ಆಲೂಗೆಡ್ಡೆ ತಳಿಯ ಸದುಪಯೋಗ ಪಡೆಯಲು ರೈತರಿಗೆ ಕರೆ

ಹಾಸನ ಮೇ ೦೭ :-ಅಗಾಂಶ ಆಲೂಗಡ್ಡೆ ತಳಿಯು ರೋಗ ನಿರೋದಕ ತಳಿಯಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ  ತೋಟಗಾರಿಕೆ ಇಲಾಖೆ  ಉಪ ನಿರ್ದೇಶಕರಾದ ಯೋಗೆಶ್ ರೈತರಿಗೆ  ಕರೆ ನೀಡಿದ್ದಾರೆ.     



ತೋಟಗಾರಿಕೆ ಇಲಾಖೆಯ  ಸಭಾಂಗಣದಲ್ಲಿAದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಆಲೂಗಡ್ಡೆಯು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರಿಗೆ ಭಾವನಾತ್ಮಕ ಬೆಳೆಯಾಗಿರುತ್ತದೆ. ಜಿಲ್ಲೆಯಲ್ಲಿ ಬಹಳ ಹಿಂದಿನಿAದಲೂ ಬೆಳೆಯುತ್ತಿದ್ದು, ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಾಗಿರುತ್ತದೆ. ಜಿಲ್ಲೆಯಲ್ಲಿ ಆಲೂಗಡ್ಡೆಯನ್ನು ಸರಿಸುಮಾರು ೪೫,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು, ಆದರೆ ಪ್ರಸ್ತುತ ಕೇವಲ ೯,೦೦೦-೧೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದರು.  

ಆಲೂಗಡ್ಡೆ ಪ್ರದೇಶವು ಕ್ರಮೇಣವಾಗಿ ಕಡಿಮೆಯಾಗುವುದಕ್ಕೆ ಆಲೂಗಡ್ಡೆ ಬಿತ್ತನೆ ಮಾಡಲು ಗೆಡ್ಡೆಗಳ ಪೂರೈಕೆಯ ಸಮಸ್ಯೆ, ಕಳಪೆ ಗುಣಮಟ್ಟದ ಗೆಡ್ಡೆಗಳು ಹಾಗೂ ಅಂಗಮಾರಿ ರೋಗದ ಸಮಸ್ಯೆಗಳು ಕಾರಣ ಎಂದರು. 

ಪ್ರಸ್ತುತ ಆಲೂಗಡ್ಡೆ ಬಿತ್ತನೆ ಗೆಡ್ಡೆಗಳನ್ನು ಉತ್ತರ ಭಾರತದ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು,  ನಮ್ಮ ರಾಜ್ಯದ ರೈತರುಗಳು ಸಂಪೂರ್ಣವಾಗಿ ಬಿತ್ತನೆ ಗೆಡ್ಡೆಗಳಿಗಾಗಿ,  ಆ ರಾಜ್ಯಗಳ ಮೇಲೆ ಅವಲಂಬಿತರಾಗಿದ್ದಾರೆ. ಪ್ರತೀ ವರ್ಷ ಆ ರಾಜ್ಯಗಳಿಂದ ಬಿತ್ತನೆ ಗೆಡ್ಡೆಗಳನ್ನು ಸಾಗಾಣಿಕೆ ಮಾಡುವಾಗ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದು  

 ಜಿಲ್ಲೆಯ ರೈತರು ಬಿತ್ತನೆ ಮಾಡುತ್ತಿರುವ ಆಲೂಗಡ್ಡೆ ಬಿತ್ತನೆ ಗೆಡ್ಡೆಗಳು ಸುಮಾರು ೭ ರಿಂದ ೮ ತಲೆಮಾರಿನ/ ಸಂತಾನ (geಟಿeಡಿಚಿಣioಟಿ) ಗೆಡ್ಡೆಗಳಾಗಿದ್ದು, ಸದರಿ ಗೆಡ್ಡೆಗಳ ಉತ್ಪಾದನೆಯು ಪ್ರತಿ ತಲೆಮಾರಿಗೂ ಗುಣಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬಾಗಲಕೋಟೆ ಹಾಗೂ ಅಂತರಾಷ್ಟಿçÃಯ ಆಲೂಗಡ್ಡೆ ಸಂಸ್ಥೆ, ಬೆಂಗಳೂರು ರವರ ಸಹಭಾಗಿತ್ವದಲ್ಲಿ ಖಏಗಿಙ ಯೋಜನೆಯಡಿಯಲ್ಲಿ ಅಂಗಾAಶ ಕೃಷಿ ಪದ್ದತಿಯ ಕುಡಿ ಕಾಂಡ ಸಸಿಗಳು (ಂಖಅ) ತಾಂತ್ರಿಕತೆಯ ಮೂಲಕ ಆಲೂಗಡ್ಡೆ ಸಸ್ಯೋತ್ಪಾದನೆ ಹಾಗೂ ಆ ಸಸಿಗಳಿಂದ ಆಲೂಗಡ್ಡೆ ಉತ್ಪಾದನೆ ಮಾಡುವ ತಾಂತ್ರಿಕತೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ ಎಂದರು. 


