ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು ತಿರುಗಾಡಬೇಕು : ವೈ.ಎಂ. ರೇಣುಕುಮಾರ್

ರಾಮನಾಥಪುರ;- ಪಟ್ಟಣದಲ್ಲಿ ಸರಕಾರ ನಿಗದಿಪಡಿಸಿರುವ ಸಮಯಕ್ಕೆ ಮಾತ್ರ ಅಗತ್ಯ ವಸ್ತುಗಳಾದ ಹಣ್ಣು-ತರಕಾರಿ ಹಾಲು, ಹೂವು, ದಿನಸಿ, ಹಾಗೂ ಕಟ್ಟಡ ಕಾಮಗಾರಿಗಳಿಗೆ ಬೇಕಾಗುವ ವಸ್ತುಗಳ ಅಂಗಡಿಗಳು ಮೆಡಿಕಲ್ ಸ್ಟೋರ್‌ಗಳನ್ನು ಹೊರತುಪಡಿಸಿ, ಬೇರೆ ಯಾವುದೇ ವ್ಯಾಪಾರಕ್ಕೆ ಅವಕಾಶವಿಲ್ಲ. ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ವಾಹನಗಳಿಗೆ ವಿನಾಯಿತಿ ಇದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಹಾಕಿಕೊಂಡು ತಿರುಗಾಡಬೇಕು ಎಂದು ತಹಸಿಲ್ದಾರ್ ವೈ.ಎಂ. ರೇಣುಕುಮಾರ್ ತಿಳಿಸಿದರು.


ರಾಮನಾಥಪುರ ಐ.ಬಿ. ಯಲ್ಲಿ ಮಾತನಾಡಿದ ಅವರು ಮಧ್ಯಾಹ್ನ ೨ ಗಂಟೆಯವರೆಗೆ ಬ್ಯಾಂಕಿನ ವಹಿವಾಟು ಇರುವುದರಿಂದ ಖಾತೆದಾರರ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು.  ಅಧಿಕಾರಿಗಳು ಯಾರಾದರೂ ಕೇಳಿದರೆ ಪಾಸ್ ಬುಕ್ ತೋರಿಸುವುದು ಕಡ್ಡಾಯ. ಅನ್ಯಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಅಂತರವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸಿಲ್ದಾರ್ ವೈ.ಐ. ರೇಣುಕುಮಾರ್ ತಿಳಿಸಿದರು. 

ಗಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ.

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿಜಯಕುಮಾರ್ ಅವರ ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಬಸವೇಶ್ವರ ವೃತ್ತದಲ್ಲಿ ವ್ಯಾಪಾರಸ್ಥರು ತರಕಾರಿ ಮುಂತಾದ ಅಂಗಡಿ ಹಾಕಲು ಮುಂದಾದಾಗ ಗ್ರಾ.ಪಂ ನವರು ತಡೆದು ತರಕಾರಿ ಅಂಗಡಿಗಳಲ್ಲಿ ಮಾತ್ರ ೧೦ ಗಂಟೆಯವರೆಗೆ ವ್ಯಾಪಾರ ಮಾಡಿಕೊಳ್ಳಿ ಎಂದು ಸೂಚಿಸಿ ಅಲ್ಲಿಂದ ತೆರವುಗೊಳಿಸಿದರು. ಕೊರೋನಾ ಸೋಕು ಮಿತಿ ಮೀರಿದ್ದರೂ ನಿರ್ಲಕ್ಷö್ಯದೊಂದಿಗೆ ಕಿಕ್ಕಿರಿದು ಸೇರಿದ ಜನತೆ, ಅಗತ್ಯ ದಿನಬಳಕೆ ವಸ್ತುಗಳ ಖರೀದಿಗೆ ಮುಂದಾದರು. ಗ್ರಾ.ಪಂ ಅಧಿಕಾರಿಗಳು ಎಷ್ಟೇ ಕಠಿಣ ಕ್ರಮ ಜರುಗಿಸಿದರೂ ಜಗ್ಗದ ಕೆಲವು ಜನತೆ ಗುಂಪು ಗೂಡಿ ವ್ಯಾಪಾರ ವಹಿವಾಟು ನಡೆಸಿದರು. 

ಬೆಳಿಗ್ಗೆ ೧೦ ಗಂಟೆ ನಂತರ ಬೀದಿಗಿಳಿದ ಪಿಎಸ್‌ಐ ಅಜಯ್‌ಕುಮಾರ್ ಮತ್ತು ಸಿಬ್ಬಂದಿ ಸಾರ್ವಜನಿಕರನ್ನು ಎಚ್ಚರಿಸಿ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ, ಅಂಗಡಿ ತೆಗೆದಿರುವವರಿಗೆ ದಂಡ ವಿಧಿಸಲಾಗುವುದು. ನಾಳೆಯಿಂದ ಯಾರೇ ಆದರೂ ೧೦ ಗಂಟೆಯ ನಂತರ ಅಂಗಡಿ ತೆಗೆಯುವುದಾಗಲೀ, ಅನಗತ್ಯವಾಗಿ ಓಡಾಡುವುದಾಗಲೀ ಕಂಡುಬAದರೆ ಅಂತಹವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.


Post a Comment

Previous Post Next Post