ಬೇಲೂರು: ಕಾಂಗ್ರೆಸ್ ಪಕ್ಷದಿಂದ ನೀಡಲಾದ ಆಂಬ್ಯುಲೆನ್ಸ್ ಅನ್ನು ಹಳೇಬೀಡಿನ ಸರ್ಕಾರಿ ಆಸ್ಪತ್ರೆಯ ವೈದ್ಯಸಿಬ್ಬಂದಿ ಪಡೆದುಕೊಂಡರು.ಆಂಬ್ಯುಲೆನ್ಸ್ ಹಸ್ತಾಂತರ ಮಾಡಿ ಮಾತನಾಡಿದ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಹಳೇಬೀಡು ಹೋಬಳಿಯ ಕೊರೊನಾ ಸೋಂಕಿತರ ನೆರವಿಗೆ ಅನುಕೂಲ ಆಗಲೆಂದು
ಕಾಂಗ್ರೆಸ್ ಪಕ್ಷದ ವತಿಯಿಂದ ಹಳೇಬೀಡು ಹೋಬಳಿಗೆ
ಸಮೀತಗೊಳಿಸಿ ಒಂದು ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದೆ. ಈ ಆಂಬ್ಯುಲೆನ್ಸ್ ಅನ್ನು ಕಾಂಗ್ರೆಸ್ ರಾಜ್ಯ ಯುವನಾಯಕರಾದ
ಮೊಹ್ಮದ್‍ಹ್ಯಾರೀಸ್ ನಲಪಾಡ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕೊರೊನಾ ಸೋಂಕು ದೂರವಾಗಲು ಸಾರ್ವಜನಿಕರು ಮಾಸ್ಕ್
ಧರಿಸುವುದು, ಗುಂಪುಸೇರದಿರುವುದು ಇವುಗಳ
ಮಾಡದಂತೆ ಎಚ್ಚರವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಹಳೇಬೀಡು ಪೊಲೀಸ್ ಪಿಎಸ್‍ಐ ಗಿರೀಶ್,
ಯುವಕಾಂಗ್ರೆಸ್ ಅಧ್ಯಕ್ಷ ದರ್ಶನ್, ಮುಖಂಡರಾದ ಹರೀಶ್,
ಮಧು, ಹೇಮಂತ್, ಸುಬ್ರಹ್ಮಣ್ಯ, ಕಾಂಗ್ರೆಸ್ ಮುಖಂಡರಾದ
ಹುಲಿಕೆರೆ ರಮೇಶ್, ವೀರಣ್ಣ ಮಾದಿಹಳ್ಳಿ ಹೋಬಳಿ ಹಿಂದುಳಿದ
ವರ್ಗದ ಅಧ್ಯಕ್ಷ ಸುರೇಶ್ ಮಾಜಿ ಅಧ್ಯಕ್ಷ ಕೃಷ್ಣು ಇತರರು
ಇದ್ದರು.