ರೆಡ್ ಕ್ರಾಸ್ ಸಂಸ್ಥೆಯಿಂದ ಜಿಲ್ಲಾ ಆಸ್ಪತ್ರೆಗೆ 15 ಲಕ್ಷ ರೂಗಳ ವೆಂಟಿಲೇಟರ್, 70 ಸಾವಿರದ ಆಕ್ಸಿಜನ್ ಯಂತ್ರ ಕೊಡುಗೆ

ಹಾಸನ : ಕರ್ನಾಟಕ ರಾಜ್ಯ ರೆಡ್ ಕ್ರಾಸ್ ಶಾಖೆಯ ಅಧ್ಯಕ್ಷರಾದ ನಾಗಣ್ಣನವರು ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆಗೆ 15 ಲಕ್ಷ ರೂ ವೆಚ್ಚದ ಒಂದು ವೆಂಟಿಲೇಟರ್ ಮತ್ತು 70 ಸಾವಿರ ರೂ ಬೆಲೆ ಬಾಳುವ ಅಮ್ಲಜನಕ ಯಂತ್ರವನ್ನು ಕೊಡುಗೆಯಾಗಿ ನೀಡಿದರು.



 ನಗರದ ಮೆಡಿಕಲ್ ಕಾಲೇಜು ಆವರಣದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಮತ್ತು ಜಿಲ್ಲಾ ಪಂಚಾಯತಿಯ ಸಿ.ಇ.ಒ ಬಿ.ಎ. ಪರಮೇಶ್‌ರವರ ಸಮಕ್ಷಮದಲ್ಲಿ ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಕೊರೋನಾ ಪಾಸಿಟಿವ್ ದಿನೆ ದಿನೆ ಹೆಚ್ಚು ಬರುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕೂಡ ಸೌಲಭ್ಯ ಕಲ್ಪಿಸುತ್ತಿದೆ. ಜೊತೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೂಡ ಕೈಜೋಡಿಸಿದೆ. ಮುಂದೆಯೂ ಕೂಡ ಇವರ ಸಹಕಾರ ಅತ್ಯಗತ್ಯ ಎಂದರು.

 ಹಾಸನ ಜಿಲ್ಲಾ ರೆಡ್ ಕ್ರಾಸ್ ಸಭಾಪತಿಗಳಾದ ಹೆಚ್.ಪಿ. ಮೋಹನ್‌ರವರು ಮಾತನಾಡಿ, ಕೋವಿಡ್ ವೈರಸ್‌ನ ಎರಡನೇ ಹಂತದ ಅಲೆ ವ್ಯಾಪಕವಾಗಿ ಮತ್ತು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಮತ್ತು ಅಮ್ಲಜನಕ ಕೋರತೆ ಕಾಣುತ್ತಿದೆ. ಇದನ್ನರಿತ ಕರ್ನಾಟಕ ರಾಜ್ಯ ರೆಡ್ ಕ್ರಾಸ್ ಶಾಖೆಯ ಅಧ್ಯಕ್ಷರಾದ ನಾಗಣ್ಣನವರು ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದಕ್ಷತೆಯ ಬಗ್ಗೆ ಅಭಿಮಾನವಿದ್ದು, 15 ಲಕ್ಷ ರೂ ವೆಚ್ಚದ ಒಂದು ವೆಂಟಿಲೇಟರ್ ಮತ್ತು 70 ಸಾವಿರ ರೂ ಬೆಲೆ ಬಾಳುವ ಅಮ್ಲಜನಕ ಯಂತ್ರವನ್ನು ಹಾಸನ ಜಿಲ್ಲಾ ಶಾಖೆಗೆ ನೀಡಲಾಗಿದೆ ಎಂದರು. 

 ಇದೆ ವೇಳೆ ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ಸಮಾಜಸೇವಕರಾದ ಡಾ|| ಗುರುರಾಜ್ ಹೆಬ್ಬಾರ್,ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು ಗುರುರಾಜ್ ಹೆಬ್ಬಾರ್, ಜಯೇಂದ್ರ ಕುಮಾರ್, ಹೆಚ್.ಎಂ. ಶಿವಣ್ಣ, ಡಾ. ವೈ.ಎಸ್. ವೀರಭದ್ರಪ್ಪ, ಎಸ್.ಎಸ್. ಪಾಷಾ, ಅಮ್ಜದ್ ಖಾನ್, ಮಹಾವೀರ ಬನ್ಸಾಲಿ, ಹೆಚ್.ಡಿ. ಕುಮಾರ್, ನಿರ್ಮಲ, ಕೆ.ಟಿ. ಜಯಶ್ರೀ, ಸುಬ್ಬಸ್ವಾಮಿ, ಉದಯ ಕುಮಾರ್ ಹಾಗೂ ಪ್ರಗತಿಪರ ಚಿಂತಕರಾದ ಆರ್.ಪಿ. ವೆಂಕಟೇಶ್ ಮೂರ್ತಿ ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post