ಹಾಸನ: ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡರ ನಿರಂತರ ಪ್ರಯತ್ನದಿಂದ ಜಿಲ್ಲಾ ಆಸ್ಪತ್ರೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು, ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸ್ನಾತಕೋತ್ತರ ಬಾಲಕ-ಬಾಲಕಿಯರ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ೪೬ ಕೋಟಿ ಮತ್ತು ವೈದ್ಯಕೀಯ ಉಪಕರಣ ಕೊಂಡುಕೊಳ್ಳಲು ೧೮ ಕೋಟಿ ರೂಗಳೂ ಸೇರಿ ಒಟ್ಟು ೫೮ ಕೋಟಿ ರೂಗಳಿಗೆ ಅನುಮೋದನೆ ದೊರಕಿದೆ.
ಹಾಸನದ ಶಾಸಕರಾದ ಪ್ರೀತಮ್ ಜೆ. ಗೌಡರು ಸ್ಥಳೀಯ ಕಾಮಗಾರಿಗಳ ಬಗ್ಗೆ ಅನೇಕ ಬಾರಿ ಮುಖ್ಯಮಂತ್ರಿಗಳ ಮತ್ತು ವೈದ್ಯಕೀಯ ಸಚಿವರ ನಿರಂತರ ಸಂಪರ್ಕದಲ್ಲಿ ಗಮನಸೆಳೆದು ಮತ್ತು ತಾಲೂಕಿನ ಅಭಿವೃದ್ಧಿ ಪರವಾಗಿ ನಿಂತ ಪರಿಣಾಮ ಕಾಲೇಜಿಗೆ ಸಚಿವ ಸಂಪುಟದಲ್ಲಿ ಹಣ ಬಿಡುಗಡೆ ಆಗಲು ಕಾರಣಕರ್ತರಾಗಿದ್ದಾರೆ.
ಗುರುವಾರ ಸಂಜೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಾಸನದ ಕಾಮಗಾರಿಗಳ ಬಗ್ಗೆ ಚರ್ಚೆ ನಡೆದು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸ್ನಾತಕೋತ್ತರ ಬಾಲಕ-ಬಾಲಕಿಯರ ವಿದ್ಯಾರ್ಥಿಗಳ ಹಾಸ್ಟೇಲ್ ಕಟ್ಟಡ ಕಾಮಗಾರಿಯನ್ನು ೪೬.೨೦ ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಮತ್ತು ಉಪಕರಣಕೊಂಡುಕೊಳ್ಳಲು ೧೨.೦೨ ಕೋಟಿ ರೂಗಳ ವೆಚ್ಚದಲ್ಲಿ ಖರೀದಿ ಮಾಡಲು ಆಡಳಿತಾತ್ಮಕ ಅನುಮೋದನೆ ದೊರಕಿದಂತಾಗಿದೆ. ಜಿಲ್ಲಾ ಸರಕಾರಿ ಆಸ್ಪತ್ರೆ ಬಳಿ ಇರುವ ಮೈದಾನದ ಜಾಗದಲ್ಲಿ ಇನ್ನೊಂದು ತಿಂಗಳ ಒಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗಿದೆ.
