ನಿಯಮ ಪಾಲಿಸದ ಕ್ಲಿನಿಕ್‍ಗೆ ಬೀಗ

ಹಾಸನ ಮೇ.20 :-ಕೆ.ಪಿ.ಎಂ.ಇ. ಕಾಯ್ದೆ ಸೇರಿದಂತೆ ಕೇಲವು ನಿಯಮ ಪಾಲನೆ ಮಾಡದ ಕಾರಣ ತಾಲ್ಲೂಕಿನ ಶಾಂತಿ ಗ್ರಾಮದ ಖಾಸಗಿ ಕ್ಲಿನಿಕ್ ಒಂದನ್ನು ಇಂದು ಮುಚ್ಚಿಸಲಾಗಿದೆ.



ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ|| ವಿಜಯ್ ಅವರ ನೇತೃತ್ವದಲ್ಲಿ ಇಂದು ಶಾಂತಿಗ್ರಾಮದ ಹಾಸನಾಂಭ ಕ್ಲಿನಿಕ್ಗೆ ದಿಡೀರ್ಋ ಭೇಟಿ ನೀಡಿ ಪರೀಶೀಲಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದದ್ದು ಐ.ಎಲ್.ಐ, ಸಾರಿ ಪ್ರಕರಣಗಳಲ್ಲಿ ಸ್ವ್ಯಾಬ್ ಟೆಸ್ಟ್ ಮಾಡದೇ ಚಿಕಿತ್ಸೆ ನೀಡುತ್ತಿದ್ದದ್ದು ಪತ್ತೆಯಾಯಿತು.
ವೈಧ್ಯಕೀಯ ತ್ಯಾಜ್ಯ ನಿರ್ವಾಹಣೆ ಕಾಯ್ದೆ ಸಮರ್ಪಕವಾಗಿ ಅನುಪಾಲನೆ ಮಾಡದೆ ಆಯುಷ್ ಪದ್ದತಿಯಲ್ಲಿ ನೊಂದಾಯಿಸಿ ಅಲೋಪತಿ ಪದ್ದತಿಯ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಹೀಗೆ ಹಲವು ಲೋಪ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ತಾತ್ಕಲಿಕವಾಗಿ ಮುಚ್ಚಿಸುವಂತೆ ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ|| ವಿಜಯ್ ಸೂಚಿಸಿದರು.
ಅದರಂತೆ ಶಾಂತಿಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರವೀಶ್ ಹಾಗೂ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕಾವ್ಯರವರ ನೇತೃತ್ವದಲ್ಲಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಲಿದ್ದು ಜಿಲ್ಲಾಧಿಕಾರಿಯವರಿಗೆ ವರಧಿ ಸಲ್ಲಿಸಲಾಗಿದೆ.

Post a Comment

Previous Post Next Post