ ಮಾಡಿಕೊಳ್ಳುವ ಇವರು ರ‍್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಜಿಲ್ಲೆಗೆ ಇನ್ನು ಆಕ್ಸಿಜನ್ ‌ಹಾಗೂ ವೆಂಟಿಲೇಟರ್ ಅವಶ್ಯಕತೆ.‌ ಇದರ‌ ಬಗ್ಗೆ ಚುನಾಯಿತ ಪ್ರತಿನಿಧಿಗಳು‌ ರ‍್ಕಾರದ ಗಮನ ಸೆಳೆಯಬೇಕು. ಹಾಸನ ತಾಲ್ಲೂಕಿನ ‌ಸಾಲಗಾಮೆ ಹೋಬಳಿಯಲ್ಲಿ  ಜನರು ಲಸಿಕೆ‌ ಪಡೆಯಲು  ಪರದಾಡುತ್ತಿದ್ದಾರೆ.  ಶಾಸಕರ ವಿರುದ್ದ  ಆಸ್ಪತ್ರೆ ಮುಂದೆ ನಿಂತು ಜನರು  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .ಈ‌ ಬಗ್ಗೆ ಕ್ಷೇತ್ರದ ‌ಶಾಸಕರು ಗಮನ‌ಹರಿಸದೆ ಕೋವಿಡ್ ಹೆಸರಿನಲ್ಲಿ ರಾಜಕೀಯ ‌ಮಾಡಲು ಹೊರಟಿದ್ದಾರೆ ಇವರಿಗೆ ಮುಂದಿನ ದಿನಗಳಲ್ಲಿ ‌ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದಿದ್ದಾರೆ.

‌ಇನ್ನು‌ ಜಿಲ್ಲಾ ಉಸ್ತುವಾರಿ ಸಚಿವ ಅವರು ಶಾಸಕ  ಪ್ರೀತಮ್  ಅವರ ಕಾಳಜಿಯಿಂದ ಜಿಲ್ಲೆಗೆ ಆಕ್ಸಿಜನ್ ‌ಹಾಗೂ ವೆಂಟಿಲೇಟರ್ ಬಂದಿದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ ರ‍್ಕಾರದ ಸವಲತ್ತಿನಲ್ಲಿ  ಇಂತಹ‌‌ ಸಂರ‍್ಭದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಜಿಲ್ಲೆಯ‌ನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಯೋಚಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

Post a Comment

Previous Post Next Post