ಸುರಭಿಪೌಂಡೇಶನ್‍ನಿಂದ 24x7 ಸಹಾಯವಾಣಿ ಕೇಂದ್ರ ಬೇಲೂರು ಆಸ್ಪತ್ರೆಗೆ 2 ಆಂಬ್ಯುಲೆನ್ಸ್-ಔಷಧಿಕಿಟ್ ಕೊಡುಗೆ ಸೋಂಕಿತ ಕುಟುಂಬಕ್ಕೆ ಪಡಿತರ: ನೌಕರರಿಗೆ ಪ್ರತಿನಿತ್ಯ ಕಾಫಿ-ಬಿಸ್ಕತ್

 ಬೇಲೂರು : ಕೊರೊನಾ ಸೋಂಕಿತರು ಮತ್ತವರ ಕುಟುಂಬ ವರ್ಗದವರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಎಲ್ಲಾ ರೀತಿಯಲ್ಲೂ ನೆರವಿಗೆ ಧಾವಿಸುವ ಕೆಲಸ ಆಗಬೇಕಿದೆ ಎಂದು

ಸುರಭಿಪೌಂಡೇಶನ್ ಅಧ್ಯಕ್ಷೆ ಹಾಗೂ ರಾಜ್ಯ ಬಿಜೆಪಿ ಮಹಿಳಾ

ಮೋರ್ಚ ಕೋಶಾಧ್ಯಕ್ಷೆ ಸುರಭಿರಘು ಹೇಳಿದರು.




ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುರಭಿಪೌಂಡೇಶನ್

ವತಿಯಿಂದ ನೀಡಲಾದ 2 ಆಂಬ್ಯುಲೆನ್ಸ್, ಔಷಧಿ ಹಾಗೂ ಮಾಸ್ಕ್ ವಿತರಣೆ‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿಜಿ ಅವರು ಪ್ರಧಾನಿಯಾಗಿ 7 ವರ್ಷಗಳು ಪೂರೈಸಿದೆ. ಸಂಕಷ್ಟದ ನಡುವೆ ದೇಶದ ಸಾಲ ತೀರಿಸುವ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅವರ

ಆಶಯದಂತೆ 1 ಲಕ್ಷ ಹಳ್ಳಿಗಳ ತಲುಪುವ ಕೆಲಸ ನಾವು

ಮಾಡಬೇಕಿದೆ ಎಂದರು.


ಆಂಬ್ಯುಲೆನ್ಸ್ ಯಾವರೀತಿ ಬಳಕೆ ಆಗಬೇಕು ಎಂಬುದರ

ಮಾಹಿತಿ ವೈದ್ಯರು ತಿಳಿಸಲಿದ್ದಾರೆ. ಹಗರೆ, ಜಾವಗಲ್, ಹಳೇಬೀಡು‌ ಹೋಬಳಿಗೆ ಒಂದು, ಬೇಲೂರು ಮಲೆನಾಡ ಭಾಗಕ್ಕೆ ಇನ್ನೊಂದು ಆಂಬ್ಯುಲೆನ್ಸ್ ನೀಡಲಾಗಿದೆ. ಜೊತೆಯಲ್ಲಿ ಕೊರೊನಾ ಸೋಂಕಿತರಿಗೆ ವೈದ್ಯರ ಸಲಹೆಯಂತೆ ಔಷಧಿಯ ಕಿಟ್ ಅನ್ನು ವೈದ್ಯಾಧಿಕಾರಿ ಡಾ. ನರಸೇಗೌಡರಿಗೆ ನೀಡುತ್ತಿದ್ದೇವೆ. ಬಿಜೆಪಿ ಸದಸ್ಯರು, ಪೌಂಡೇಶನ್

ಸದಸ್ಯರು ಈ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ತಿಳಿಸಿದರು.


