ಕೋಲಾರದಲ್ಲಿ ಬಸ್ ಆಕ್ಸಿಜನ್ ಬ್ಯಾಂಕ್ಗೆ ಚಾಲನೆ

ಕೋಲಾರ: ಆಕ್ಸಿಜನ್ ಕೊರತೆ ನೀಗಿಸುವ ಸಲುವಾಗಿ ಬಸ್ ಆಕ್ಸಿಜನ್ ಬ್ಯಾಂಕ್ ಸೇವೆಗೆ ಜಿಲ್ಲೆಯ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಮಂಗಳವಾರ ಚಾಲನೆ ನೀಡಿದ್ದಾರೆ.




ನಂತರ ಮಾತನಾಡಿದ ಸಚಿವರು, 'ಜಿಲ್ಲಾಸ್ಪತ್ರೆ ಹಾಗೂ ಇತರೆಡೆ ಅವಶ್ಯಕತೆ ಇದ್ದಲ್ಲಿ ಇದನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಕೋಲಾರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಕರೊನಾ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಈಗಾಗಲೇ ಜಿಲ್ಲೆಯ ೮೨೬ ಗ್ರಾಮಗಳು ಕರೊನಾ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಯಾವ ಗ್ರಾಮವು ಕರೊನಾವನ್ನು ಸಂಪರ‍್ಣವಾಗಿ ತಡೆಯುವಲ್ಲಿ ಯಶಸ್ವಿಯಾಗುತ್ತದೆಯೋ ಅದಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು' ಎಂದು ತಿಳಿಸಿದರು.

ಇಂದು ನನ್ನ ಉಸ್ತುವಾರಿ ಜಿಲ್ಲೆಯಾದ ಕೋಲಾರದಲ್ಲಿ ಆಕ್ಸಿಜನ್ ಬಸ್ ಗೆ ಹಸಿರು ಬಾವುಟ ತೋರಿಸಿ, ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಎಸ್. ಮುನಿಸ್ವಾಮಿ, ಶಾಸಕರಾದ ಶ್ರೀ ಶ್ರೀನಿವಾಸ ಗೌಡ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/SjlQAgZdkQ

— Aravind Limbavali (@ArvindLBJP) May 25, 2021

style="background: white; margin-bottom: .0001pt; margin: 0in;">

ಕರೊನಾ ನಿಯಂತ್ರಣದ ಜತೆಗೆ ಲಸಿಕೆ ಪಡೆಯುವುದೂ ಅಷ್ಟೇ ಅವಶ್ಯಕ. ಯಾವ ಗ್ರಾಮವು ತನ್ನೆಲ್ಲ ನಿವಾಸಿಗಳಿಗೆ ಲಸಿಕೆ ನೀಡುವಲ್ಲಿ ಸಫಲವಾಗುತ್ತದೆಯೋ ಆ ಗ್ರಾಮಕ್ಕೂ ಕೂಡ ಪ್ರೋತ್ಸಾಹ ಧನ ಹಾಗೂ ಪ್ರಶಂಸಾ ಪತ್ರ ನೀಡಲು ಜಿಲ್ಲಾಡಳಿತ ನರ‍್ಧರಿಸಿದೆ. ಕುವೈತ್ನಿಂದ ಬಂದಿರುವ ಆಕ್ಸಿಜನ್ನಲ್ಲಿ ೨೦ ಟನ್ ಆಕ್ಸಿಜನ್ ಕೋಲಾರಕ್ಕೆ ನೀಡಲು ರ‍್ಕಾರ ತರ‍್ಮಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.


ಕೋಲಾರ ಜಿಲ್ಲೆಯಲ್ಲಿ  ಸಹ ಮತ್ತೆ ನಾಲ್ಕು ದಿನ ಲಾಕ್ ಡೌನ್ ಮಾಡಲಾಗುವುದು. ಗುರುವಾರದಿಂದ ಸೋಮವಾರದ ವರೆಗೆ ಲಾಕ್ಡೌನ್ ಇರಲಿದೆ ಎಂದು ಅವರು ಹೇಳಿದ್ದಾರೆ


Post a Comment

Previous Post Next Post