ಕಣ್ಮನ ಸೆಳೆಯುವ ಬಳ್ಳಿಗಾವೆಯ ಕೇದಾರೇಶ್ವರ ಗುಡಿಯನ್ನು ಸುತ್ತೋಣ ಬನ್ನಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ ಹಾಗು ಕಾಮೆಂಟ್ ಮಾಡುವುದಕ್ಕೆ ಮರೆಯದಿರಿ.
ಸ್ಥಳದ ಕುರಿತು ಕಿರು ಪರಿಚಯ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಮೀಪವಿರುವ ಬಳ್ಳಿಗಾವೆ ಹೊಯ್ಸಳ ಕಾಲದ ವಾಸ್ತುಶಿಲ್ಪಕ್ಕೆ ಹೆಸರು ವಾಸಿಯಾಗಿರುವ ಸ್ಥಳವಾಗಿದೆ. ಇಲ್ಲಿರುವ ಜಗದ್ವಿಖ್ಯಾತ ಕೇದಾರೇಶ್ವರ ದೇಗುಲ ತನ್ನ ವಿಶಿಷ್ಟ ಸೊಬಗಿನಿಂದಲೇ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ದೇಗುಲದ ನಿರ್ಮಾಣವನ್ನು ಇತಿಹಾಸಕಾರರು ಕಲ್ಯಾಣಿ ಚಾಲುಕ್ಯರ ಆಡಳಿತದ ಕೊನೆಯ ಘಟ್ಟದಲ್ಲಾಗಿರಬಹುದು ಎಂದು ಅಂದಾಜಿಸಿದ್ದಾರೆ. ಹನ್ನೊಂದನೇ ಶತಮಾನದವರೆಗೂ ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದ ಕರ್ನಾಟಕದ ಹೆಮ್ಮೆಯ ಹೊಯ್ಸಳ ಅರಸರು ಈ ದೇಗುಲ ನಿರ್ಮಾಣ ಮಾಡಿಸಿದ್ದಾರೆ. ಅನಂತರ ಬಂದ ವಿಶ್ವ ವಿಖ್ಯಾತ ಹೊಯ್ಸಳ ಅರಸ ವಿಷ್ಣುವರ್ಧನನ ಕಾಲದಲ್ಲಿ ಹೊಯ್ಸಳರು ಕಲ್ಯಾಣಿ ಚಾಲುಕ್ಯರ ಸಾಮಂತಿಕೆಯಿಂದ ಹೊರ ಬಂದು ಸ್ವತಂತ್ರರಾಗಿ ಆಡಳಿತ ನಡೆಸಲು ಆರಂಭ ಮಾಡುತ್ತಾರೆ. ಅನಂತರ ಈ ದೇಗುಲಕ್ಕೆ ಅನೇಕ ಮಾರ್ಪಾಡುಗಳನ್ನು ಮಾಡಲಾಯಿತು ಎನ್ನುವುದಕ್ಕೆ ಶಾಸನಾಧಾರಗಳು ದೊರಕಿವೆ.
ಇದೀಗ ಹೊಯ್ಸಳ ವಾಸ್ತುಶಿಲ್ಪವನ್ನು ಹೊದ್ದು ಮೆರೆಯುತ್ತಿರುವ ಈ ಕೇದಾರೇಶ್ವರ ದೇಗುಲ ಕರ್ನಾಟಕಕ್ಕೆ ಹೊಯ್ಸಳರು ಕೊಟ್ಟ ಅಪೂರ್ವ ಕೊಡುಗೆಗಳಲ್ಲಿ ಪ್ರಮುಖವಾದದ್ದು. ನೀವು ಮತ್ತೊಮ್ಮೆ ಶಿಕಾರಿಪುರದ ಕಡೆಗೆ ಹೋದಾಗ ಹೊಯ್ಸಳರ ಈ ಅಮೋಘ ನಿರ್ಮಾಣವನ್ನು ಕಣ್ತುಂಬಿಕೊಂಡು ಕೇದಾರೇಶ್ವರನ ಕೃಪೆಗೆ ಪಾತ್ರರಾಗುವುದನ್ನು ಮರೆಯಬೇಡಿ.
Tags
ಪ್ರವಾಸ