ಹಾಸನ ಮೇ.೦೪ ;- ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬುರುಡೆಮಕಿಯಲ್ಲ್ಕಿ ಕುಡಿಯುವ ನೀರಿಗೆ ಅಭಾವವಿದ್ದು, ತೋಟದಿಂದ ಹರಿದುಬರುವ ಮಳೆನೀರನ್ನೇ ಕುಡಿಯುತ್ತಿದ್ದ ಜನರಿಗೆ ನರೇಗಾ ಯೋಜನೆಯಡಿ ತೆರೆದ ಬಾವಿ ನಿರ್ಮಿಸಿಕೊಳ್ಳಲು ಸಹಕರಿಸಿದಂತಹ ತಾಲ್ಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ನರೇಗಾ ಇಂಜಿನಿಯರ್ ಸಚಿನ್ ಮತ್ತು ಪಿಡಿಒ ತೇಜಸ್ವಿನಿ ಆರ್ ಶೆಟ್ಟಿ ಮತ್ತು ತೆರೆದ ಬಾವಿಯನ್ನು ಉದ್ಘಾಟನೆ ಮಾಡಿದಂತ ದಕ್ಷ ಅಧಿಕಾರಿಯಾದ ಅವರಿಗೆ ಫಲಾನುಭವಿಗಳ ಪರವಾಗಿ ಮತ್ತು ಗ್ರಾಮಪಂಚಾಯತ್ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತೆರೆದ ಬಾವಿ ನಿರ್ಮಾಣದಿಂದಾಗಿ ಸುಮಾರು ಎಂಟು ಕುಟುಂಬಗಳು ಶುದ್ಧ ನೀರನ್ನು ಕುಡಿಯುವಂತೆ ಆಯ್ತು ಇದೇ ರೀತಿ ನೀರಿನ ಅಭಾವ ಇರುವ ಕಡೆ ತೆರೆದ ಬಾವಿ ನಿರ್ಮಿಸುವುದರಿಂದ ಎಲ್ಲರಿಗೂ ನೀರಿನ ಅಗತ್ಯತೆ ನಿವಾರಿಸಲು ಸಾಧ್ಯವಾಗುತ್ತದೆ, ಎಂದು ವನಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಆನಂದ್ ಅವರು ತಿಳಿಸಿದರು
Tags
ಹಾಸನ