ವಾರ್ಡ್ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ: ತೀರ್ಥಕುಮಾರಿ

 

ಬೇಲೂರು: ನನಗೆ ಮತನೀಡಿ ಜಯಗಳಿಸಲು ಅವಕಾಶ ಮಾಡಿಕೊಟ್ಟಂತ

ಪುರಸಭೆಯ 7ನೇ ವಾರ್ಡಿನ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ

ಹರಿಸುವುದಾಗಿ ಸದಸ್ಯೆ ತೀರ್ಥಕುಮಾರಿವೆಂಕಟೇಶ್ ಹೇಳಿದರು.

7ನೇ ವಾರ್ಡಿನಲ್ಲಿ ಸ್ಯಾನಿಟೈಸರ್ ಸಿಂಪರಣೆ ವೇಳೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರ್ಡಿನ ಜನತೆ

ನನ್ನನ್ನು ಆಶೀರ್ವದಿಸಿದ್ದಾರೆ. 




ವಾರ್ಡಿನ ಜನತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯದ ಬಗ್ಗೆ ಗಮನಹರಿಸುತ್ತೇನೆಂದರು.

ಕೊರೊನಾ ಮಹಾಮಾರಿ ಇಂದು ದೇಶಾದ್ಯಂತ ಆತಂಕ ಸೃಷ್ಠಿಸಿದೆ.

ರಾಜ್ಯದಲ್ಲಿ ಮಾರಣಹೋಮ ಹೆಚ್ಚುತ್ತಿದೆ. ಸ್ಯಾನಿಟೈಸ್

ಮಾಡಿಸುವುದೊಂದೆ ಸುರಕ್ಷತೆಯಲ್ಲ. ಹೊರಗಡೆ

ಓಡಾಡುವುದನ್ನು ಕಡಿಮೆ ಮಾಡಬೇಕು. ಕೊರೊನಾ

ಲಸಿಕೆ 18 ವರ್ಷದಿಂದ ಮೇಲ್ಟಟ್ಟವರು ಪಡೆದುಕೊಳ್ಳಬಹುದು.

ಯಾವುದೆ ವದಂತಿಗಳಿಗೆ ಕಿವಿಗೊಡಬೇಡಿ. ಆತಂಕ ಪಡುವ

ಅಗತ್ಯವಿಲ್ಲ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳ ಬಗ್ಗೆ

ಗಮನವಿರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ

ಕಾಪಾಡುವುದು ಮೆರೆಯಬಾರದು ಎಂದು ಸಲಹೆ ನೀಡಿದರು.

ಶರಣಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ವಕೀಲ ನಿಂಗರಾಜು

ಮಾತನಾಡಿ, 7ನೇ ವಾರ್ಡಿನಲ್ಲಿ ಇರುವ ಕ್ರಿಮಿಗಳ ನಾಶಕ್ಕೆ ವಾರ್ಡಿನ

ಸದಸ್ಯೆ ತೀರ್ಥಕುಮಾರಿ ಅವರು ಸ್ಯಾನಿಟೈಸ್ ಮಾಡಿಸುತ್ತಿದ್ದು ಇದು

ಜನಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ತೀರ್ಥಕುಮಾರಿ ನಮ್ಮ

ವಾರ್ಡಿನ ಮಗಳಾಗಿದ್ದು ಅವರ ಸೇವೆ ಸದಾ ಬಯಸುತ್ತೇವೆ. ವಾರ್ಡಿನ

ಜನತೆಗೆ ಮಾಸ್ಕ್ ವಿತರಿಸಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದು

ತಿಳಿಸಿದರು.

ಇದೆ ವೇಳೆ ಮಾಸ್ಕ್ ವಿತರಿಸಿದರು. ಈ ಸಂದರ್ಭ ಡಿಸಿಸಿ ಬ್ಯಾಂಕ್

ವ್ಯವಸ್ಥಾಪಕ ಯೋಗೇಶ್, ಪುರಸಭೆ ಆರೋಗ್ಯಾಧಿಕಾರಿ

ಲೋಹಿತ್, ವಾರ್ಡಿನ ಪ್ರಮುಖರಾದ ನಾಗರಾಜ್, ಈಶ್ವರ್, ಜನ್ನಿ, ಜಗದೀಶ್,

ಉಷಾ, ಪುರಸಭ ನೌಕರರು ಇತರರು ಇದ್ದರು.


ಬೇಲೂರು ಪಟ್ಟಣದ 7ನೇ ವಾರ್ಡಿನಲ್ಲಿ ಸ್ಯಾನಿಟೈಸರ್ ಸಿಂಪಡನೆ

ಮಾಡಲಾಯಿತು

Post a Comment

Previous Post Next Post