ಶ್ರೀ ಲಕ್ಷೀ ಟ್ಯಾಕ್ಷರ್ ಟೆಕ್ ಸಿಬ್ಬಂದಿಗಳಿಂದ ಆಹಾರ ಕಿಟ್ ವಿತರಣೆ

ರಾಮನಾಥಪುರ;- ಇಂದಿನ ಕೋವಿಡ್ ಸೋಕಿನಲ್ಲಿ ಬಳಲುತ್ತಿರುವ ಜನತೆಗೆ ಕೆಲವು ಸಂಘ ಸಂಸ್ಥೆಗಳು, ಹೋಟಲ್ ಮಾಲೀಕರು ಸಮಾಜ ಸೆವಕರುಗಳು ತಮ್ಮ-ತಮ್ಮ ಮನೆಗಳು, ಕಚೇರಿಗಳನ್ನು ಪಾಕಶಾಲೆಯಾಗಿ ಬದಲಾಗಿವೆ. 


ರಾಮನಾಥಪುರದಲ್ಲಿ ಸಮಾಜ ಸೇವಕರು ಹಾಗೂ ಉದ್ಯಮಿ ದೊಡ್ಡಮಗ್ಗೆ ಕೃಷೇಗೌಡ ಅವರು ಇಲ್ಲಿಯವರೆಗೆ ರಾಮನಾಥಪುರ, ದೊಡ್ಡಮಗ್ಗೆ, ಕೊಣನೂರು ಮುಂತಾದ ಸರ್ಕಾರಿ ಅಸ್ಪತ್ರೆಗಳಿಗೆ ಸುಮಾರು  ೧೦ ಲಕ್ಷ ರೂ ಮೌಲ್ಯದ ಮೆಡಿಸನ್‌ಗಳಾದ ಔಷದಿ, ಮಾತ್ರಗಳು, ಮಾಸ್ಕ್, ಸ್ಯಾನಿಟೈಸರ್ ಡಬ್ಬಗಳು, ಥರ್ಮಲ್‌ಸ್ಕಾನ್, ಅರ್.ಎಲ್. ಗ್ಲೂಕೋಸ್ ಬಾಟಲ್‌ಗಳು, ಕೈ ಮುಖ ಗವುಸುಗಳು, ಅಹಾರ ಕಿಟ್‌ಗಳನ್ನು ನೀಡಿ ನೀಡಿ ಮಾನವಿಯತೆ ಮೆರೆದಿದ್ದಾರೆ.  

ರಾಮನಾಥಪುರದ ಇವರ ಶ್ರೀ ಲಕ್ಷೀ ಟ್ಯಾಕ್ಷರ್ ಟೆಕ್ ಸಿಬ್ಬಂದಿಗಳಾದ ಬಿಳಗೂಲಿ ಬಿ.ಜೆ, ರಾಮೇಗೌಡ, ಮಲ್ಲಾಪುರ ಎಂ.ಎಸ್. ದಿನೇಶ್, ದಿಲೀಫ್, ಯಾದವ್, ಜಗದೀಶ್, ಗಿರೀಶ್, ಮಧು, ಶೇಖರ್ ಮುಂತಾದವರು ರಾಮನಾಥಪುರ, ಕೊಣನೂರು, ದೊಡ್ಡಮಗ್ಗೆ ಮುಂತಾದ ಕಡೆಗಳಲ್ಲಿರುವ ಅಸ್ಪತ್ರೆಯ ಕೊರೊನಾ ವಾರಸ್‌ಳಿಗೆ, ನಿರ್ಗತಿಕರಿಗೆ, ಬಡವರಿಗೆ ಅಹಾರ ಕಿಟ್ ತಯಾರು ಮಾಡಿ ಕೆಲವು ಕಡೆಗಳಲ್ಲಿ ನೀಡುತ್ತಿದ್ದಾರೆ. 

ಶ್ರೀ ಲಕ್ಷೀ ಟ್ಯಾಕ್ಷರ್ ಟೆಕ್ ಸಿಬ್ಬಂದಿಯಾದ ಮಲ್ಲಾಪುರ ಎಂ.ಎಸ್. ದಿನೇಶ್ ಮಾತನಾಡಿ ಲಾಕ್‌ಡೌನ್ ಈ ಅವಧಿಯಲ್ಲಿ ಬಹಳಷ್ಟು ಅಫಿಸುಗಳು, ಮನೆ-ಮಠಗಳು ಹೊಸ ಪ್ರಯೊಗಶೀಲತೆ, ಸೃಜನಶೀಲತೆಯ ಮನಸ್ಸುಗಳನ್ನು ಹುಟ್ಟಿಕೊಂಡು ಪಾಕಸಾಲೆಯಾಗಿ ಬದಲಾವಣೆ ನಡೆಯುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಅಸ್ಪತ್ರೆಗಳಿಗೆ, ಅಲೆಮಾರಿಗಳು, ದೀನದಲಿತರು ಇರುವ ಕಡೆಗಳಲ್ಲಿ ಕೆಲವು ತಂಡದಲ್ಲಿ ತೆರಳಿ ಕೆಲವು ಊಟವನ್ನು ನೀಡಲಾಗುತ್ತಿದೆ, ಸಮಾಜ ಸೇವಕರು ಹಾಗೂ ಉದ್ಯಮಿ ದೊಡ್ಡಮಗ್ಗೆ ಕೃಷೇಗೌಡ ಅವರ ಅಣತಿಯಂತೆ ತಾಲ್ಲೂಕಿನ ಎಲ್ಲಾ ಕಡೆಗಳಲ್ಲಿ ಅನಾವು ಮಾಡುತ್ತಿದ್ದೆವೆ ಎಂದು ದಿನೇಶ್ ತಿಳಿಸಿದರು.      


Post a Comment

Previous Post Next Post