ಸರಕಾರದ ಆದೇಶ ಪಾಲಿಸದ ಖಾಸಗಿ ಆಸ್ಪತ್ರೆ ಮೇಲೆ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಡಿಸಿಗೆ ಮನವಿ

ಹಾಸನ: ಕೊರೋನಾ ಮಹಾಮಾರಿ ದಿನೆ ದಿನೆ ಹೆಚ್ಚಾಗುತ್ತಿದ್ದು, ಸರಕಾರದ ಆದೇಶವನ್ನು ಪಾಲಿಸದಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮಕೈಗೊಳ್ಳಲು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾದ ಹೆಚ್.ಕೆ. ಮಹೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ರವರಿಗೆ ಮನವಿ ಸಲ್ಲಿಸಲಾಯಿತು.


 ಕೆಪಿಸಿಸಿ ಸದಸ್ಯರಾದ ಹೆಚ್.ಕೆ. ಮಹೇಶ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿ ದಿನೆ ದಿನೆ ಹೆಚ್ಚಾಗಿದ್ದು, ತಡೆಗಟ್ಟಲು ಈಗಾಗಲೇ ಹಳ್ಳಿ ಹಳ್ಳಿಗಳಿಗೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಕೆಲಸ ಮಾಡುತ್ತಿರುವುದನ್ನು ನಾವುಗಳು ಅಭಿನಂದಿಸುತ್ತೇವೆ. ಹೆಚ್ಚು ಕೊರೋನಾ ಹರಡಲು ಹಳ್ಳಿಗಳಲ್ಲಿ, ನಗರದ ಕೊಳಚೆ ಪ್ರದೇಶಗಳಲ್ಲಿ ವ್ಯಾಪಾಕವಾಗಿ ಹರಡುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ ಎಂದರು. ಕೊರೋನಾ ಸೋಂಕುಗಳ ನಿಯಂತ್ರಿಸಲು ಜನರಿಗೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕೊರೋನಾ ವಿಚಾರವಾಗಿ ಜಿಲ್ಲಾಡಳಿತವು ಎಲ್ಲಾ ಪಕ್ಷದ ಮುಖಂಡರೊAದಿಗೆ, ಸದಸ್ಯರೊಂದಿಗೆ ಜಿಲ್ಲಾ ಪಂಚಾಯತ್, ತಾಲೂಕು ಪಮಚಾಯತ್, ಗ್ರಾಮಪಂಚಾಯತ್, ನಗರಸಭೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ-ಸAಸ್ಥೆ ಒಳಗೊಂಡAತೆ ಒಂದು ಸಭೆಯನ್ನು ಕರೆದು ಚರ್ಚಿಸಿ ಹಳ್ಳಿ ಹಳ್ಳಿಗಳಲ್ಲಿ, ನಗರಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕೋರಿದರು. 

 ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ಶೇಕಡ 50 ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಕೆÆರೋನಾ ರೋಗಿಗಳಿಗೆ ಮೀಸಲಿಡಬೇಕೆಂದು ಆದೇಶವಿದ್ದರೂ ಆನೇಕ ಆಸ್ಪತ್ರೆಗಳು ಪಾಲಿಸುತ್ತಿಲ್ಲ. ಪ್ರತಿ ಖಾಸಗಿ ಆಸ್ಪತ್ರೆಯಲ್ಲಿ ಒಂದು ಹಾಸಿಗೆಗೆ 5 ಸಾವಿರದಿಂದ 15 ಸಾವಿರದವರೆಗೂ ರೂಗಳನ್ನು ಏರಿಸಿ ಬಡ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದರೂ ಯಾವ ಸರಕಾರಿ ವೈದ್ಯಾಧಿಕಾರಿಗಳು ಕೂಡ ಖಾಸಗಿ ಆಸ್ಪತ್ರೆಗಳ ಕಡೆ ಗಮನಹರಿಸುತ್ತಿಲ್ಲದಿರುವುದು ಸರಕಾರದ ಬೇಜವಬ್ಧಾರಿ ತೋರಿಸುತ್ತದೆ ಎಂದು ದೂರಿದರು. ಈಗಾಗಲೇ ಸರಕಾರವು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ದರೂ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೊರೋನಾ ನಿಬಾಯಿಸುವಲ್ಲಿ ಇನ್ನು ಬಿಜೆಪಿ ಸರಕಾರವು ಕೂಡ ಎಡವಿದೆ ಎಂದು ಆರೋಪಿಸಿದರು. ಕೂಡಲೇ ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

 ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಲೋಕೇಶ್, ಅಸ್ಲಾಂ ಪಾಷಾ, ಚಂದ್ರು, ಕಹಿಂ, ನಂದನ್ ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post