ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶದ ವ್ಯಕ್ತವಾದ ಬಳಿಕ ಎತ್ತೆಚ್ಚಿಕೊಂಡ ಸಂಸದೆ ಸುಮಲತಾ

ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶದ ವ್ಯಕ್ತವಾದ ಬಳಿಕ ಸಂಸದೆ ಸುಮಲತಾ ಎತ್ತೆಚ್ಚಿಕೊಂಡು
ಕೋವಿಡ್ ಪರಿಸ್ಥಿತಿ ಕುರಿತು ಇಂದು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ‌.
ದಿನೇ ದಿನೇ ಕರೊನಾ ಸೋಂಕು ಉಲ್ಬಣಿಸುತ್ತಿದ್ದರೂ ಕಳೆದ ಮಾರ್ಚ್ 8 ರಂದು ಮಂಡ್ಯದಿಂದ ದೂರವಿರುವ ಸಂಸದೆ 54 ದಿನಗಳ  ಬಳಿಕ ಕಾಣಿಸಿಕೊಂಡಿದ್ದಾರೆ. ಮಂಡ್ಯಕ್ಕೆ ಬಾರದಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸ್ವಾಭಿಮಾನಿ ಸಂಸದೆ ಕಾಣಿಯಾಗಿದ್ದಾರೆ, ಸುಮಕ್ಕ ಎಲ್ಲಿದ್ದೀಯಾಕ್ಕ? ಎಂದು ಆಕ್ರೋಶ ವ್ಯಕ್ತವಾಗಿತ್ತು.

ಆಕ್ರೋಶ ವ್ಯಕ್ತವಾದ ತಕ್ಷಣ ಎಚ್ಚೆತ್ತ ಸುಮಲತಾ ಅಂಬರೀಷ್. ಮಂಡ್ಯಕ್ಕೆ ಬಾರದಿದ್ರೂ ವಿಡಿಯೋ ಸಂವಾದದ ಮೂಲಕ  ಕೋವಿಡ್ ಪರಿಸ್ಥಿತಿ ಅವಲೋಕನ ಮಾಡಲು ಮುಂದಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕಾರಿಗಳ ಜತೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳಲ್ಲಿರುವ ಅವರು, ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಲಿದ್ದಾರೆ.

Post a Comment

Previous Post Next Post