ಹಾಸನ: ಕೊರೋನಾ ಸೋಂಕು ತಗಲಿ ಜಿಲ್ಲೆಯಲ್ಲಿ ಜನ ಸಾಯುತ್ತಿದ್ದರೂ ಇದುವರೆಗೂ ಯಾವ ತಾಲೂಕಿಗೂ ಹಣ ಕೊಟ್ಟಿಲ್ಲ. ಅನೇಕ ಬಾರಿ ಕೇಳುವುದಕ್ಕೆ ನಾವು ಭಿಕ್ಷÄಕರಲ್ಲ. ಎಂದು ಆರೋಗ್ಯ ಸಚಿವರಿಗೆ ಪ್ರಶ್ನೆ ಮಾಡಿ ಸಭೆಯ ಅಜೆಂಡಾವನ್ನು ಸ್ಥಳದಲ್ಲಿಯೇ ಹರಿದು ಹಾಕಿ ಆಕ್ರೋಶವ್ಯಕ್ತಪಡಿಸಿದ ಹೆಚ್.ಡಿ. ರೇವಣ್ಣನವರು ಜಿಲ್ಲಾಧಿಕಾರಿಗಳು ಮಾತನಾಡಲು ಅವಕಾಶವೇ ಕೊಡದೆ ವಾಗ್ವಾದದಲ್ಲೆ ಸಭೆ ಪ್ರಾರಂಭವಾಯಿತು.
ನಗರದ ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಆರೋಗ್ಯ ಸಚಿವರಾದ ಕೆ. ಸುಧಾಕರ್ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಮತ್ತು ಕೊವೀಡ್ ನಿಯಂತ್ರಣ ಸಭೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಶಾಸಕರು ಹಾಗು ಸಂಸದರು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ ಸಭೆ ಇನ್ನೆನು ಪ್ರಾರಂಭವಾಗಬೇಕು ಅಷ್ಟರಲ್ಲಿ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣನವರು ಆಕ್ರೋಶದಲ್ಲೆ ಮಾತನಾಡಲು ಆರಂಭಿಸಿ, ಹಾಸನದಲ್ಲಿ ಜನ ಸಾಯುತ್ತಿದ್ದಾರೆ. ಕೊರೋನಾ ನಿಬಾಯಿಸಲು ಸರ್ಕಾರದಲ್ಲಿ ಹಣ ಇಲ್ಲ ಎಂದರೆ ಹೇಳಿ. ನಾವೇನು ಬಿಕಾರಿಗಳಲ್ಲ. ೭ ಕೋಟಿ ಹಣ ಕೊಟ್ಟು ೭ ರುಪಾಯಿ ಯಾವ ತಾಲ್ಲೂಕಿಗೂ ಕೊಟ್ಟಿಲ್ಲ. ನಾವು ಬಿಕ್ಷುಕರಲ್ಲ. ಎಂದು ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರೂ ಸಚಿವರನ್ನು ಪ್ರಶ್ನೆ ಮಾಡಿದಲ್ಲದೇ ಸಭೆಯ ಅಜೆಂಡಾ ಹರಿದು ಸಚಿವರ ಮುಂದೆ ಎಸೆದರು. ಈ ವೇಳೆ ಸಚಿವರುೆÃನು ಮಾತನಾಡದೇ ರೇವಣ್ಣನವರನ್ನು ಸಮಧಾನ ಮಾಡಿ ಜಿಲ್ಲಾಧಿಕಾರಿಗಳು ಮಾತನಾಡುವಂತೆ ಸೂಚಿಸಿದಾಗ ಶಾಸಕರು ಸಿಡಿಮಿಡಿಗೊಂಡರು.
ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಕೊರೋನಾ ಬಂದು ೩ ರಿಂದ ೪ ದಿನದಲ್ಲಿ ಸತ್ತುಹೊಗುತ್ತಿದ್ದಾರೆ. ೫ ರಿಂದ ೬ ಲಕ್ಷ ಹಣ ವಸೂಲಿ ಮಾಡುತ್ತಾರೆ. ಜಿಲ್ಲಾಧಿಕಾರಿಗಳು ನನ್ನ ಕ್ಷೇತ್ರಕ್ಕೆ ಒಂದು ರುಪಾಯಿ ಹಣ ನೀಡಿಲ್ಲ. ೨೨ ಜನ ವೈದ್ಯರು ಇದ್ದು, ೫೦ ಜನರಿಗೆ ಚಿಕಿತ್ಸೆ ನೀಡುತ್ತಿಲ್ಲ ಅವರಿಗೆ ಮಾಸ್ಕ್, ಗ್ಲೌಸ್ ಕೊಟ್ಟಿಲ್ಲ. ಅರಕಲಗೂಡು ಆಸ್ಪತ್ರೆಯಲ್ಲಿ ಕೆವಲ ೪ ಜನ ವೈಧ್ಯರು ಇದ್ದು ೮೦ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೈತರು ಬೆಳೆದ ತರಕಾರಿ ತರಲು ಪೊಲೀಸರು ತೊಂದರೆ ಕೊಟ್ಟರೆ ಅವರು ಎಲ್ಲಿ ಹೋಗಬೇಕು. ವ್ಯಾಕ್ಸಿನ್ ತೆಗೆದುಕೊಳ್ಳಲು ಮತ್ತು ಕೊರೋನಾ ತಪಾಸಣೆಗೆ ಬರುವರ ವಾಹನವನ್ನು ಬೆಳಿಗ್ಗೆ ೫ ಗಂಟೆಗೆ ಸೀಜ್ ಮಾಡಿದ್ದರೆ ಹಳ್ಳಿಯ ಜನ ಎನು ಮಾಡಬೇಕು ಎಂದು ಪ್ರಶ್ನೆ ಮಾಡಿದರು.
ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ರೈತರು ಗೊಬ್ಬರ ತರಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಕಾನೂನು ಬದಲಾವಣೆ ಮಾಡಿ ಇಲ್ಲವೇ ನೀವೆ ಕೃಷಿ ಮಾಡಿ. ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಟ್ಟು ಈಗ ಅವರನ್ನು ಕೂಡ ಪೊಲೀಸರು ಹಿಡಿದು ಒಳಗಾಕುತ್ತಿದ್ದಾರೆ. ಸಾರ್ವಜನಿಕರನ್ನು ದನ ಬಡಿದಂಗೆ ಪೊಲೀಸರು ಬಡಿಯುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಂದೆ ನಿಯಮ ಜಾರಿ ಮಾಡಿದರೇ ಕಷ್ಟವಾಗುತ್ತದೆ ಎಂದು ಸಭೆಯಲ್ಲಿ ಆಕ್ರೋಶವ್ಯಕ್ತಪಡಿಸಿದರು. ಎಲ್ಲಾವನ್ನು ಬೆಂಗಳೂರಿನಲ್ಲಿ ಮಾಡುವುದಾದರೇ ನಾನು ಧನ ಕಾಯಲು ಬಂದ್ದೇವಾ.. ಕೊಡಗು ಜಿಲ್ಲಾಧಿಕಾರಿಗಳು ವಾರದ ಎರಡು ದಿನಗಳ ಕಾಲ ದಿನ ಬಳಕೆ ವಸ್ತು ಪಡೆಯಲು ಅವಕಾಶ ಕಲ್ಪಿಸಿದ್ದಾರೆ. ನಿಮಗೆ ಇಲ್ಲಿ ಅಧಿಕಾರ ಇಲ್ಲವೇ ಎಂದು ಸಚಿವರನ್ನೇ ಪ್ರಶ್ನೆ ಮಾಡಿದರು.
