ಹಾಸನ: ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚುತ್ತಿದ್ದು ಬಡವರು, ಕೂಲಿಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ಲಾಕ್ ಡೌನ್ ನಿಂದ ಶ್ರಮಿಕ ವರ್ಗದ ಬದುಕು ದುಸ್ತರವಾಗಿದೆ.ಸರ್ಕಾರ ಏನೇ ಸವಲತ್ತು ನೀಡಿದರೂ ಎಲ್ಲರ ಹಸಿವು ನೀಗಿಸಲು ಸಾಧ್ಯವಾಗಿಲ್ಲ.ಕೋವಿಡ್ ಸಂಕಷ್ಟಕ್ಕೆ ಸಂಘಸಂಸ್ಥೆಗಳ ಹಾಗೂ ದಾನಿಗಳ ನೆರವು ಜನರಿಗೆ ಬೇಕಿದ್ದು ಮಾನವೀಯತೆ ತೋರಿಸುವುದು ಅತೀ ಮುಖ್ಯವಾಗಿದೆ.
ಅದರಂತೆ ನಟ ಚೇತನ ಅವರು ಚೇತನ ಫೌಂಡೇಶನ್ ಅಡಿಯಲ್ಲಿ ಜನರ ನೆರವಿಗೆ ಬಂದಿದ್ದು ಪೌರಕಾರ್ಮಿಕರಿಗೆ,ಬಡವರಿಗೆ, ಅಸಹಾಯಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಅನೇಕರ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದು ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಹಾಸನ ನಗರದಲ್ಲಿ ನೂರಾರು ಪೌರಕಾರ್ಮಿಕರಿಗೆ ಹಾಗೂ ಇನ್ನಿತರ ಕಾರ್ಮಿಕ ವರ್ಗಕ್ಕೆ ಚೇತನ್ ಪೌಂಢೇಷನ್ ತಂಡ ಆಹಾರ ಕಿಟ್ ವಿತರಿಸಿ ಹೃದಯ ಶ್ರೀಮಂತಿಕೆ ಮೆರೆದಿದೆ.
ಈ ಸಂದರ್ಭದಲ್ಲಿ ಶರತ್, ದೀಪಕ್, ಪ್ರೇಮ್ ಕುಮಾರ್, ವಾಸು, ನವೀನ್, ರಾಕೇಶ್ ಇನ್ನಿತರರು ಇದ್ದರು.
Tags
ಹಾಸನ
