ಹಾಸನದಲ್ಲಿ ದಾರಕಾರ ಮಳೆ ಲಾಕ್ ಡೌನ್ ಇರುವುದರಿಂದ ಯಾರಿಗೂ ಸಮಸ್ಯೆ ಇಲ್ಲ

ಹಾಸನ: ಬಿತ್ತನೆ ಮಾಡಲು ಅವಶ್ಯಕವಾಗಿ ಬೇಕಾಗಿರುವ ಮಳೆಯೂ ಕಳೆದ ಎರಡು ದಿನಗಳಿಂದ ಬರುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಲಾಕ್ ಡೌನ್ ಇರುವುದರಿಂದ ಬೆಳಿಗ್ಗೆ ಅಗತ್ಯವಸ್ತುಗಳ ಮಾರಾಟಕ್ಕೆ ಸಲ್ಪ ಅಡಚಣೆ ಉಂಟಾದರೇ ಉಳಿದಂತೆ ಯಾರಿಗೂ ಅಷ್ಟೊಂದು ಸಮಸ್ಯೆ ಉಂಟಾಗಲಿಲ್ಲ. 


 ಈಗಾಗಲೇ ಬಿತ್ತನೆ ಆಲೂಗೆಡ್ಡೆಯನ್ನು ರೈತರು ಕೊಂಡುಕೊAಡು ಮಣ್ಣು ಹದಕ್ಕಾಗಿ ಮಳೆಯನ್ನು ಕಾಯುತ್ತಿದ್ದರು. ನಿರೀಕ್ಷೆ ಮಾಡಿದಂತೆ ಮಳೆಯೂ ಕೂಡ ಸರಿಯಾದ ಸಮಯಕ್ಕೆ ಬರುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಇನ್ನು ಒಂದು ವಾರಗಳ ಕಾಲ ಮಳೆಯೂ ನಿರಂತರವಾಗಿ ಬರುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದು, ರೈತರು ಸರಿಯಾದ ಸಮಯ ನೋಡಿ ಬಿತ್ತನೆ ಆಲೂಗೆಡ್ಡೆ ಸೇರಿದಂತೆ ಇತರೆ ಬೆಳೆಗೆ ಮುಂದಾದರೇ ಉತ್ತಮ. ಪ್ರತಿ ದಿನ ಬೆಳಿಗ್ಗೆ 6 ರಿಂದ 10ರ ವರೆಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದು, ಆದರೇ ಮಳೆ ಬಿದ್ದಿದ್ದರಿಂದ ಸಾರ್ವಜನಿಕರು ಸಲ್ಪ ಸಮಸ್ಯೆ ಎದುರಿಸಿದರು. ಕೊಡೆ ಹಿಡಿದು ಹೊರಬರಬೇಕಾಯಿತು. ಆದರೇ ವ್ಯಾಪಾರ ಮಾಡಲು ಹಾಸನ ನಗರ ಬಸ್ ನಿಲ್ದಾಣ ನೀಡಿದ್ದರಿಂದ ವ್ಯಾಪಾರಸ್ತರಿಗೆ ಅಷ್ಟೊಂದು ಸಮಸ್ಯೆ ಕಾಣಲಿಲ್ಲ. ಆದರೇ ಹೊರಗೆ ರಸ್ತೆ ಬದಿ ವ್ಯಾಪಾರ ಮಾಡುವ ಹೂವು ಮಾರಾಟಗಾರರು ಮಳೆಯಲ್ಲಿ ನೆನೆಯಬೇಕಾಯಿತು. 10 ಗಂಟೆಯ ನಂತರ ಯಾರು ಹೊರಗೆ ಬರಬೇಡಿ ಎಂದು ನಿಯಮ ಇರುವುದರಿಂದ ಮಳೆ ಬಂದರೂ ಅಷ್ಟೊಂದು ತೊಂದರೆ ಬರುವುದಿಲ್ಲ.

Post a Comment

Previous Post Next Post