ಆರೋಗ್ಯ ಸಚಿವರಾದ ಕೆ. ಸುಧಾಕರ್ ಶಾಸಕರ ಮಾತಿಗೆ ಉತ್ತರಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕಾನೂನು ಬದಲಾವಣೆಗೆ ಒತ್ತಾಯ ಮಾಡಿರುವ ಶಾಸಕರ ಮಾತಿಗೆ ಸಹಮತ ವ್ಯಕ್ತಪಡಿಸಿ, ಸಭೆ ಮುಗಿದ ಮೇಲೆ ಈ ದಿನ ಸಂಜೆ ಮುಖ್ಯಮಂತ್ರಿ ಜೊತೆ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಕಾನೂನು ಜಾರಿಗೆ ತರುವುದಾಗಿ ಭರವಸೆ ನೀಡಿದರು.
ಸಂಸದರಾದ ಪ್ರಜ್ವಲ್ ರೇವಣ್ಣನವರು ಮಾತನಾಡಿ, ಟಾಸ್ಕ್ ಪೊರ್ಸ ಕಮಿಟಿ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಕೊಟ್ಟಿರುವುದಿಲ್ಲ. ಶಾಸಕರನ್ನು ಮತ್ತು ಸಂಸದರನ್ನು ಟಾಸ್ಕ್ ಫೋರ್ಸ್ ಸಭೆಗೆ ಕರೆದಿಲ್ಲ. ಎಲ್ಲಾ ಜಿಲ್ಲಾಧಿಕಾರಿ ಮಾಡುತ್ತಾರೆ. ನಾವು ಸಚಿವರು ಬಂದಾಗ ಮಾತ್ರ ನಾವು ಸಭೆಯಲ್ಲಿ ಭಾಗವಹಿಸಿ ಮಾತನಾಡಬೇಕು ಎಂದು ದೂರಿದರು. ಹಾಸನ ಜಿಲ್ಲಾಧಿಕಾರಿ ಕಥೆ ಬರಿ ಹೇಳುತ್ತಾನೆ. ಅವನ ಕಥೆ ಕೇಳಲು ನಾವುಗಳು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟಕ್ಕೆ ಸುಮ್ಮನಾಗದ ಹೆಚ್.ಡಿ.ರೇವಣ್ಣನವರು ಜಿಲ್ಲಾಧಿಕಾರಿಗಳು ಮಾತನಾಡಲು ಬಿಡಲೆ ಇಲ್ಲ. ಏನಾದರೂ ಜಿಲ್ಲಾಧಿಕಾರಿಗಳಿಗೆ ಮಾತನಾಡಲು ಅವಕಾಶ ನೀಡಿದರೆ ಸಭೆಯಿಂದ ಹೊರಹೊಗುವುದಾಗಿ ಸಭೆಯಿಂದ ಹೆಚ್.ಡಿ. ರೇವಣ್ಣನವರು ಹೊರಟಾಗ ಸಂಸದರು ಮತ್ತು ಶಾಸಕರು ಮಾಜಿ ಸಚಿವರನ್ನು ಮನವೊಲಿಸಿದರು.
ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ ಮಾತನಾಡಿ, ಸರಕಾರಿ ಹಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ೧೫೫ ಜನರು ಎರಡನೆ ಅಲೆಯಿಂದ ಸಾವನಪ್ಪಿದ್ದಾರೆ. ಕೊರೊನಾ ಬಂದಾಗ ಪ್ರಾರಂಭದಲ್ಲೆ ಬಾರದೆ ಕೊನೆಯ ಹಂತದಲ್ಲಿ ನ್ಯೂಮ್ಯಾನಿಯ ಆದ ಮೇಲೆ ಚಿಕಿತ್ಸೆಗೆ ಆಗಮಿಸುವ ಬರುವ ಕಾರಣ ಮರಣದ ಪ್ರಮಾಣ ಹೆಚ್ಚಾಗಿದೆ ಎಂದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಮೆಡಿಸಿನ್ ಕೊರತೆ ಇದ್ದು, ರಾಜ್ಯ ಡ್ರಗ್ ಕ್ರಟೊಂಲ್ ನಿಂದ ಸರಬರಾಜು ಇರುವುದಿಲ್ಲ. ಎಸ್.ಡಿ.ಆರ್.ಎಫ್ ನಿಂದ ೧೦ ಲಕ್ಷದ ಮೆಡಿಸಿನ್ ಖರೀದಿ ಮಾಡಿದ್ದೆವೆ ಎಂದು ಮಾಹಿತಿ ನೀಡಿದರು.
