ಹಾಸನ: ಸೋಮವಾರದಿಂದ ೧೪ ದಿನಗಳ ಕಾಲ ರಾಜ್ಯ ಸಂಪೂರ್ಣ ಲಾಕ್ ಡೌನ್ ಜಾರಿಗೆ ತಂದಿದ್ದು, ಅಗತ್ಯ ವಸ್ತುಗಳ ಕೊಂಡುಕೊಳ್ಳಲು ಪ್ರತಿನಿತ್ಯ ಬೆಳಿಗ್ಗೆ ೬ ರಿಂದ ೧೦ರ ವರೆಗೂ ಅವಕಾಶ ಕೊಡಲಾಗಿದ್ದು, ಆದರೇ ಸಾರ್ವಜನಿಕರು ತಮ್ಮ ತಮ್ಮ ವಾಹನಗಳಲ್ಲೆ ಬಂದು ಹೋದರು.
ನಗರದ ಹೃದಯ ಭಾಗವಾದ ಹೇಮಾವತಿ ಪ್ರತಿಮೆ ಮುಂಬಾಗ ಇರುವ ನಗರ ಬಸ್ ನಿಲ್ದಾಣದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ತರಕಾರಿ ಇತರೆಯನ್ನು ವ್ಯಾಪಾರ ಮಾಡಲು ದ್ವೀಚಕ್ರ ಮತ್ತು ಕಾರುಗಳಲ್ಲಿ ಬಂದು ರಸ್ತೆ ಬದಿ ಉದ್ದಕ್ಕೂ ವಾಹನಗಳನ್ನು ಸಾಲಾಗಿ ನಿಲ್ಲಿಸಿರುವುದು ಕಂಡು ಬಂದಿತು. ಇನ್ನು ತರಕಾರಿ ವ್ಯಾಪಾರ ಮಾಡುವವರ ಗೋಳು ಕೇಳುವಾಗಿಲ್ಲ. ವ್ಯಾಪಾರವಿಲ್ಲದೇ ವಾಪಸ್ ಹೋಗಬೇಕಾಯಿತು. ಹತ್ತು ಗಂಟೆ ಆಗುವ ಅರ್ಧ ಗಂಟೆ ಮೊದಲೆ ವ್ಯಾಪಾರಸ್ತರು ತಮ್ಮ ಗಂಟು ಮೂಟೆ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ.
Tags
ಹಾಸನ