ರಾಮನಾಥಪುರ;- ಸಭ್ಯತೆ, ಮತ್ತು ಸದಾಚಾರ ವಿವೇಕ ಹಾಗೂ ಸಜ್ಜನಿಕೆಯಿಂದ ಎಲ್ಲರ ಜೊತೆ ಪರಿಪೂರ್ಣ ಹೊಂದಿಕೊಂಡು ನಾಡಕಛೇರಿ ಉಪತಹಸಿಲ್ದಾರ್ ಜಿ.ಸಿ. ಚಂದ್ರು ಅವರು ಅವರ ಸೇವಾ ಅವಧಿಯಲ್ಲಿ ಉತ್ತಮ ರೀತಿ ಕಾರ್ಯ ನಿರ್ವಹಿಸಿ ಜನಾನುರಾಗಿಯಾಗಿ ಕಾರ್ಯನಿರ್ವಹಿಸಿದರು ಎಂದು ತಹಸಿಲ್ದಾರ್ ವೈ.ಎಂ. ರೇಣುಕುಮಾರ್ ಶ್ಲಾಘಿಸಿದರು.
ರಾಮನಾಥಪುರ ಪ್ರವಾಸಿ ಮಂದಿರದಲ್ಲಿ ನಡೆದ ಬಿಳ್ಕೋಡಿಗೆ ಸಮಾರಂಭದಲ್ಲಿ ಇಂದು ನಿವೃತ್ತರಾದ ನಾಡಕಛೇರಿ ಉಪತಹಸಿಲ್ದಾರ್ ಜಿ.ಸಿ. ಚಂದ್ರು ಅವರನ್ನು ಗೌರವಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ಸೇವಾ ಅವಧಿಯಲ್ಲಿ ಕಛೇರಿಯಲ್ಲಿ ಸಿಬ್ಬಂದಿಗಳ ಜೊತೆ ಸಹಮತದಿಂದ ಮತ್ತು ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಸ್ಥಳದಲ್ಲಿಯೇ ಪರಿಹರಿಸಿ ಜನಾನುರಾಗಿಯಾಗಿ ಕಾರ್ಯ ನೀರ್ವಹಿಸುತ್ತಿದ್ದರು. ಅವರ ಸಮಯಪ್ರಜ್ಲೆ ಮತ್ತು ಅವರು ನಡೆ-ನುಡಿಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಹೋಗುವಂತೆ ನಾಡಕಛೇರಿಯ ಸಿಬ್ಬಂಧಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕು ಗ್ರೇಟ್ ತಹಸಿಲ್ದಾರ್ ಅಂಕೇಗೌಡ, ನಿವೃತ್ತ ಉಪತಹಸಿಲ್ದಾರ್ ಜಿ.ಸಿ. ಚಂದ್ರು, ರಾಜಸ್ವ ನೀರೀಕ್ಷಕರಾದ ಅರ್.ಐ. ಸ್ವಾಮಿ, ನಂಜೇಗೌಡ, ಮಂಜುನಾಥ್, ಲೋಕೇಶ್, ಶಶಿಧರ್, ಶಿವಕುಮಾರ್, ವಿ.ಎ. ಧಮೇಶ್, ಶರಣೆ ರತ್ನಮ್ಮಮಂಜು, ಅನಂದಕುಮಾರ್, ಬಿ.ಡಿ. ಲಕ್ಷಿö್ಮ ಮುಂತಾದವರು ಭಾಗವಹಿಸಿದ್ದರು. .