ಹಾಸನ: ಪತ್ರಕರ್ತ ಹಾಗೂ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ಉದಯರವಿ ಅವರು ತಂದೆ ಪಟೇಲ್ ಎ.ಎಸ್.ವೆಂಕಟೇಗೌಡ(85) ಹೃದಯಘಾತದಿಂದ ಶನಿವಾರ ರಾತ್ರಿ ಆಲೂರು ತಾಲ್ಲೂಕು ಅಗಸರಹಟ್ಟಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಅನೇಕ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ, ನಾಲ್ವರು ಹೆಣ್ಣುಮಕ್ಕಳು, ಮೊಮ್ಮಕ್ಕಳು, ಮುಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪಟೇಲ್ ಎ.ಎಸ್.ವೆಂಕಟೇಗೌಡ ಅವರು ಮಾ.27,1937ರಂದು ಪಟೇಲ್ ಸುಬ್ಭೇಗೌಡರ ಮಗನಾಗಿ ಜನಿಸಿದ ಇವರು ಹಾಸನದಲ್ಲಿ ಇಂಟರ್ ಮಿಡಿಯಟ್ ವ್ಯಾಸಂಗ ಮಾಡುವಾಗ ಜ್ಞಾನಪೀಠ ಪ್ರಶಸ್ತಿ ವಿಜೇತ ದಿ.ಯು.ಆರ್.ಅನಂತಮೂರ್ತಿ ಅವರ ಶಿಷ್ಯರಾಗಿದ್ದರು. ಸರ್ಕಾರಿ ಕೆಲಸ ಸಿಕ್ಕಿದ್ದರೂ ಸೇರದೆ ಪೆÇಲೀಸ್ ಪಟೇಲರಾಗಿ ಆಲೂರು ತಾಲ್ಲೂಕಿಗೆ ಚಿರಪರಿಚಿತ ರಾಗಿದ್ದರು. ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಆಲೂರು ತಾಲ್ಲೂಕು ಅಗಸರಹಟ್ಟಿಯಲ್ಲಿ ನೆರವೇರಲಿದೆ ಎಂದು ಪುತ್ರ ಡಾ. ಉದಯರವಿ ಅವರು ತಿಳಿಸಿದ್ದಾರೆ.
Tags
ಹಾಸನ