ಹಾಸನ: ದಿನೆ ದಿನೆ ಕೊರೋನಾ ಪಾಸಿಟಿವ್ ಹೆಚ್ಚಾಗುತ್ತಿರುವುದರಿಂದ ಚಿಕಿತ್ಸೆ ನೀಡಲು ಕೇವಲ ಫಿಜಿಶಿಯನ್ ಅಥವಾ ಶ್ವಾಶಕೋಶ ತಜ್ಞರನ್ನೇ ಅವಲಂಬಿತವಾಗುವುದು ಸಮಯೋಚಿತವಲ್ಲ. ಎಂಬಿಬಿಎಸ್ ವೈದ್ಯರು ಚಿಕಿತ್ಸೆ ನೀಡಬಹುದು ಎಂಬ ಆದೇಶವನ್ನು ಸರಕಾರ ಹೊರಡಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದಿAದ ಅಧ್ಯಕ್ಷರಾದ ಡಾ. ಎನ್. ರಮೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ರವರಿಗೆ ಮನವಿ ಸಲ್ಲಿಸಲಾಯಿತು.
ಕೊರೋನ ಬಾಧಿತರ ಸಂಖ್ಯೆ ತೀವ್ರವಾಗಿ ಹಳ್ಳಿಹಳ್ಳಿಗಳಲ್ಲೂ ಹೆಚ್ಚುತ್ತಿರುವ ವೇಳೆ ಫಿಜಿಶಿಯನ್ ಅಥವಾ ತಜ್ಞ ವೈದ್ಯರ ಕೊರತೆ ಎಂಬ ಕೊರತೆಯನ್ನು ಕಾಣುತ್ತಿದ್ದೇವೆ. ಕೊರೋನಾ ವಿಶ್ವವ್ಯಾಪಿ ಹರಡಿರುವ ಈ ಸಂದರ್ಭದಲ್ಲಿ ಇಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಕೇವಲ ಫಿಜಿಶಿಯನ್ ಅಥವಾ ಶ್ವಾಶಕೋಶ ತಜ್ಞರನ್ನೇ ಅವಲಂಬಿತವಾಗುವುದು ಸಮಯೋಚಿತವಲ್ಲ. ಎಂಬಿಬಿಎಸ್ ವೈದ್ಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬುವಾಗಿದ್ದಾರೆ ಎಂಬುದನ್ನು ಮರೆಯಬಾರದು. ಕೊರೊನಾ ಚಿಕಿತ್ಸೆಯ ಮಾರ್ಗ ಸೂತ್ರಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತವಾಗಿ ಪರಮರ್ಷಿಸಿ ಕಾಲಕಾಲಕ್ಕೆ ಚಿಕಿತ್ಸಾ ವಿಧಾನಗಳನ್ನು ನೀಡುತ್ತಿದೆಯಷ್ಟೇ. ಇದರ ಆಧಾರದ ಮೇಲೆಯೇ ಎಂಬಿಬಿಎಸ್ ಪದವಿ ಹೊಂದಿರುವ ಯಾವುದೇ ವೈದ್ಯರು ಪೂರ್ಣಪ್ರಮಾಣದ ಕರೋನ ಚಿಕಿತ್ಸೆ ನೀಡಬಹುದು ಎಂಬ ಆದೇಶವನ್ನು ಸರಕಾರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಭಾರತದಂತಹ ೧೩೦ ಕೋಟಿ ಜನಸಂಖ್ಯೆಯ ಇರುವ ದೇಶದಲ್ಲಿ ಪ್ರತಿಯೊಂದು ಕಾಯಿಲೆಗೂ ತಜ್ಞ ವೈದ್ಯರುಗಳೇ ಚಿಕಿತ್ಸೆ ನೀಡಬೇಕು ಎನ್ನುವುದು ಸಮಂಜಸವಲ್ಲ. ಅದರಲ್ಲೂ ಸಾರ್ವತ್ರಿಕವಾಗಿರುವ ಸಾಂಕ್ರಾಮಿಕ ಕಾಯಿಲೆಯ ಪೀಡಿತವಾದ ಸಂದರ್ಭದಲ್ಲಿ ಅದು ಕಾರ್ಯಸಾಧುವೂ ಅಲ್ಲ.(ತಜ್ಞ ವೈದ್ಯರುಗಳು ಹಾಗೂ ಉಪ ತಜ್ಞ ವೈದ್ಯರುಗಳು ಎಂಬ ಪಾಶ್ಚಿಮಾತ್ಯ ದೇಶಗಳ ಕಲ್ಪನೆ ಭಾರತದಲ್ಲಿ ಅಳವಡಿಸಿಕೊಂಡಿರುವುದು ನಿಜವಾದ ಉಪಯೋಗ ವಾಗಿರುವುದು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಎಂದು ವಿಶೇಷವಾಗಿ ಈ ಸಂದರ್ಭದಲ್ಲಿ ಹೇಳಬೇಕಾಗಿಲ್ಲ). ಎಂಬಿಬಿಎಸ್ ಪದವಿ ಇರುವ ವೈದ್ಯರು ಸಹ ಪೂರ್ಣ ಪ್ರಮಾಣದ ಕೊರೋನ ಚಿಕಿತ್ಸೆಯನ್ನು ನೀಡಬಹುದು (ಸರ್ಕಾರಗಳು ಕಾಲಕಾಲಕ್ಕೆ ತಕ್ಕಂತೆ ನೀಡುವ ಮಾರ್ಗದರ್ಶನ ಹಾಗೂ ಸೂತ್ರಗಳಂತೆ) ಎಂಬ ಆದೇಶವನ್ನು ತುರ್ತಾಗಿ ಜಾರಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ಹಾಗೂ ವೈದ್ಯ ಸಿಬ್ಬಂದಿಗಳ ಕೊರತೆಯನ್ನು ತನ್ಮೂಲಕ ನೀಗಿಸಬಹುದು ಎಂದು ಸಲಹೆ ನೀಡಿದರು. ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಎಂಬಿಬಿಎಸ್ ಪದವಿ ಹೊಂದಿದ ವೈದ್ಯರುಗಳ ಮನೋಸ್ಥೆöÊರ್ಯವನ್ನು ಕೂಡ ಹೆಚ್ಚಿಸಬಹುದು. ಸಂದರ್ಭಕ್ಕೆ ತಕ್ಕಂತೆ ವೈದ್ಯರುಗಳಿಗೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನಗಳನ್ನು ಆರೋಗ್ಯ ಸಚಿವಾಲಯದ ಮೂಲಕ ನೀಡಬಹುದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.
