ಬೇಲೂರು: ಕಾಡಾನೆ ದಾಳಿಯಿಂದ ಕೂಲಿಕಾರ್ಮಿಕನೋರ್ವ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಅರೇಹಳ್ಳಿ ನಿವಾಸಿ ಶಿವು (55) ಮೃತಪಟ್ಟ ದುರ್ಧೈವಿ. ಮೂಲತಃ ಬಾಳೆಹೊನ್ನೂರಿನವನಾಗಿದ್ದು ಅರೇಹಳ್ಳಿಗೆ ಕೂಲಿ ಕೆಲಸಕ್ಕೆಂದು ಹಲವು ವರ್ಷಗಳ ಹಿಂದೆಯೆ ಇಲ್ಲಿಗೆ ಆಗಮಿಸಿದ್ದರು.
ಇಂದು ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಉದಯವಾರ ಕಾಫಿ ತೋಟಕ್ಕೆ ಕೆಲಸಕ್ಕೆಂದು ತೆರಳುವಾಗ ಬಾಳೆಗುಲಿ ಗ್ರಾಮದ ಬಳಿ ಆನೆಯೊಂದು ದಿಢೀರ್ ಆಗಿ ದಾಳಿ ಮಾಡಿದೆ.
ಸ್ಥಳದಲ್ಲೆ ಶಿವು ಅಸುನೀಗಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಆನೆಯೊಂದು ಯುವಕರನ್ನು ಅಟ್ಟಿಸಿಕೊಂಡು ಬಂದಿತ್ತು. ಇದೆ ಆನೆ ಇಂದು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಪ ವಲಯ
ಅರಣ್ಯಾಧಿಕಾರಿ ಗುರುರಾಜ್, ಅರೇಹಳ್ಳಿ ಪಿಎಸ್‍ಐ ಮಹೇಶ್, ಜೆಡಿಎಸ್ ಮುಖಂಡ ನಟರಾಜ್ ಭೇಟಿ ನೀಡಿದ್ದಾರೆ. ಆನೆ ದಾಳಿಯಿಂದ ಸಾವು ಸಂಭವಿಸಿರುವ ಹಿನ್ನಲೆಯಲ್ಲಿ ಈ ಭಾಗದ ಕೂಲಿಕಾರ್ಮಿಕರು, ಕಾಫಿ ತೋಟದ ಮಾಲೀಕರು ತೋಟದಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಆನೆ ದಾಳಿಯಿಂದ ದೂರವಾಗಲು ಸರ್ಕಾರ ಶಾಶ್ವತವಾದ ಯೋಜನೆಯೊಂದನ್ನು ರೂಪಿಸುವವರಗೆ ಇಂತಹ ಪ್ರಕರಣಗಳು ತಪ್ಪಿದ್ದಲ್ಲ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ.
Tags
ಬೇಲೂರು