ಮಡಿಕೇರಿ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಇತ್ತಿಚಿಕೆ ಕೊಡಗು ಜಿಲ್ಲಾಧಿಕಾರಿ, ಶಾಸಕರು, ಸಚಿವರಿಗೆ ಪತ್ರದಲ್ಲಿ ಮನವಿ ಮಾಡಿದ್ದು ವೈರಲ್ ಆಗಿತ್ತು. ಈ ಒಂದು ಮೋಬೈಲ್ ನಲ್ಲಿ ನನ್ನ ಅಮ್ಮನೊಂದಿಗೆ ಕಳೆದಂತ ಕೆಲ ಪೋಟೋ, ವೀಡಿಯೋಗಳಿದ್ದಾವೆ. ದಯವಿಟ್ಟು ನನ್ನ ತಾಯಿ ಮೃತಪಟ್ಟ ಬಳಿಕ, ಕದ್ದಿರುವಂತ ತಾಯಿಯ ಮೊಬೈಲ್ ಹಿಂದಿರುಗಿಸುವಂತೆ ಸೋಮವಾರ ಪೇಟೆಯ ಹೃತಿಕ್ಷ ಮನವಿ ಮಾಡಿದ್ದ. ಜೋತೆಗೆ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಾಗಿದ್ದವು.
ನಂತರ . ಸೋಮವಾರಪೇಟೆಯ ಬಿಜೆಪಿ ನಾಯಕ ಉಷಾ ತೇಜಸ್ವಿಯವರ ಮೊಬೈಲ್ ಕೂಡ ಮೇ.೪ರಂದು ಕಳವಾಗಿತ್ತು. ಈ ಪ್ರಕರಣದ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿ ಮೊಬೈಲ್ ಇಎಂಐ ಟ್ರಾಕ್ ನಲ್ಲಿಟ್ಟಿದ್ದರು. ಆ ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದಂತ ಆರೋಪಿ ಸುಮಂತ್ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದು. ಈತ ಈಗಾಗಲೇ ಹಲವು ಮೊಬೈಲ್ ಕದ್ದು, ಮಾರಾಟ ಮಾಡಿರೋದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಈತನ ಬಳಿ ಮತ್ತಷ್ಟು ಕದ್ದ ಮೊಬೈಲ್ ಗಳಿರೋ ಸಾಧ್ಯತೆ ಇದ್ದು, ಆ ಬಗ್ಗೆ ತನಿಖೆಯನ್ನು ಡಿಸಿಐಬಿ ಪೊಲೀಸರು ಮುಂದುವರೆಸಿದ್ದಾರೆ.