ಶಾಸಕ ಲಿಂಗೇಶ್ ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ

 



ಬೇಲೂರು: ಬೇಲೂರು ತಾಲ್ಲೂಕು ಶಾಸಕರಾದ ಶ್ರೀಯುತ ಲಿಂಗೇಶ್‌ರವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್‌ ಮತ್ತು ಇತರ ರೋಗಿಗಳ ಚಿಕಿತ್ಸೆ ಮತ್ತು ವ್ಯಾಕ್ಸಿನೇಶನ್‌ ಬಗ್ಗೆ ಪರಿಶೀಲಿಸಿ, ಆಸ್ಪತ್ರೆ ಸಿಬ್ಬಂಧಿಗಳ ಸುರಕ್ಷತೆ ಮತ್ತು ಕುಂದು ಕೊರತೆ ಸಮಸ್ಯೆಗಳನ್ನು ಆಲಿಸಿದರು. ಹೆಚ್ಚುತ್ತಿರುವ ರೋಗಿಗಳಿಗೆ ಹೋಂ ಐಸೋಲೇಷನ್‌ ಕಿಟ್‌ ಔಷಧ ಸರಬರಾಜಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿ, ತಮ್ಮ ವೈಯಕ್ತಿಕ 5000 ಹಣವನ್ನು ವೈದ್ಯಾಧಿಕಾರಿಗಳ ಕೈಗೆಕೊಟ್ಟು ತೀರಾ ಬಡರೋಗಿಗಳಿಗೆ ಔಷಧಗಳು ಬೇಕಾದಲ್ಲಿ ತರಿಸಿಕೊಡಲು ಹೇಳಿ ಮಾನವೀಯತೆ ತೋರಿದರು. ಎಲ್ಲಾ ಸಮಸ್ಯೆಗಳನ್ನು ಸಮಾಧಾನವಾಗಿ ಆಲಿಸಿ ಸಿಬ್ಬಂಧಿಗಳಿಗೆ ನೀವು ಮೊದಲು ಸುರಕ್ಷಿತವಾಗಿರಿ, ಎಚ್ಚರಿಕೆಯಿಂದ ಧೈರ್ಯವಾಗಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.ಡಾ ಶಾಲಿನಿ , ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.

Post a Comment

Previous Post Next Post