ಹಾಸನ: ಕೊರೋನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಮೇ ೧೦ ರಿಂದ ೨೪ರ ವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಹಾಸನದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರಕಾರದ ನಿಯಮದಂತೆ ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿರವರು ಭಾನುವಾರ ಬೆಳಿಗ್ಗೆ ವರ್ತಕರೊಂದಿಗೆ ಚರ್ಚಿಸಿ ಲಾಕ್ ಡೌನ್ ಮುಗಿಯುವವರೆಗೂ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದಿರಲು ನಿರ್ಧರಿಸಿದ ಹಿನ್ನಲೆಯಲ್ಲಿ ವರ್ತಕರು ನಿರಾಸೆಯಲ್ಲಿ ಒಪ್ಪಿಗೆ ನೀಡಿದ್ದಾರೆ.
ದಿಂದು ಸೋಮವಾರದಿಂದ ೧೪ ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದು, ಆದರೇ ಆಹಾರ ಪದಾರ್ಥವನ್ನು ವ್ಯಾಪಾರ ಮಾಡಲು ಪ್ರತಿ ದಿನ ಬೆಳಿಗ್ಗೆ ೬ ರಿಂದ ೧೦ರ ವರೆಗು ಅವಕಾಶ ಕಲ್ಪಿಸಲಾಗಿದೆ. ಮೊದಲು ವ್ಯಾಪಾರ ಮಾಡುತ್ತಿದ್ದ ಕಟ್ಟಿನ ಕೆರೆಯಲ್ಲಿ ಜನಜಂಗುಳಿ ಸೇರುವುದರಿಂದ ಬದಲಿ ವ್ಯವಸ್ಥೆಯಾಗಿ ನಗರ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಹಾಗೂ ಜಿಲ್ಲಾ ಕ್ರೀಡಾಂಗಣವನ್ನು ವ್ಯಾಪಾರ ಮಾಡುವ ಜಾಗವೆಂದು ಗುರುತಿಸಲಾಗಿದೆ. ಈ ಸ್ಥಳದಲ್ಲಿಯೇ ವ್ಯಾಪಾರ ಮಾಡಿಕೊಂಡು ೧೦ ಗಂಟೆಗೆ ಅಲ್ಲಿಂದ ತಮ್ಮ ವಸ್ತುಗಳನ್ನು ಎತ್ತಿಕೊಂಡು ವಾಪಸ್ ಹೋಗಬೇಕು ಎಂದು ಆಯುಕ್ತರು ಸೂಚಿಸಿದರು. ಇದಕ್ಕೆ ವರ್ತಕರು ಒಪ್ಪಲಿಲ್ಲ. ಬೇಕಾದರೇ ೧೪ ದಿನ ಸಂಪೂರ್ಣ ವ್ಯಾಪಾರವನ್ನೇ ನಿಲ್ಲಿಸುತ್ತೇವೆ. ಬೇರೆ ಕಡೆಗೆ ಬರುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ವ್ಯಾಪಾರಸ್ತರು ತಿಳಿಸಿದರು. ನಮಗೆ ಕಟ್ಟಿನ ಕೆರೆ ಮಾರ್ಕೇಟ್ ನಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಸಾಮಾಜಿಕ ಅಂತರ ಕಾಪಾಡುವುದಾಗಿ ಎಲ್ಲಾ ವ್ಯಾಪಾರಸ್ತರು ಮನವಿ ಮಾಡಿದರೂ ಇದಕ್ಕೆ ಆಯುಕ್ತರು ಒಪ್ಪಿಗೆ ನೀಡಲಿಲ್ಲ. ಕೊನೆಗೆ ನೀವು ಕೊಡುವ ಸ್ಥಳದಲ್ಲಿಯೇ ವ್ಯಾಪಾರ ಮಾಡುತ್ತೇವೆ ಆದರೇ ನಮ್ಮ ತರಕಾರಿ ಇತರೆ ಪದಾರ್ಥಗಳನ್ನು ಪ್ರತಿ ದಿನ ತಂದು ವಾಪಸ್ ಹಾಕಲು ಆಗುವುದಿಲ್ಲ. ವ್ಯಾಪಾರ ಮಾಡುವ ಸ್ಥಳದಲ್ಲಿಯೇ ಇಡಲು ಅವಕಾಶ ಕೋರಿ ಪಟ್ಟು ಹಿಡಿದಾಗ ಇದಕ್ಕೆ ಆಯುಕ್ತರು ಒಪ್ಪಿಗೆ ನೀಡಿದರು. ವ್ಯಾಪಾರ ಮಾಡುವ ಸ್ಥಳ ನಿಗಧಿ ಮಾಡಿದ ಕೂಡಲೇ ವ್ಯಾಪಾರಸ್ತರುನಗರ ಬಸ್ ನಿಲ್ದಾಣದಲ್ಲಿ ಜಾಗ ಹಿಡಿಯಲು ನಾ ಮುಂದು ಎಂಬAತೆ ಓಡುತ್ತಿದ್ದರು.
ನಗರಸಭೆ ಆಯುಕ್ತರು ವ್ಯಾಪಾರಸ್ತರ ಜೊತೆ ಚರ್ಚೆ ಮಾಡುವಾಗ ಸಾಮಾಜಿಕ ಅಂತರ ಇರಲಿಲ್ಲ. ಒಟ್ಟಿಗೆ ನಿಂತು ಮಾತನಾಡಿದರು. ವ್ಯಾಪಾರ ಮಾಡುವಾಗ ಮಾತ್ರ ಸಾಮಾಜಿಕ ಅಂತರ ಇರಬೇಕು ಎಂದು ಹೇಳುವವರು, ಮಾತನಾಡುವಾಗ ಇವರಿಗೆ ಕಾಣಿಸಲಿಲ್ಲವೇ ಎಂಬುದು ವರ್ತಕರೆ ಮಾತನಾಡಿಕೊಳ್ಳುತ್ತಿದ್ದರು.
ಇದೆ ವೇಳೆ ನಗರಸಭೆ ಅಧ್ಯಕ್ಷ ಮೋಹನ್, ಸದಸ್ಯರಾದ ಪ್ರಶಾಂತ್, ರಫೀಕ್, ವರ್ತಕರ ಸಂಘದ ಅಧ್ಯಕ್ಷ ಆನಂದ್, ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಇತರರು ಉಪಸ್ಥಿತರಿದ್ದರು.