ಹಾಸನ: ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾದ ಹೆಚ್.ಕೆ. ಮಹೇಶ್ ನೇತೃತ್ವದಲ್ಲಿ ಹಾಸನ ನಗರದ ೧೭ನೇ ವಾರ್ಡಿನ ಸುತ್ತ ಮುತ್ತ ಕೊರೋನಾ ವಿರುದ್ಧ ಹೋರಾಡುವ ಔಷಧಿಯನ್ನು ಸಿಂಪಡಿಸಲಾಯತು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದು ಪ್ರಪಂಚದಾಧ್ಯAತ ಕೊರೋನಾ ಎಂಬ ಮಹಾಮಾರಿ ವೈರಸ್ ಹರಡಿದೆ. ಹಾಸನ ಜಿಲ್ಲೆಯಲ್ಲೂ ಕೂಡ ಹೆಚ್ಚಾಗಿದ್ದು, ಪ್ರತಿನಿತ್ಯ ಸಾವು-ನೋವು ಕಂಡು ಬರುತ್ತಿದೆ. ಒಂದು ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದೆ, ೨೦ ರಿಂದ ೩೦ ಜನರು ಸಾವನಪ್ಪುತ್ತಿದ್ದಾರೆ. ನಿಯಂತ್ರಣಕ್ಕಾಗಿ ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳ ಬಗ್ಗೆ ಮಾತನಾಡಲಾಗಿದ್ದು, ಕೆಲ ವಿಚಾರದಲ್ಲಿ ಸ್ಪಂದಿಸಿದ್ದು, ಇನ್ನು ಕೆಲ ವಿಚಾರದಲ್ಲಿ ಸ್ಪಂದಿಸಿರುವುದಿಲ್ಲ ಎಂದರು. ಕಾಂಗ್ರೆಸ್ ಪಕ್ಷದವತಿಯಿಂದ ನಾವೆ ವಯಕ್ತಿಕವಾಗಿ ಮುಖಂಡರು ಮತ್ತು ಸಮಾಜಸೇವಕರಾದ ಅಶ್ರು ಆಸಿಫ್, ಆರೀಫ್ ಎಲ್ಲಾರು ಸೇರಿ ಮೂರು ಟ್ರಾö್ಯಕ್ಟರ್ ಪಡೆದು ಹಳ್ಳಿಗಳು ಮತ್ತು ನಗರದ ಪ್ರಮುಖ ಸ್ಥಳಗಳಲ್ಲಿ ಹೋಗಿ ಔಷಧಿ ಸಿಂಪಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಜೊತೆಗೆ ಮಾಸ್ಕ್ ವಿತರಣೆ ಮಾಡಿ ಅವರಿಗೆ ತಿಳುವಳಿಕೆಯನ್ನು ಹೇಳಲಾಗುತ್ತಿದೆ. ಸಮಾಜ ಸೇವಕರಾದ ಅಶ್ರು ಆಸೀಪ್ ರವರು ಒಂದು ಅಂಬ್ಯುಲೆನ್ಸ್ ನ್ನು ಕೂಡ ಸಾರ್ವಜನಿಕರ ಉಚಿತ ಸೇವೆಗೆ ಬಿಟ್ಟಿದ್ದಾರೆ ಮತ್ತು ಬಡವರಿಗೆ ಆಹಾರದ ಕಿಟ್ ಗಳನ್ನು ಕೂಡ ವಿತರಣೆ ಮಾಡಲಾಗಿದೆ. ಇಲ್ಲಿನ ಕ್ಷೇತ್ರದ ಶಾಸಕರು ನಾನು ಎಲ್ಲೊ ಊಟ, ಮಾತ್ರೆ ಕೊಡುತ್ತಿದ್ದೇನೆ ಎನ್ನುತ್ತಾರೆ ಆದರೇ ಸರಕಾರದವತಿಯಿಂದ ಕೆಲಸ ನಿರ್ವಹಿಸುವಲ್ಲಿ ವಿಫಲರಾಗಿದ್ದೀರಿ ಎಂಬುದು ಎಲ್ಲರಲ್ಲೂ ಭಾವನೆ ಇದೆ. ಕೊರೋನಾ ಇದೆ ಎಂದು ಹೇಳಿಕೊಂಡು ಹೆದರಿ ಬೆಂಗಳೂರಿನಲ್ಲಿ ಕೂರಬೇಡಿ. ಸಾರ್ವಜನಿಕವಾದ ಕೆಲಸವನ್ನು ಮಾಡಲು ಮುಂದಾಗಿ, ಹಣಹೊಂದಕ್ಕೆ ಮುಖ್ಯಕೊಡಬೇಡಿ ಎಂದು ಕೋರುತ್ತೇನೆ ಎಂದು ಇದೆ ವೇಳೆ ಸಲಹೆ ನೀಡಿದರು.
ಈಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಸ್ಲಾಂ ಪಾಷ, ಚಂದ್ರು ಇತರರು ಪಾಲ್ಗೊಂಡಿದ್ದರು