ಹಾಸನ: ಸರ್ವರಿಗೂ ಉಚಿತವಾಗಿ ಕೊವೀಡ್ ವ್ಯಾಕ್ಸಿನೇಷನ್ ನೀಡಲು ಒತ್ತಾಯಿಸಿ ಮತ್ತು ಕೊವೀಡ್ಶೀಲ್ಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರಾಟ ನೀತಿ ವಿರೋಧಿಸಿ ರಾತ್ರಿ ಆಲೂರು ತಾಲೂಕು ಬಳಿ ಎಸ್.ಎಫ್.ಐ. ನೇತೃತ್ವದಲ್ಲಿ ಪ್ಲೆ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಲಾಯಿತು.
ದೇಶದ ಜನರಿಗೆ ಅಗತ್ಯವಾಗಿ ಬೇಕಾಗಿರುವ ಆಕ್ಸಿಜನ್, ವೆಂಟಿಲೇಟರ್, ಬೆಡ್, ಆಸ್ಪತ್ರೆಗಳು, ವೈದ್ಯರನ್ನು ಒದಗಿಸಬೇಕು. ಕೊರೋನಾ ಸೋಂಕು ಹರಡಿದಾಗ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ದುಭಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ಎಲ್ಲಾರಿಗೂ ಉಚಿತವಾಗಿ ವ್ಯಾಕ್ಸೀನೇಷನ್ ಕೊಡುವಂತಾಗಬೇಕು ಎಂದು ಆಗ್ರಹಿಸಿದರು. ಎಸ್.ಎಫ್.ಐ. ಕೇಂದ್ರ ಸಮಿತಿ ಕರೆ ನೀಡಿರುವ ದೇಶವ್ಯಾಪಿ ಪ್ರತಿಭಟನೆ ದಿನದ ಅಂಗವಾಗಿ ಹಾಸನ ಜಿಲ್ಲಾ ಸಮಿತಿಯ ವತಿಯಿಂದ ಪ್ಲೆ ಕಾರ್ಡ್ ಗಳನ್ನು ಹಿಡಿದು ಹಾಸನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ರಮೇಶ್ ಆರ್ಯಾ, ಜಿಲ್ಲಾ ಸಮಿತಿಯ ಸದಸ್ಯರಾದ ಹೇಮಂತ್, ಪವನ್ ಕುಮಾರ್ ದಿಲೀಪ್, ರಾಮ್ ಕುಮಾರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