ಸುರಕ್ಷಾಕಾರ್ಯಲಯವನ್ನು ಇಂದಿನಿಂದ ಕೋವಿಡ್

ಸಹಾಯವಾಣಿ ಕೇಂದ್ರವನ್ನಾಗಿ ಬದಲಾವಣೆ ಮಾಡುತ್ತಿದ್ದೇವೆ. ಈ ಕೇಂದ್ರವು ದಿನದ 24 ಗಂಟೆಯೂ ಕೆಲಸ ನಿರ್ವಹಿಸಲಿದೆ. ಸುರಭಿ ಪೌಂಡೇಶನ್ ಸದಸ್ಯರು 3 ತಿಂಗಳ ಕಾಲಾವಧಿ ಪಾಸೀಟೀವ್ ಬಂದವರ ಪಟ್ಟಿ ಹಾಗೂ ದೂರವಾಣಿ ಸಂಖೆ ಪಡೆದು ಪ್ರತಿದಿನ ಸೋಂಕಿತರಿಗೆ‌ ಕರೆ ಮಾಡಿ ಔಷಧಿ, ಕುಟುಂಬಕ್ಕೆ ಆಹಾರಸಾಮಾಗ್ರಿ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ಪೌಂಡೇಷನ್ ಸದಸ್ಯರ ಹೆಚ್ಚಿನ ಸಹಕಾರ ಇದೆ ಎಂದು ಸ್ಮರಿಸಿದರು. 



ಒಂದು ತಿಂಗಳ ಅವಧಿಯವರಗೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಔಟ್‍ಪೋಸ್ಟ್ ಇರುವ ಸ್ಥಳದಲ್ಲಿನ ನೌಕರರು, ಸರ್ಕಾರಿ ಕಚೇರಿಯ ಎಲ್ಲಾ ನೌಕರರಿಗೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಕಾಫಿ, ಬಿಸ್ಕತ್, ನೀರು ಕೊಡುವ

ವ್ಯವಸ್ಥೆಯನ್ನು ಮಾಡಲಾಗುತ್ತಿದೆ.


ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ್

ಮಾತನಾಡಿ, ಸುರಭಿಪೌಂಡೇಶನ್ ವತಿಯಿಂದ ಹಲವು

ಜನೋಪಯೋಗಿ ಕಾರ್ಯಕ್ರಮದ ಜೊತೆಗೆ ಕೊರೊನಾ

ಸೋಂಕಿತರಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿರುವುದು

ಮೆಚ್ಚುಗೆಯ ವಿಚಾರ ಎಂದರು. 


ಡಾ.ನರಸೇಗೌಡ ಮಾತನಾಡಿ, ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾದಾಗಿನಿಂದ‌ ಸುರಭಿಪೌಂಡೇಶನ್ ಅಧ್ಯಕ್ಷೆ ಸುರಭಿರಘು ಅವರು, 3 ತಿಂಗಳ ಹಿಂದೆಯೇ ಆಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ. ಇದೀಗ

ಇನ್ನೊಂದು ಆಂಬ್ಯುಲೆನ್ಸ್ ನೀಡಿದ್ದಾರೆ. 1 ಸಾವಿರ ಔಷಧಿ ಕಿಟ್‍ಗಳ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಗೆ ಸ್ಯಾನಿಟೈಸರ್, ಫೇಸ್ ಮಾಸ್ಕ್ ನೀಡುತ್ತಿದ್ದಾರೆಂದು ಕೃಜ್ಞತೆ ಅರ್ಪಿಸಿದರು.

ಈ ಸಂದರ್ಭ ವೈದ್ಯಾಧಿಕಾರಿ ಡಾ.ವಿಜಯ್, ಉಧ್ಯಮಿ

ನಾಗೇನಹಳ್ಳಿಸಂತೋಷ್, ನವಿಲಹಳ್ಳಿ ಸಮಂತ್, ಭರತ್ ಬುರಡಹಳ್ಳಿ ನಾಗೇನಹಳ್ಳಿ ಸಚಿನ್, ತೊಳಲು ಗ್ರಾ.ಪಂ.ಉಪಾಧ್ಯಕ್ಷೆ ಸುಜಾತ ಇತರರು ಇದ್ದರು.

Post a Comment

Previous Post Next Post