ಈ ಸಭೆಯನ್ನು ಕುರಿತು ತಾಲ್ಲೂಕು ಆರೋಗ್ಯಾಧಿಕಾರಿ ತಿಮ್ಮಯ್ಯ ಮಾತನಾಡಿ ಕೋವಿಂದ್ ಹತ್ತೊಂಬತ್ತು ಕ್ಕೆ ಸಂಬಂಧಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬಹುದು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ರ‍್ಕಾರದ ಆದೇಶದಂತೆ ವಾರದಲ್ಲಿ ೩ದಿವಸ ಮಾತ್ರ ಅಗತ್ಯ ಕೆಲಸವಿದ್ದಲ್ಲಿ ಮನೆಯಿಂದ ಹೊರಗೆ ಬರುವುದು , ಅನಗತ್ಯವಾಗಿ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳುವುದು, ಪಾಸಿಟಿವ್ ಇರುವ ವ್ಯಕ್ತಿಗಳ ಮನೆಗೆ ಸ್ಟಿಕ್ಕರ್ ಹಾಗೂ ಸೀಲ್ ಮಾಡುವುದು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದರು .
ಸಭೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಶಾ ಹಾಗೂ ಅಂಗನವಾಡಿ ಕರ‍್ಯರ‍್ತೆಯರಿಗೆ
ಮತ್ತು ಆರೋಗ್ಯ ಸಹಾಯಕಿಯರಿಗೆ ಮಾಸ್ಕ್, ಸ್ಯಾನಿಟೈಜರ್, ಬ್ಲೀಚಿಂಗ್ ಪೌಡರ್ ಪೆನಾಯಿಲ್ ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು .
ಈ ಸಭೆಯಲ್ಲಿ ಕಣತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ನಾಗರತ್ನ , ಸದಸ್ಯರುಗಳಾದ ಪೃಥ್ವಿ ರಾಮ್ ,ನಿಂಗಣ್ಣ ,ಪದ್ಮಾ ಜಗದೀಶ್ ,ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಟರಾಜು, ನೋಡಲ್ ಅಧಿಕಾರಿಯಾದ ಶ್ರೀ ಕರ‍್ತಿ ಕುಮಾರ್ ಹಾಜರಿದ್ದರು .
