ಪುರಸಭೆ ಆವರಣದಿಂದ ಶುದ್ಧ ನೀರು ಕೊಂಡೊಯ್ಯಲು ಪರ್ಯಾಯ ವಾಹನದ ವ್ಯವಸ್ಥೆಗೆ ಸಿಪಿಐ ಮನವಿ

 

ಬೇಲೂರು : ಇಲ್ಲಿನ ಪುರಸಭೆಯ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಸಾರ್ವಜನಿಕರು ಹಾಗೂ ಬಡಾವಣೆಯ ನಿವಾಸಿಗಳು ನೀರು ತೆಗೆದುಕೊಂಡು ಹೋಗಲು ದ್ವಿಚಕ್ರ ವಾಹನ ಬಳಸದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಿಪಿಐ ಶ್ರೀಕಾಂತ್ ಸಲಹೆ ನೀಡಿದ್ದಾರೆ.



ಶುದ್ಧ ಕುಡಿಯುವ ನೀರಿನ ಘಟಕದ ಸಮೀಪಕ್ಕೆ ಆಗಮಿಸಿ

ವೀಕ್ಷಿಸಿದ ಅವರು, ಕ್ಯಾನ್‍ಗಳಲ್ಲಿ ನೀರು ತೆಗೆದುಕೊಂಡು

ಹೋಗಲು ದ್ವಿಚಕ್ರ ವಾಹನಗಳಲ್ಲಿ ಬರುವುದು ಹೆಚ್ಚುತ್ತಿದೆ.

ಇದರಿಂದ ವಾಹನ ಸಂಚಾರ ಅಧಿಕಗೊಳ್ಳಲಿದೆ. ದ್ವಿಚಕ್ರ

ಹೊರತುಪಡಿಸಿ ಸಂಬಂಧಿಸಿದ ಬಡಾವಣೆಯ ನಿವಾಸಿಗಳು ಒಟ್ಟಾಗಿ ಸೇರಿ

ಒಮ್ಮತದಿಂದ ದೊಡ್ಡದಾದ ವಾಹನವೊಂದರಲ್ಲಿ ನೀರಿನ

ಕ್ಯಾನುಗಳನ್ನು ತುಂಬಿಕೊಂಡು ಹೋಗುವುದು

ಒಳ್ಳೆಯದು ಮತ್ತು ಸಮಯ ನಿಗಧಿಪಡಿಸಿಕೊಳ್ಳುವುದು

ಉತ್ತಮ ಎಂದು ತಿಳಿಸಿದ್ದಾರೆ.

ಲಾಕ್‍ಡೌನ್ ಹಿನ್ನಲೆಯಲ್ಲಿ ಅಧಿಕಾರಿಗಳ ಈ ಸಲಹೆ

ಉತ್ತಮವಾಗಿದ್ದರೂ ಈ ಸಂಬಂಧ ಯಾವಾರ ಬಡಾವಣೆಯ ಅಥವಾ

ರಸ್ತೆಯ ನಿವಾಸಿಗಳು ಯಾವ ಸಮಯದಲ್ಲಿ ಬರಬೇಕು ಇತ್ಯಾದಿ

ರೂಪುರೇಷೆಯನ್ನು ಪುರಸಭೆಯಿಂದ ಮಾಡುವ ಅಗತ್ಯವಿದೆ

ಎಂಬುದು ಸಾರ್ವಜನಿಕರ ಅಭಿಪ್ರಾಯ.

Post a Comment

Previous Post Next Post