ಹಾಸನ: ನಗರದ ಬಿ.ಎಂ. ರಸ್ತೆ, ಸುವರ್ಣ ಹೋಟೆಲ್ ಬಳಿ ಮಲಬಾರ್ ಚಾರಿಟಬಲ್ ಟ್ರಸ್ಟ್ ಸಹಕಾರದಲ್ಲಿ ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಮಿತಿವತಿಯಿಂದ ನೂರಾರು ಜನ ಬಡವರಿಗೆ ಪ್ರತಿನಿತ್ಯ ಉಪಯೋಗಿಸುವ ಆಹಾರದ ಕಿಟ್ ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಸಯ್ಯಾದ್ ಏಜಾಜ್ ಮತ್ತು ಮಲಬಾರ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜರ್ ದೀಪಕ್ ರವರು, ಕೊರೋನಾ ಆವರಿಸಿ ಲಾಕ್ ಡೌನ್ ಆದೇಶ ಇರುವುದರಿಂದ ಬಡವರು ಮತ್ತು ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಒಂದು ಹೊತ್ತು ಊಟ ಮಾಡುವುದಕ್ಕೂ ಸಮಸ್ಯೆ ಎದುರಿಸುವಂತಾಗಿದೆ. ಕೊರೋನಾ ಸೋಂಕಿನಿAದ ಇನ್ನು ಪ್ರತಿದಿನವು ಅದೇಷ್ಟೊ ಸಾವು-ನೋವುಗಳು ಸಂಭವಿಸುತ್ತಿದೆ. ಅನೇಕರ ಜನರಲ್ಲಿ ಇನ್ನು ಜಾಗೃತಿ ಮೂಡದೆ ಇಂತಹ ಅವಘಡಗಳು ನಡೆಯಲು ಕಾರಣವಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮಲ್ಬಾರ್ ಗೋಲ್ಡ್ ಸಹಕಾರದಲ್ಲಿ ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಮಿತಿಯಿಂದ ನೂರಾರು ಜನ ಬಡವರಿಗೆ ಅವಶ್ಯಕವಾಗಿರುವ ಆಹಾರದ ಕಿಟ್ ಗಳನ್ನು ವಿತರಣೆ ಮಾಡುತ್ತಿದೆ ಎಂದರು. ಜೊತೆಗೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರದಲ್ಲಿ ಇದ್ದು, ಅನವಶ್ಯಕವಾಗಿ ಹೊರಗೆ ಬಾರದಂತೆ ಅರಿವು ಕೂಡ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಾಮಾಜಿಕ ಅಂತರದಲ್ಲಿ ಆಹಾರದ ಕಿಟ್ ವಿತರಣೆ ಮಾಡಿ, ಇದೆ ವೇಳೆ ಕೊರೋನಾ ಬಗ್ಗೆ ಜಾಗೃತಿವಹಿಸಲು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜರ್ ದೀಪಕ್, ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಯ್ಯಾದ್ ಏಜಾಜ್, ರಾಹಿಲ್, ಜಗನ್ನಾಥ್, ಅಯಾಷ್, ಚಂದ್ರಿಕಾ, ಸಾದಿಕ್, ನವಾಜ್, ಬಕ್ಸಿ, ರೊಹನಾಕ್, ಮಂಜೂಳ ಇತರರು ಉಪಸ್ಥಿತರಿದ್ದರು,