 

ಆಲೂಗೆಡ್ಡ  ತಾಂತ್ರಿಕತೆಯು ವಿಯೆಟ್ನಾಮ್, ಇಂಡೋನೇಶಿಯಾ ದೇಶಗಳಲ್ಲಿ ಬಹಳ ಪ್ರಚಲಿತವಾಗಿದ್ದು, ಆಲೂಗಡ್ಡೆ ಬೆಳೆಯುವ ಯಾವ ಪ್ರದೇಶದಲ್ಲಿಯಾದರೂ ಈ ತಾಂತ್ರಿಕತೆಯ ಮೂಲಕ ಉತ್ಪಾದನೆ ಹಾಗೂ ಬೆಳೆ ಬೆಳೆಯಬಹುದಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿ ಕಾವಲ್, ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಅಂತರಾಷ್ಟಿçÃಯ ಆಲೂಗಡ್ಡೆ ಸಂಸ್ಥೆ, ಬೆಂಗಳೂರು, ಉIZ ಸಂಸ್ಥೆ, ಇವರುಗಳ ಸಹಭಾಗಿತ್ವದಲ್ಲಿ ಸದರಿ ತಾಂತ್ರಿಕತೆಯ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಗಗಳು, ನರ್ಸರಿದಾರರು ಹಾಗೂ ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ಈ ತಾಂತ್ರಿಕತೆಯನ್ನು ರೈತರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.  


ತಾಂತ್ರಿಕತೆಯು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೈತರು ತಮಗೆ ಅವಶ್ಯವಿರುವ ಬಿತ್ತನೆ ಆಲೂಗಡ್ಡೆಯನ್ನು ತಾವೆ ಬೆಳೆದುಕೊಳ್ಳುವಂತಾಗಿ ಸ್ವಾವಲಂಬನೆಯನ್ನು ಸಾಧಿಸುವಂತೆ ಮಾಡುವ ಜವಾಬ್ದಾರಿ ಇಲಾಖೆ ಹಾಗೂ ಸಂಸ್ಥೆಗಳ ಮೇಲಿದೆ ಹಾಗೂ  ರೈತರುಗಳು ಪ್ರತಿ ಹಂಗಾಮಿನಲ್ಲಿ ಸಸಿಗಳಿಂದ ಆಲೂಗಡ್ಡೆಯನ್ನು ಉತ್ಪಾದಿಸಿ, ಮುಂದಿನ ಹಂಗಾಮಿಗೆ ಬಿತ್ತನೆಗಾಗಿ ಉಪಯೋಗಿಸಬಹುದಾಗಿರುತ್ತದೆ. ಈ ರೀತಿಯ ಗೆಡ್ಡೆಗಳು ಉ-೦ ತಲೆಮಾರಿನದ್ದಾಗಿರುವುದರಿಂದ ಗುಣಮಟ್ಟದಲ್ಲಿ ಉತ್ಕöÈಷ್ಠವಾಗಿರುತ್ತವೆ ಎಂದು ಅವರು ಹೇಳಿದರು.

ತೋಟಗಾರಿಕೆ ಇಲಾಖೆಯ ಸೋಮನಹಳ್ಳಿ ಕಾವಲ್ ಹಾಗೂ  ಚೀಲನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಅಂಗಾAಶ ಆಲೂಗಡ್ಡೆಯ ಕುಡಿ ಕಾಂಡ ಸಸಿಗಳನ್ನು (ಂಖಅ)  ಉತ್ಪಾದಿಸಲಾಗುತ್ತಿದ್ದು  ಈಗಾಗಲೇ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿಕಾವಲ್ ಇಲ್ಲಿ ಕುಫ್ರಿ ಜ್ಯೋತಿ, ಕುಫ್ರಿ ಹಿಮಾಲಿನಿ ಮುಂತಾದ ತಳಿಗಳ ಂಖಅ ಸಸಿಗಳನ್ನು ಹಸಿರುಮನೆ ಹಾಗೂ ನೆರಳು ಪರದೆಗಳಲ್ಲಿ ಉತ್ಪಾದಿಸುತ್ತಿದ್ದಾರೆ ಹಾಗೂ ತಾಲ್ಲೂಕುಗಳಲ್ಲಿ ಬೀಜೋತ್ಪಾದನೆಯ ಪ್ರಾತ್ಯಕ್ಷಿಕೆಗಳನ್ನು ಮಾಡುತ್ತಿದ್ದಾರೆ ಎಂದರು.


