ಪಟ್ಟಣದ ಬಂಟೇನಹಳ್ಳಿ ಬಳಿ ಇರುವ ಗುಡಿಸಲಲ್ಲಿ ವಾಸವಿರುವ ೨೫ ಕೂಲಿ ಕರ‍್ಮೀಕರ ಕುಟುಂಬಕ್ಕೆ ಆಹಾರದ ಕಿಟ್ ವಿತರಿಸಿ ಮಾತನಾಡಿದ ಕರವೇ ಅಧ್ಯಕ್ಷ ವಿ ಎಸ್ ಭೋಜೇಗೌಡ ಈಗಾಗಲೇ ಕೋವೀಡ್ ಎರಡನೇ ಮಹಾಮಾರಿ ಇಂದ ಇಡೀ ರಾಜ್ಯವೇ ತತ್ತರಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ರ‍್ಕಾರ ಬಡರ‍್ಗದವರು ಹಾಗೂ ಮದ್ಯಮ ರ‍್ಗದವರಿಗೆ ಸಹಾಯ ಹಸ್ತ ಘೋಷಣೆ ಮಾಡಿದ್ದು ಅದು ಉಳ್ಳವರ ಪಾಲಗಿದೆ.ಹಾಗೆಯೇ ಇಂತಹ ನೂರಾರು ಕೂಲಿ ಕರ‍್ಮೀಕರ ಕುಟುಂಬಗಳು ಹಸಿವಿನಿಂದ ತತ್ತರಿಸುತ್ತಿರುವ ಹಿನ್ನಲೆಯಲ್ಲಿ ಇಂತವರನ್ನು ಗುರುತಿಸಿ ರ‍್ಕಾರದ ಸವಲತ್ತುಗಳನ್ನು ನೀಡುವಙತಹ ಕೆಲಸ ಆಗಬೇಕಿದೆ.ಇಂದು ಎಷ್ಟೋ ಶ್ರೀಮಂತರು ನಮ್ಮಲ್ಲಿದ್ದು ಅವರ ಆದಾಯದಲ್ಲಿ ಒಂದು ಪಾಲು ಇವರಿಗೆ ಧಾನ ರ‍್ಮ ನೀಡುವುದರ ಮೂಲಕ ಮಾನವೀಯತೆ ಮೆರೆಯಬೇಕು.
ಸಂಘಟನೆ ಎಂದ ಮಾತ್ರಕ್ಕೆ ಹೋರಾಟಕ್ಕೆ ಸೀಮಿತವಾಗದೆ ಜನಪರ ಕೆಲಸಗಳಿಗೆ ಒಗ್ಗೂಡಿ ಕೆಲಸ ಮಾಡಿದಾಗ ಸಂಘಟನೆಗೆ ರ‍್ಥ ಬರುತ್ತದೆ ಎಂದರು.
ನಂತರ ಮಾತನಾಡಿದ ಕರ‍್ಯರ‍್ಶಿ ಅರುಣ್ ಸಿಂಗ್ ನಮ್ಮ ಸಂಘಟನೆಯ ವತಿಯಿಂದ ಕೋವೀಡ್ ಸಮಯದಲ್ಲಿ ಕೆಲಸ ಮಾಡುತ್ತಿದ್ದು ನಮಗೆ ಅಧ್ಯಕ್ಷರ ಆದೇಶದ ಮೇರೆಗೆ ಕೂಲಿ ಕರ‍್ಮೀಕರು ಹಾಗೂ ನರ‍್ಗತಿಕರಿಗೆ ಆಹಾರದ ಕಿಟ್ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು ಮುಂದೆ ನಮ್ಮ ಸಂಘಟನೆಯಿಂದ ಸಮಾಜಮುಖಿ ಕೆಲಸ ಮಾಡುತ್ತೀವೆ.ಎಲ್ಲರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದರು.
ಈ ಸಂರ‍್ಭದಲ್ಲಿ ಕರವೇ ಯುವ ಮುಖಂಡರಾದ ಚಂದನ್,ರವಿ,ವಿಜಯ್,ವಿನಯ್ ,ಪುರುಷೊತ್ತಮ್, ದಿಲೀಪ್,ಗವೀಶ್ ಇದ್ದರು.
