೧೦೦ ಜನರಿಗೆ ತಿಂಡಿ ನೀಡಿದ ಭಾರತ್ ಸ್ಕೌಟ್ ಮತ್ತು ಗೈಡ್

ಹಾಸನ: ಭಾರತ್ ಸ್ಕೌಟ್ ಮತ್ತು ಗೈಡ್ ಹಾಸನ ಜಿಲ್ಲಾ ಸಂಸ್ಥೆಯ ವತಿಯಿಂದ ಕಳೆದ ಮೂರು ದಿವಸದಿಂದ ಬೆಳಗಿನ ಸಮಯದಲ್ಲಿ ಜಿಲ್ಲಾ ಸ್ಕೌಟ್ ಭವನ ಮುಂಭಾಗ, ರೈಲ್ವೆ ಸ್ಟೇಷನ್ ಮುಂಬಾಗ, ಹಾಗೂ ಬಸ್ಸು ನಿಲ್ದಾಣದ ಹತ್ತಿರ ೧೦೦ ಜನ ಬಡವರಿಗೆ ತಿಂಡಿ ಪ್ಯಾಕೇಟ್ ವಿತರಣೆ ಮಾಡಲಾಯಿತು.


      ಜಿಲ್ಲಾ ಆಯುಕ್ತರಾದ ಪ್ರಕಾಶ್ ಎಸ್. ಯಾಜಿ ಇವರ ಸಂಯುಕ್ತಾಶ್ರಯದಲ್ಲಿ ತಿಂಡಿಯ ೧೦೦ ಪ್ಯಾಕೆಟನ್ನು

ವ್ಯವಸ್ಥೆ ಮಾಡಿದ್ದರು. ನಿರ್ಗತಿಕರು, ಬಡವರು, ವೃದ್ಧರು, ಕೂಲಿ ಕಾರ್ಮಿಕರನ್ನು ಗುರುತಿಸಿ ತಿಂಡಿ ನೀಡಿದರು. 

      ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಆಯುಕ್ತರು ಡಾಕ್ಟರ್ ವೈ.ಎಸ್. ವೀರಭದ್ರಪ್ಪ, ಹಾಗೂ ಜಿಲ್ಲಾ ಸಂಘಟಕರು ಪ್ರಿಯಾಂಕ ಹಾಗೂ ರೋವರ್ ಕೆ.ಆರ್. ಗಿರೀಶ್ ಇವರು ಉಪಸ್ಥಿತರಿದ್ದರು.


Post a Comment

Previous Post Next Post