ರಚಿತಾ ರಾಮ್ ಒಟ್ಟಿಗೆ ‘ಲವ್ ಮಿ or ಹೇಟ್ ಮಿ’ ಎಂದ ಡಾರ್ಲಿಂಗ್ ಕೃಷ್ಣ

ಬೆಂಗಳೂರು : ಗಾಂಧಿ ನಗರದಲ್ಲಿ ಕೇಳಿಬರುತ್ತಿದ್ದ ಡಾರ್ಲಿಂಗ್ ಕೃಷ್ಣ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನವುದಕ್ಕೆ ಈಗ ತೆರೆ ಬಿದ್ದಿದೆ. 




ಲವ್ ಮಾಕ್ಟೆಲ್ ಸಿನಿಮಾ ಬಳಿಕ ತಮ್ಮ ಪ್ರಿಯತಮೆ ಮಿಲನಾ ನಾಗರಾಜ ಜೊತೆ ಹಸೆಮಣೆ ಏರಿದ ಅವರು, ಮದುವೆ ನಂತರ ಲೈಫ್ ಏಂಜಾಯ್ ಮಾಡುತ್ತಿದ್ದಾರೆ. ಇದೀಗ ಮತ್ತೆ ಲವ್ ಮಾಕ್ ಟೆಲ್  ಸಕ್ಸಸ್ ಬಳಿಕ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಿನಿ ಪ್ರೇಮಿಗಳಲ್ಲಿ ಮೂಡಿತ್ತು.  


‘ಲವ್ ಮಿ or ಹೇಟ್ ಮಿ’

ಇದು ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾ ಟೈಟಲ್. ಈ ಚಿತ್ರದಲ್ಲಿ ಚೆಂದನವನದ ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರೆ. ಲಾಕ್ ಡೌನ್ ಮುಗಿದ ಮೇಲೆ ಸಿನಿಮಾ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ. ಈ ಚಿತ್ರದ ಶಿರ್ಷಿಕೆ ಗಮನಿಸುವುದಾದರೆ ಇದೊಂದು ಪಕ್ಕಾ ಲವ್ ಸ್ಟೋರಿ ಕಥೆ ಹೊಂದಿದೆ ಎನ್ನುವುದು ಸಿನಿರಸಿಕರ ಊಹೆಯಾಗಿದೆ.

Post a Comment

Previous Post Next Post