ಗೋಲ್ಡನ್ ಕ್ಯಾಂಟಿನ್ ನಲ್ಲಿ ಎಣ್ಣೆ ಖರೀದಿಗಾಗಿ ಮುಗಿ ಬಿದ್ದ ನಿವೃತ್ತ ಯೋಧರು

ಹಾಸನ: ನಗರದ ಕುವೆಂಪು ರಸ್ತೆ, ಕರ್ನಲ್ ಕರಿಯಪ್ಪ ಮೆಮೋರಿಯಲ್ ಪಾರ್ಕ್ ಬಳಿ ಇರುವ ಗೋಲ್ಡನ್ ಕ್ಯಾಂಟಿನ್ ನಲ್ಲಿ ಮದ್ಯ (ಎಣ್ಣೆ) ಕೊಂಡುಕೊಳ್ಳಲು ನಿವೃತ್ತ ಯೋಧರು ಮತ್ತು ಕುಟುಂಬದವರು ಬೆಳಿಗ್ಗೆ ಸುಮಾರು ೫ ಗಂಟೆಯಿAದಲೇ ಯಾವ ಸಾಮಾಜಿಕ ಅಂತರ ಇರದೆ ನೂಕು ನುಗ್ಗಲಿನಲ್ಲಿ ಸರದಿ ಸಾಲಿನಲ್ಲಿ ನಿಂತುಕೊAಡು ಖರೀದಿಗೆ ಮುಗಿಬಿದ್ದರು.


       ಕೊರೋನಾ ಮಹಾಮಾರಿ ಹರಡಿ ಪ್ರಪಂಚವೇ ಸಾವು-ನೋವಿನಲ್ಲಿ ಒಂದು ಕಡೆ ನರಳುತ್ತಿದ್ದರೇ, ನಿವೃತ್ತ ಯೋಧರು ಮಾತ್ರ ಕೊರೋನಾ ಎಂದರೆ ನಮಗೆ ಏನು ತಿಳಿದೆ ಇಲ್ಲ ಎಂಬAತೆ ಶುಕ್ರವಾರ ಬೆಳಿಗಿನ ಜಾವದಿಂದಲೇ ಸಾಮಾಜಿಕ ಅಂತರವಿಲ್ಲದೆ ಬಂದು ಸಾಲಿನಲ್ಲಿ ನಿಂತಿದ್ದರೇ ಇನ್ನು ಕೆಲವರಂತು ಗುಂಪಾಗಿ ಇದ್ದರು. ಮದ್ಯ ಕೊಂಡುಕೊಳ್ಳಲು ಮುಗಿ ಬಿದ್ದ ನಿವೃತ್ತ ಯೋಧರು ಈ ವೇಳೆ ಸಾಮಾಜಿಕ ಅಂತರವನ್ನೆ ಮರೆತಿದ್ದರು. ಯೋಧರಾಗಿ ಕೆಲಸ ಮಾಡಿ ನಿವೃತ್ತಗೊಂಡವರಿಗೆ ಮದ್ಯವನ್ನು ಕಡಿಮೆ ಬೆಲೆಗೆ ಕೊಡಲಾಗುತ್ತದೆ. ಕ್ಯಾಂಪ್ ನವರು ಟೋಕನ್ ಕೊಡಲು ಬಂದಾಗAತು ನೂಕು ನುಗ್ಗಲಿನಲ್ಲಿ ಮುಂದಾಗುತ್ತಿದ್ದರು. ಸಾಲಿನಲ್ಲಿ ಯುವಕರು, ವಯಸ್ಸಾದ ವೃದ್ಧಾರು ಕೂಡ ಇದ್ದರೂ ಕೊರೋನಾ ಸೋಂಕು ಹರಡುವ ಬಗ್ಗೆ ಸಲ್ಪ ಪ್ರಜ್ಞೆ ಇಲ್ಲದಂತೆ ಒಟ್ಟಿಗೆ ಸಾಲಿನಲ್ಲಿ ನಿಂತಿದ್ರು, ಇನ್ನು ಇವರ ವಾಹನಗಳನ್ನು ರಸ್ತೆ ಉದ್ದಕ್ಕೂ ನಿಲ್ಲಿಸಿದ್ದರಿಂದ ಅಲ್ಲಿನ ನಿವಾಸಿಗಳು ಮನೆಯಿಂದ ಹೊರಗೆ ಬರುವಾಗಿರಲಿಲ್ಲ. ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಬಗ್ಗೆ ಪತ್ರಕರ್ತರಿಗೆ ಮೊಬೈಲ್ ಮೂಲಕ ಕರೆ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಹೋದಾಗ ಕೆಲ ನಿವೃತ್ತ ಯೋಧರು ಸುದ್ದಿ ಮಾಡದಂತೆ ಒತ್ತಡ ಏರಿದರು. ಇವರಲ್ಲಿ ಕೆಲವರು ಪತ್ರಕರ್ತರನ್ನು ಏಕವಚನದಲ್ಲೆ ಮಾತನಾಡಿಸಿ ಅವಜಾ ಹಾಕಿದರು. ಉಳಿದವರು ಸುದ್ದಿ ಮಾಡುವ ಮೂಲಕವಾದರೂ ಕೊರೋನಾ ಜಾಗೃತಿ ಮೂಡಿಸಿ ಎಂದು ಸಹಕರಿಸಿದರು. ದೇಶದ ಗಡಿ ಕಾಯುವಾಗ ಎದುರಾಳಿ ದೇಶಕ್ಕೆ ಸದೆ ಬಡಿಯುವ ಯೋಧರು ಎಂದರೇ ಪ್ರತಿಯೊಬ್ಬ ನಾಗರೀಕನು ಗೌರವ ಕೊಡುತ್ತಾನೆ. ಇಷ್ಟೆ ಅಲ್ಲ, ಶಿಸ್ತು ಬದ್ಧತೆ ಎಂದರೆ ಯೋಧರು. ಆದರೇ ಇಲ್ಲಿ ಯಾವ ಶಿಸ್ತು ಇದ್ದಂತೆ ಕಾಣಲಿಲ್ಲ. ಅಶಿಸ್ತು ಪಾಲಿಸುವುದೇ ಹೆಚ್ಚಾಗಿತ್ತು ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.


Post a Comment

Previous Post Next Post