ಕಾಂಗ್ರೆಸ್ ಮುಖಂಡ ಬಿ.ಕೆ. ರಂಗಸ್ವಾಮಿಯಿಂದ ಹಸಿದವರಿಗೆ ಉಚಿತ ಊಟ

ಹಾಸನ: ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಬಡವರಿಗೆ, ನಿರ್ಗತಿಕರಿಗೆ, ಹಸಿದವರಿಗೆ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ರವರು ಸಿದ್ಧಪಡಿಸಿದ ಊಟವನ್ನು ಅಧಿಕೃತವಾಗಿ ಶುಕ್ರವಾರದಂದು ಚಾಲನೆ ನೀಡಿದರು.


      ಕೊರೋನಾ ಎರಡನೇ ಅಲೆ ಎಂಬುದು ವ್ಯಾಪಕವಾಗಿ ಹರಡಿ ಲಾಕ್ ಡೌನ್ ಇರುವುದರಿಂದ ಬಡ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಈ ನಿಟ್ಟಿನಲ್ಲಿ ಹಸಿದವರಿಗೆ ಊಟ ನೀಡುವ ನಿಟ್ಟಿನಲ್ಲಿ ಇಂದಿನಿAದ ಪ್ರಾರಂಭಿಕ ಹಂತಕ್ಕೆ ಚಾಲನೆ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಯಾವ ಯಾವ ