ಬೇಲೂರು: ಕೊರೊನಾ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ
ಕುರಿತು ರಾಜ್ಯದ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ
ಮಾಡಿದ್ದರಿಂದ ಹಾಸನ ಜಿಲ್ಲೆಯಲ್ಲಿ 482 ಜನ ಸಾವಿಗೆ ಕಾರಣವಾಗಿದೆ ಎಂದು ಮಾಜಿ ಸಚಿವ ಜಾ.ದಳದ ಹೆಚ್.ಡಿ.ರೇವಣ್ಣ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕೋವಿಡ್-19 ಬಗ್ಗೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ
ಸೋಂಕಿತರು ಆಸ್ಪತ್ರೆಯ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆ
ಮಾಡಿಕೊಂಡಿದ್ದಾರೆ. 14 ರಿಂದ 44 ವರ್ಷದವರಿಗೆ, ಹಿರಿಯನಾಗರೀಕರಿಗೆ
ಸಮರ್ಪಕವಾಗಿ ವ್ಯಾಕ್ಸಿನ್ ಸಿಕ್ಕಿಲ್ಲ. ಹಾಸನ ಜಿಲ್ಲೆಯಲ್ಲಿ ಇರುವ 14.5ಲಕ್ಷ ಜನರಲ್ಲಿ ಇದುವರಗೆ ಕೇವಲ 2.5 ಲಕ್ಷ ಜನರಿಗೆ ಮಾತ್ರ
ವ್ಯಾಕ್ಸಿನ್ ನೀಡಲಾಗಿದೆ. 16 ಸಾವಿರ ಹೆಲ್ತ್‍ವರ್ಕರ್ಸ್ ವ್ಯಾಕ್ಸಿ ನ್ನೀಡಿರುವುದೊಂದೇ ಮೆಚ್ಚತಕ್ಕಂತ ವಿಚಾರ ಎಂದ ರೇವಣ್ಣ, ಬಿಜೆಪಿ ಶಾಸಕರು ಹೆಚ್ಚು ಇರುವ ಜಿಲ್ಲೆಗೆ ಎಲ್ಲಾ ರೀತಿಯ
ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿದ್ದು ಹಾಸನ
ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಇಂತಹ ಸಣ್ಣ ರಾಜಕೀಯ ಬುದ್ದಿ
ಬಿಡಬೇಕು. ರಾಜ್ಯದಲ್ಲಿ ಯಾವಾವ ಜಿಲ್ಲೆಗೆ ಯಾವ ರೀತಿ ಸೌಲಭ್ಯಗಳ
ಒದಗಿಸಲಾಗಿದೆ ಎಂಬ ಮಾಹಿತಿ ಪಡೆಯುತ್ತಿದ್ದೇವೆ ಎಂದರು.
ಪತ್ರಕರ್ತರಿಗೆ ಪ್ಯಾಕೇಜ್ ಕೊಡಿ ಎಂದರೂ
ಕೊಡುತ್ತಿಲ್ಲ, 10 ಲಕ್ಷಕ್ಕೆ ವಿಮೆಯಾದರೂ ಮಾಡಿ ಎಂದರೆ
ಅದನ್ನೂ ಮಾಡುತ್ತಿಲ್ಲ. ಹೆಚ್.ಡಿ.ದೇವೇಗೌಡರು ಪ್ರಧಾನಿ ಆದಂತ
ಅವಧಿಯಲ್ಲಿ ಅಂದು ಮಹಾರಾಷ್ಟ್ರದಲ್ಲಿದ್ದ ಬಿಜೆಪಿ ಸರ್ಕಾರದ
ಮುಖ್ಯಮಂತ್ರಿಗಳು ಹತ್ತಿಬೆಳೆಗಾರರ ಹೋರಾಟಕ್ಕೆ
ಸಂಬಂಧಿಸಿದಂತೆ ರೈತರ ನಿಯೋಗವನ್ನು ದೆಹಲಿಗೆ
ಕರೆತರುವುದಾಗಿ ತಿಳಿಸಿದಾಗ, ಬೇಡವೆಂದ ದೇವೇಗೌಡರು,
ಹತ್ತಿಬೆಳೆಗೆ ಸಂಬಂಧಿಸಿದಂತೆ ಪರಿಣಿತರೊಂದಿಗೆ ಚರ್ಚಿಸಿ
ಹತ್ತಿಯನ್ನು ರಫ್ತು ಮಾಡುವ ಮೂಲಕ ಸಮಸ್ಯೆ
ಬಗೆಹರಿಸಿದರು. ದೇವೇಗೌಡರ ಕ್ರಮದ ಬಗ್ಗೆ ಮಹಾರಾಷ್ಟ್ರ
ಮುಖ್ಯಮಂತ್ರಿಗಳೆ ಹೊಗಳಿದ್ದರು. ಆದರೆ ನಮ್ಮ
ಯಡಿಯೂರಪ್ಪ ಅವರು ಇನ್ನೂ ದ್ವೇಶ ರಾಜಕಾರಣ ಬಿಟ್ಟಿಲ್ಲ
ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಲೂಟಿ ಹೊಡೆಯುವುದರಲ್ಲಿ
ನಿರತವಾಗಿದೆ. ಪರ್ಸೆಂಟೇಜ್ ವ್ಯವಹಾರದಲ್ಲಿ ತೊಡಗಿದೆ. ನೀರಾವರಿ
ಇಲಾಖೆಯಲ್ಲಿ ಶೇ.10 ಪರ್ಸೆಂಟೇಜ್ ಜೇಬಿಗೆ ಬೀಳುತ್ತಿದೆ. ನಾವು
ಅಧಿಕಾರ ನಡೆಸುವಾಗ ಪರ್ಸೆಂಟೇಜ್ ಸರ್ಕಾರ ಎನ್ನುತ್ತಿದ್ದ
ಪ್ರಧಾನಿ ನರೇಂದ್ರಮೋದಿ ಅವರು ಈಗ ಯಡಿಯೂರಪ್ಪ
ಅವರ ಪರ್ಸೆಂಟೇಜ್ ಸರ್ಕಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ
ಎಂದು ಪ್ರಶ್ನಿಸಿದರು. ಅಭಿವೃದ್ಧಿ ಕಾರ್ಯಕ್ಕೆ ಹಣ
ಇಲ್ಲವೆನ್ನುತ್ತಾರೆ. ಆದರೆ ಬಿಜೆಪಿ ಶಾಸಕರು ಇರುವ ಕಡೆಗೆ
ಅನದಾನ ಮುಲಾಜಿಲ್ಲದೆ ಹರಿದುಬರುತ್ತಿದೆ. ಒಬ್ಬರಿಗೊಂದು ನ್ಯಾಯ
ಮತ್ತೊಬ್ಬರಿಗೊಂದು ನ್ಯಾಯವೆ ಎಂದು ಪ್ರಶ್ನಿಸಿದ ಹೆಚ್.ಡಿ.ರೇವಣ್ಣ
ಮುಂದಿನ ದಿನದಲ್ಲಿ ಜನರೆ ಇದಕ್ಕೆ ತಕ್ಕುತ್ತರ ಕೊಡಲಿದ್ದಾರೆ
ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪ ಅವರು
ಮುಖ್ಯಮಂತ್ರಿ ಆದಮೇಲೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ
ಪೂರ್ಣಪ್ರಮಾಣದಲ್ಲಿ ನಿರ್ಲಕ್ಷ್ಯ ಮಾಡಿದರು. ಇದರಲ್ಲಿಯೂ
ರಾಜಕೀಯ, ತಾರತಮ್ಯ ತೋರಿದ್ದಾರೆ. ಹಾಸನ-ಬೇಲೂರು
ಚುತಸ್ಪಥ ರಸ್ತೆ ನಿರ್ಮಾಣಕಾರ್ಯ ರದ್ಧುಪಡಿಸಿ
ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರಕ್ಕೆ ಅನುದಾನ
ವರ್ಗಾಯಿಸಿಕೊಂಡಿದ್ದಾರೆ.
ಹಾಸನ, ಬೇಲೂರು, ಚಿಕ್ಕಮಗಳೂರು ರೈಲು
ಸಂಪರ್ಕದಲ್ಲೂ ಕೇಂದ್ರ ಸರ್ಕಾರ ಮಂದಗತಿಧೋರಣೆ
ಅನುಸರಿಸುತ್ತಿದೆ. ಹೆಚ್.ಡಿ.ದೇವೇಗೌಡರು ದೆಹಲಿಗೆ ತೆರಳಿ
ಚರ್ಚಿಸಿದಾಗ ಒಪ್ಪಿಗೆ ಸೂಚಿಸಿದ ರೈಲ್ವೆ ಸಚಿವರು ನಂತರ ನಿರಾಸಕ್ತಿ
ತೋರಿದ್ದಾರೆ. ಒಟ್ಟಾರೆ ಹಾಸನ ಜಿಲ್ಲೆ ಎಂದರೆ ರಾಜ್ಯ ಹಾಗೂ
ಕೇಂದ್ರಕ್ಕೆ ಸೇರಿದ್ದಲ್ಲ ಎಂಬಂತೆ ವರ್ತಿಸುತ್ತಿದ್ಧಾರೆ. ಹಣದ
ಕೊರತೆ ಇದ್ದರೆ, ಜಿಲ್ಲಾ ಉಸ್ತುವಾರಿ ಸಚಿವರಿಂದಲೆ ಸಾಲ
ಪಡೆಯಬಹುದಲ್ಲವೇ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಈ ಸಂದರ್ಭ ಸಂಸದ ಪ್ರಜ್ವಲ್‍ರೇವಣ್ಣ, ಶಾಸಕ ಕೆ.ಎಸ್.
ಲಿಂಗೇಶ್, ಜಿ.ಪಂ.ಸದಸ್ಯೆ ಲತಾಮಂಜೇಶ್ವರಿ, ಪುರಸಭ ಮಾಜಿ
ಅಧ್ಯಕ್ಷೆ ಭಾರತಿಅರುಣಕುಮಾರ್, ಮಾಜಿ ಉಪಾಧ್ಯಕ್ಷೆ
ಜಯಶ್ರೀಗುರುರಾಜ್, ನಾಗಮ್ಮವಡವೇಲು, ಪ್ರಮುಖರಾದ
ನಟರಾಜ್, ನಗರಾಧ್ಯಕ್ಷ ಉಮೇಶ್ ಇತರರು ಇದ್ದರು.
