ಸಕಲೇಶಪುರ: ಕೊರೊನಾ ಸೋಂಕಿತರನ್ನು ಅಪರಾಧಿಗಳ ರೀತಿ ನಡೆಸಿಕೊಳ್ಳದೆ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್ ಹೇಳಿದರು.
, ಅಕ್ಕ ಪಕ್ಕದ ಮನೆಯಲ್ಲಿದ್ದವರಿಗೆ ಸೊಂಕು ದೃಢಪಟಿದೆ ಎಂದು ಗೊತ್ತಾದಾಗ ಅವರನ್ನು ತುಚ್ಛವಾಗಿ ಕಾಣುವುದು, ಮೊಬೈಲ್ ಫೋನ್ ಮೂಲಕವೂ ಸಹ ಮಾತನಾಡಿಸಿ ಆರೋಗ್ಯ ವಿಚಾರಿಸಿಕೊಳ್ಳದೆ, ಅವರ ಮೇಲೆ ದೂರು ಹೇಳುವಂತಹ ಬೆಳವಣಿಗೆಗಳೇ ಹೆಚ್ಚಾಗಿ ಕಂಡು ಬಂದಿದೆ. ಇದು ತಪ್ಪು, ಮನೆಯ ಮುಖ್ಯಸ್ಥರೇ ಸೋಂಕು ತಗುಲಿ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅಂತಹ ಮನೆಯವರಿಗೆ ಕೈಲಾದ ಸಹಾಯ ಮಾಡಿ ಎಂದರು.
ಸೋಂಕಿತರ ಪೋಟೋ, ವಿಡಿಯೋಗಳನ್ನು ಸೆರೆಹಿಡಿಯುವುದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ತಪ್ಪು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಇಡೀ ಜಗತ್ತಿಗೆ ವ್ಯಾಪಿಸಿದೆ.
ದೇಹದೊಳಗೆ ಸೋಂಕಿನ ಪರಿಣಾಮದಿಂದ ಮೃತಪಡುವುದಕ್ಕಿಂತಹ ಅವಮಾನ ಆಗುತ್ತದೆ ಎಂಬ ಭಾವನೆ ಮತ್ತು ಕೊರೊನಾ ಬಗ್ಗೆ ಹುಟ್ಟಿರುವ ಭಯಕ್ಕೆ ಹೆಚ್ಚು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ.
ಈ ಒಂದು ರೋಗದಿಂದ ಜನರ ಜೀವ ರಕ್ಷಣೆ ಮಾಡುವುದಕ್ಕೆ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ, ಪಂಚಾಯತ್‌ರಾಜ್, ಪುರಸಭೆ, ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಜನಪ್ರತಿನಿಧಿಗಳು ಸೇರಿದಂತೆ ಇನ್ನೂ ಹಲವರು 24X7 ಕರ್ತವ್ಯದಲ್ಲಿ ತೊಡಗಿದ್ದಾರೆ. ಈ ಒಂದು ಸಾಂಕ್ರಾಮಿಕ ರೋಗವನ್ನು ಹೊಗಲಾಡಿಸಲು, ಸಾರ್ವಜನಿಕರ ಸಂಪೂರ್ಣ ಸಹಕಾರ ಬೇಕು.
ಕಡ್ಡಾಯವಾಗಿ ಮಾಸ್ಕ್ ದರಿಸಿ, ಅಂತರ ಕಾಪಾಡಿ, ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ, ಸೋಂಕಿತ ಕುಟುಂಬಗಳಿಗೆ ಧೈರ್ಯ ತುಂಬಿ, ಅಕ್ಕ ಪಕ್ಕದಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸಹಕರಿಸಿ, ಅನಗತ್ಯವಾಗಿ ಅಡ್ಡಾಡುವವರು, ನಿಯಮ ಉಲ್ಲಂಘನೆ ಮಾಡುವವರ ಪೋಟೋ, ವಿಡಿಯೋ ತೆಗೆದು ತಮ್ಮ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಪೋನ್‌ಗೆ ಕಳಿಸಿ. ಎಲ್ಲರೂ ಸಹಕರಿಸಿದರೆ ಕೊರೊನಾ ನಿಯಂತ್ರಣ ಸಾಧ್ಯ ಎಂದರು.
Tags
ಸಕಲೇಶಪುರ