ಸುಖಸುಮ್ಮನೆ ರಸ್ತೆಗಿಳಿದ ವಾಹನಗಳಿಗೆ ದಂಢದ ಬಿಸಿ ಕಲಾಭವನದ ಮುಂದೆ ಎಸ್ಪಿ ನೇತೃತ್ವದಲ್ಲಿ ಪೊಲೀಸ್ ತಂಡ

ಹಾಸನ: ವಾಹನವನ್ನು ರಸ್ತೆಗಿಳಿಸಬಾರದು ಎಂಬ ನಿಯಮವಿದ್ದರೂ ಮಾತು ಕೇಳದೇ ದಿನೆದಿನೆ ವಾಹನಗಳ ಓಡಾಟ ಹೆಚ್ಚಾಗುತ್ತಲೆ ಇತ್ತು. ಆದರೇ ಏಕೋ ಪೊಲೀಸರು ಕೆಲ ದಿನಗಳು ಮಾತ್ರ ದಂಢ ಹಾಕಿ ಶಾಂತವಾಗುತ್ತಿದ್ದರು. ಶುಕ್ರವಾರದಂದು ದಿಡೀರ್ ಎಚ್ಚೆತ್ತುಕೊಂಡು ಸುಖಸುಮ್ಮನೆ ಓಡಾಡುವ ವಾಹನವನ್ನು ಹಿಡಿದು ಹಾಸನಾಂಬ ಕಲಾಕ್ಷೇತ್ರ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನಕ್ಕೆ ಕರೆತಂದು ದಂಢ ಹಾಕುವ ಮೂಲಕ ಬಿಸಿ ಮುಟ್ಟಿಸಲಾಯಿತು.


       ಜಿಲ್ಲೆಯಲ್ಲಿ ಕೊರೋನಾ ಎಂಬುದು ದಿನೆ ದಿನೆ ಹೆಚ್ಚಾಗಿ ಸಾವು-ನೋವುಗಳು ಸಂಭವಿಸುತ್ತಲೆ ಇದ್ದರೂ ಜನರು ಇನ್ನು ಎಚ್ಚೆತ್ತುಕೊಳ್ಳಲಿಲ್ಲ ಎಂಬAತೆ ಗೋಚರಿಸುತ್ತದೆ. ವಾರಕ್ಕೆ ಮೂರು ದಿನಗಳು ಮಾತ್ರ ನಡೆದುಕೊಂಡು ಬಂದೆ ತರಕಾರಿ ಇತರೆ ವ್ಯಾಪಾರ ಮಾಡಬೇಕು ಎಂಬ ಆದೇಶವಿದ್ದರೂ ಅದೇಷ್ಟೊ ಜನರು ಪಾಲಿಸುತ್ತಲೆ ಇರಲಿಲ್ಲ. ಬೆಳಿಗ್ಗೆ ೧೦ ಗಂಟೆ ಒಳಗೆ ಮಾತ್ರ ಬರಬೇಕು ನಿಯಮ ಇದ್ದರೂ ರಾತ್ರಿಯಾದರೂ ಸುಖ ಸುಮ್ಮನೆ ಓಡಾಡುವವರೆ ಹೆಚ್ಚು ಕಾಣಿಸುತ್ತಿದ್ದರೂ ಇದಕ್ಕೆ ಬ್ರೇಕ್ ಹಾಕಲು ಅದೇಕೊ ಪೊಲೀಸ್ ಇಲಾಖೆ ಅಷ್ಟೊಂದು ಕಾರ್ಯಪ್ರವೃತ್ತರಾಗಿರಲಿಲ್ಲ. ಅಲ್ಲಲ್ಲಿ ಮಾತ್ರ ಕೆಲ ಸಮಯ ದಂಢ ವಿಧಿಸುತ್ತಿದ್ದರು. ಆದರೇ ಶುಕ್ರವಾರದಂದು ನಗರದ ಕಲಾಭವನದ ಎದುರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಅನೇಕ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳೊAದಿಗೆ ರಸ್ತೆಗಿಳಿದು ಸುಖಸುಮ್ಮನೆ ಒಡಾಡುವ ವಾಹನಗಳ ಸವಾರರಿಗೆ ಶಾಕ್ ನೀಡಿದರು. ತರಕಾರಿ ತರುವುದಕ್ಕೆ ಯಾರು ವಾಹನದಲ್ಲಿ ಬರುತ್ತಾರೆ, ಸುಳ್ಳು ಹೇಳಿಕೊಂಡು ಓಡಾಡವವರ, ಮಾಸ್ಕ್ ಹಾಕದವರ, ಪೋನಿನಲ್ಲಿ ಮಾತಾಡಿಕೊಂಡು ವಾಹನ ಚಾಲನೆ ಮಾಡುವವರ ಸೇರಿದಂತೆ ಇತರೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುವ ವಾಹನವನ್ನು ತಡೆದು ಕಲಾಭವನದ ಆವರಣಕ್ಕೆ ಕಳುಹಿಸಲಾಗುತಿತ್ತು. ಕಲಾಭವನದ ಆವರಣವು ವಾಹನದಿಂದ ತುಂಬಿ ಹೋಗಿದನ್ನು ಗಮನಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದ ಆವರಣಕ್ಕೆ ಕಳುಹಿಸಲಾಗುತಿತ್ತು. ಅಲ್ಲಿ ಪೊಲಿಸ್ ಅಧಿಕಾರಿಗಳು ಪರಿಶೀಲಿಸಿ ಅವರಿಗೆ ದಂಢ ಹಾಕುವ ಮೂಲಕ ಬಿಸಿ ಮುಟ್ಟಿಸುತ್ತಿದ್ದರು. ಪ್ರತಿನಿತ್ಯ ವಾಹನಗಳ ಪರಿಶೀಲನೆ ಮಾಡಿ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರೇ ಸುಖಸುಮ್ಮನೆ ಓಡಾಡುವ ವಾಹನಗಳ ಸಂಖ್ಯೆ ಕಡಿಮೆ ಮಾಡಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Post a Comment

Previous Post Next Post