ಸಂಸದರಾದ ಪ್ರಜ್ವಲ್ ರೇವಣ್ಣನವರು ಮಾತನಾಡಿ, ಕಳೆದ ವಾರದಲ್ಲಿ ೫ ಸಾವಿರ ಟೆಸ್ಟ್ ಮಾಡುತ್ತಿದ್ದರು. ಈಗ ಜಿಲ್ಲಾಡಳಿತ ೨೫೦೦ ಟೆಸ್ಟ್ ಮಾಡಿಸುತ್ತಿದೆ. ಸಭೆ ಅಜೆಂಡಾದಲ್ಲಿ ೬ ಸಾವಿರ ಟೆಸ್ಟ್ ಮಾಡುವುದಾಗಿ ಸುಳ್ಳು ಹೇಳಿ ಸಭೆಗೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರಾದ ಕೆ. ಸುಧಾಕರ್ ಮಾತನಾಡಿ, ಹಾಸನದಲ್ಲಿ ವೈದ್ಯಕೀಯ ಕಾಲೇಜು ಇದ್ದು, ೧೫೦ ಜನ ಅಂತಿಮ ವರ್ಷದ ಶ್ವಾಸಕೋಶ ವೈದ್ಯಕೀಯ ವಿಧ್ಯಾರ್ಥಿಗಳು ಇದ್ದಾರೆ. ಅವರಿಗೆ ೨೦ ಸಾವಿರ ಸ್ಟೆöÊಪೆಂಡ್ ನೀಡಿ ಕರ್ತವ್ಯಕ್ಕೆ ಬಳಸಿಕೊಳ್ಳಲು ಸೂಚಿಸಿದರು. ೧೫ ಸಾವಿರ ಸಕ್ರಿಯ ಪ್ರಕರಣ ಇವೆ ಪ್ರತಿ ೧೫೦ ಜನರಿಗೆ ಒಬ್ಬ ಶ್ವಾಸಕೋಶ ತಜ್ಞರು ನೇಮಿಸಲು ಸೂಚನೆ. ಪ್ರಾರಂಭದಲ್ಲಿ ಸಿಮ್ಟಮ್ಸ್ ಇರುವಾಗಲೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದರು. ಬೇರೆ ಜಿಲ್ಲೆಯಲ್ಲಿ ಹೆಚ್ಚು ಹಣ ಪಡೆದಿದ್ದಾರೆ. ಹಾಸನ ಜಿಲ್ಲಾಧಿಕಾರಿ ಹಣ ಪಡೆದುಕೊಂಡಿಲ್ಲ. ಮೈಸೂರು ಜಿಲ್ಲಾಧಿಕಾರಿ ೨೦ ಕೋಟಿ ಹಣ ಪಡೆದಿದ್ದಾರೆ. ಸರ್ಕಾರದಿಂದ ಜಿಲ್ಲಾಡಳಿತ ಪ್ರಸ್ತಾಪವನೆ ಕೇಳಿದಷ್ಟು ಹಣವನ್ನು ಸರ್ಕಾರ ನೀಡಿದೆ ಎಂದು ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಸಚಿವರು ಮಾತನಾಡಿದ ಮೇಲೆ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಹಾಸನ ಜಿಲ್ಲೆಗೆ ಅವಶ್ಯಕವಾಗಿ ಬೇಕಾಗಿರುವÀ ೧೦ ಕೋಟಿ ಹಣಕಾಸು ಪ್ರಸ್ತಾಪವನ್ನು ಈಗಲೆ ಸಲ್ಲಿಸುವುದಾಗಿ ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೊಪಾಲಯ್ಯ, ಜಿಲ್ಲಾ ಪಂಚಾಯತ್ ಮುಖ್ಯಕರ‍್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಲಿಂಗೇಶ್, ಪ್ರೀತಮ್ ಜೆ .ಗೌಡ, ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ ಇತರರು ಪಾಲ್ಗೊಂಡಿದ್ದರು.