  ಹಂಗಾಮಿನಲ್ಲಿ ಸೋಮನಹಳ್ಳಿಕಾವಲು ಆಲೂಗಡ್ಡೆ ಸಂಶೋಧನಾ ಕೇಂದ್ರದಲ್ಲಿ ಒಟ್ಟು ೫೦,೦೦,೦೦೦ ಲಕ್ಷ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು ೨೦೨೦-೨೧ನೇ ಸಾಲಿನ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಸೋಮನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಸದರಿ ತಾಂತ್ರಿಕತೆಯ ಮೂಲಕ ಆಲೂಗಡ್ಡೆ ಉತ್ಪಾದಿಸಲಾಗಿದ್ದು, ಫಲಿತಾಂಶ ಉತ್ತಮವಾಗಿರುತ್ತದೆ. ಅಲ್ಲದೇ ೨೦೨೦-೨೧ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಅIP ಹಾಗೂ  ಉIZ ಸಹಭಾಗಿತ್ವದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸುಮಾರು ೩೦ ಜನ ರೈತರಿಗೆ ಉಚಿತವಾಗಿ ಂಖಅ ಸಸಿಗಳನ್ನು ನೀಡಿ, ಸದರಿ ತಾಂತ್ರಿಕತೆಯನ್ನು ಪರಿಚಯಿಸಲಾಗಿದ್ದು, ಫಲಿತಾಂಶ ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದರು. 

  ಮುಂಗಾರು ಹಂಗಾಮಿಗೆ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಸದರಿ ತಾಂತ್ರಿಕತೆಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದು, ರೈತರುಗಳು ಸ್ವಇಚ್ಛೆಯಿಂದ ಇಲಾಖೆ ಹಾಗೂ ಸಂಶೋಧನಾ ಸಂಸ್ಥೆಗಳಿAದ ತಾಂತ್ರಿಕ ಮಾಹಿತಿಯನ್ನು ಪಡೆದು, ಈ ತಂತ್ರಜ್ಞಾನವನ್ನು ತಮ್ಮ ಹೊಲದಲ್ಲಿ ಪ್ರಯತ್ನಿಸುವುದು ಅತಿ ಅವಶ್ಯಕವಾಗಿದೆ ಎಂದರು.


 ಆಲೂಗಡ್ಡೆ ಸಂಶೋಧನಾ ಕೇಂದ್ರ, ಸೋಮನಹಳ್ಳಿಕಾವಲು, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕಂದಲಿ ಹಾಗೂ ಖಾಸಗಿ ನರ್ಸರಿಗಳಲ್ಲಿ ಸಸಿಗಳು ಲಭ್ಯವಿರುತ್ತದೆ. ಸದರಿ ಸಸಿಗಳನ್ನು ಜಿಲ್ಲೆಯಲ್ಲಿ ೫೦ ಪೈಸೆಯಿಂದ ೭೦ ಪೈಸೆಗಳಾಗಿರುತ್ತದೆ. ಜಿಲ್ಲೆಯ ರೈತರುಗಳು ಸ್ವಇಚ್ಛೆಯಿಂದ ಸದರಿ ತಂತ್ರಜ್ಞಾನವನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡು, ಆಲೂಗಡ್ಡೆಯನ್ನು ಉತ್ಪಾದಿಸಿ, ಅದೆ ಆಲೂಗಡ್ಡೆಯನ್ನು ಮುಂದಿನ ಹಿಂಗಾರು ಹಂಗಾಮಿಗೆ ಬಿತ್ತನೆ ಗೆಡ್ಡೆಯಾಗಿ ಉಪಯೋಗಿಸಬಹುದಾಗಿದ್ದು  ಎಲ್ಲಾ ರೈತರ ಸಹಕಾರ ನೀಡಬೇಕು ಎಂದು ಉಪನಿರ್ದೇಶಕರು ತಿಳಿಸಿದರು.  


ಸೋಮನಹಳ್ಳಿ ಕಾವಲ್ ತೋಟಗಾರಿಕ ಸಂಶೋಧನ ಸಂಸ್ಥೆ ಮುಖ್ಯಸ್ಥರಾದ ಅಮರ ನಂಜುಡೇಶ್ವರ, ತಾಲ್ಲೂಕು ತೋಟಗಾರಿಕ ಇಲಾಖೆಯ ಹಿರಿಯ ಸಹಾಯಕ ನಿದೇಶಕರಾದ ರವಿ, ರೈತರಾದ ದೇವರಾಜ್ ಮತ್ತಿತರರು ಹಾಜರಿದ್ದರು. 


Post a Comment

Previous Post Next Post