ವೈದ್ಯರ ನಡೆ ಹಳ್ಳಿಯ ಕಡೆ' ಅಭಿಯಾನಕ್ಕೆ ಚಾಲನೆ..

ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಹಮ್ಮಿಕೊಂಡಿರುವ 'ವೈದ್ಯರ ನಡೆ ಹಳ್ಳಿಯ ಕಡೆ' ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಇಂದು ಚಾಲನೆ ನೀಡಿದರು.



ನಗರದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಿಗೂ ಸಂಚರಿಸಲಿರುವ 49 ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ನಂತರ ಮಾತನಾಡಿದ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ಸೋಂಕನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು ಜಿಲ್ಲಾಡಳಿತದೊಂದಿಗೆ ಜನತೆಯು ಕೂಡ ಸಹಕರಿಸಬೇಕು ಎಂದರು.



    ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ,ಕೊರೋನಾ ನಿಯಂತ್ರಣ ಕುರಿತಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾಸಭೆ ನಡೆಸಿ ಕೋವಿಡ್ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡಲಾಯಿತು.
    ಈ ಸಂದರ್ಭದಲ್ಲಿ ಡಿ.ಸಿ ಗಿರೀಶ್, ಶಾಸಕ ಪ್ರೀತಮ್ ಗೌಡ, ಸಿ.ಇ .ಒ ಪರಮೇಶ್, ಡಿ.ಹೆಚ್.ಒ ಸತೀಶ್ ಸೇರಿದಂತೆ ಜಿಲ್ಲಾ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಆರ್ ಟಿ ಓ ಯಶ್ವಂತ್ ರವರು ಹಾಸದ ಮ್ಯಕ್ಸಿ ಕ್ಯಾಬ್ ಚಾಲಕರು ಮತ್ತು ಮಾಲಿಕರಿಗೆ ಕೋವಿಡ್ ಸಮಯದಲ್ಲಿ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದು ಅವರ ಕುಟುಂಬಗಳಿಗೆ ಸಹಾಯವಾಗಿ ಕ್ಯಾಬ್ಗಳನ್ನು ಪಡೆದಿದ್ದು ಸಂತೋಷವಾಗಿದೆ ಎಂದು ಕ್ಯಾಬ್ ಚಾಲಕರು ಹಾಗೂ ಮಾಲಿಕರು ದನ್ಯವಾದಗಳನ್ನು ತಿಳಿಸಿದ್ದಾರೆ.



Post a Comment

Previous Post Next Post