ಸರಳವಾಗಿ ಆಚರಿಸಿದ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬ.

ಹಾಸನ: ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರ ಜನ್ಮ ದಿನವನ್ನು ತಾಲೂಕಿನ ಸಾಲಗಾಮೆ ಗ್ರಾಮದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿಯವರು ಕೇಕ್ ಕತ್ತರಿಸುವುದರ ಮೂಲಕ ಸರಳವಾಗಿ ಆಚರಿಸಿದರು.


     ನಂತರ ಮಾತನಾಡಿದ ಅವರು, ಕೊರೋನಾ ಎಂಬ ಮಹಾಮಾರಿ ಆವರಿಸಿ ಜನರು ತತ್ತರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಕೊರೋನಾ ಎಂಬುದು ಇಡೀ ಪ್ರಪಂಚದಲ್ಲೆ ಕಣ್ಮರೆಯಾಗಿ ಆರೋಗ್ಯ ವೃದ್ಧಿಸಬೇಕು. ನಮ್ಮ ನಾಯಕರಾದ ಶಿವಕುಮಾರ್ ಅವರಿಗೆ ಆರೋಗ್ಯ, ಆಯಾಸ್ಸು, ಅಧಿಕಾರಿ ನೀಡಿ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.


Post a Comment

Previous Post Next Post