ಹಾಸನ: ಕೊರೋನಾ ಪಾಸಿಟಿವ್ ಬಂದು ಹೋಂ ಕ್ವಾರೇಂಟೈನ್ ಆಗಿರುವವರ ಮತ್ತು ಹಸಿದ ಬಡ ಕುಟುಂಬಗಳ ಮನೆಗೆ ನೇರವಾಗಿ ತಿಂಡಿ ಮತ್ತು ಎರಡು ಹೊತ್ತು ಊಟ, ಮೆಡಿಸನ್ ಹಾಗೂ ಆಸ್ಪತ್ರೆಯ ಸೇವೆಗಳನ್ನು ಹಾಸನ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ತಂಡವಾಗಿ ಕೆಲಸ ಮಾಡಲಾಗುತ್ತಿದೆ.
ಎರಡನೇ ಅಲೆ ಕೊರೋನಾ ಸೋಂಕು ಹರಡಿ ಪ್ರತಿನಿತ್ಯ ಸಾವಿರಾರು ಜನರು ಪಾಸಿಟಿವ್ ಬಂದು ಒಂದು ಕಡೆ ನರಳುತ್ತಿದ್ದರೇ ಮತ್ತೊಂದು ಕಡೆ ಪ್ರತಿನಿತ್ಯ ಸಾವನಪ್ಪುತ್ತಿದ್ದಾರೆ. ಪಾಸಿಟಿವ್ ಬಂದವರು ಅನೇಕರು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗುತ್ತಿದ್ದು, ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರ ಪಾಡು ಹೇಳತೀರದು. ಅಂತವರನ್ನು ಗುರುತಿಸಿ ಮನೆಗೆ ಹೋಮ್ ಡೆಲಿವರಿ ಮಾಡುವ ಕಾಯಕವನ್ನು ಕಳೆದ ಏಪ್ರಿಲ್ ೨೦ ನಿಂದ ಶಾಸಕರ ನೇತೃತ್ವದಲ್ಲಿ ತಂಡಗಳು ನಿರಂತರವಾಗಿ ಕೆಲಸ ಮಾಡಿಕೊಂಡು ಬರುತಿದ್ದಾರೆ. ಮಾಧ್ಯಮದವರು ರಿಯಲ್ ಚೆಕಪ್ ಮಾಡಲು ನಗರದ ಶ್ರೀಕಾಳಿಕಾಂಬ ದೇವಸ್ಥಾನದ ಸಮುದಾಯ ಭವನಕ್ಕೆ ಹೋದಾಗ ಆಹಾರವನ್ನು ತಯಾರಿಸುತ್ತಿರುವುದು ಕಂಡು ಬಂದಿತು. ಅಡುಗೆ ಮಾಡಲು ಪ್ರತ್ಯೇಕ ಸಿಬ್ಬಂದಿಗಳು, ಊಟದ ಪ್ಯಾಕ್ ಮಾಡುವವರು, ಮನೆಗಳಿಗೆ ಕಾಲ್ ಮಾಡಿ ಆಹಾರ ಧಾನ್ಯವನ್ನು ಡೆಲಿವರಿ ಮಾಡಲು ಕಾರ್ಯಕರ್ತರು ಇರುವುದು ಕಂಡು ಬಂದಿತು. ಬೆಳಿಗ್ಗೆ ಸಮಯದಲ್ಲಿ ಸುಮಾರು ೮ ರಿಂದ ೮:೩೦ರ ಒಳಗೆ ತಿಂಡಿ, ಮದ್ಯಾಹ್ನ ೧ ಗಂಟೆಯ ಸಮಯಕ್ಕೆ ಮದ್ಯಾಹ್ನದ ಊಟ ಇನ್ನು ರಾತ್ರಿ ಊಟವನ್ನು ಪ್ಯಾಕ್ ಮಾಡಿ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಯಾರು ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಲ್ಲಿ ಶಾಸಕರಾದ ಪ್ರೀತಮ್ ಜೆ. ಗೌಡರು ಪ್ರಾರಂಭಿಸಿರುವ ಪುನೀತ್ ನೇತೃತ್ವದ ತಂಡವು ನಿರಂತರವಾಗಿ ಕೆಲಸ ಮಾಡುತ್ತಿದೆ.
ಇನ್ನು ಶಾಸಕರು ಮತ್ತೊಂದು ತಂಡ ರಚಿಸಿದ್ದು, ಬಿಜೆಪಿ ಹಾಸನ ನಗರ ಮಂಡಲದ ಅಧ್ಯಕ್ಷರಾದ ವೇಣುಗೋಪಾಲ್ ನೇತೃತ್ವದಲ್ಲಿ ತಂಡ ಕಾಲ್ ಸೆಂಟರ್ ಆಗಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದ್ದು, ಪಾಸಿಟಿವ್ ಬಂದಾಗ ಹೋಂ ಕ್ವಾರೆಂಟೈನ್ ಯಾರು ಆಗಿದ್ದಾರೆ ಅಂತವರಿಗೆ ಅವಶ್ಯಕವಾಗಿ ಬೇಕಾಗಿರುವ ಮೆಡಿಸನ್ ಗಳನ್ನು ಕರೆ ಮಾಡಿ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ರೋಗಿಗಳಿಗೆ ಬೆಡ್ ಸಮಸ್ಯೆ, ಮೆಡಿಸನ್, ಆಕ್ಸಿಜನ್ ಸೇರಿದಂತೆ ಯಾವುದೆ ಕೊರತೆ ಆಗದಂತೆ ಸಹಾಯವಾಣಿ ಸಂಖ್ಯೆ ೮೦೦೦೯೨೦೦೬೫ ಮತ್ತು ೮೭೨೨೫೫೭೭೩೩ ಗೆ ಕರೆ ಮಾಡಿದರೇ ಸಾಕು ಆಸ್ಪತ್ರೆಯ ಸೌಲಭ್ಯಗಳು ಸಿಗುತ್ತದೆ. ಎಂದು ಮಾಹಿತಿ ನೀಡಿದರು.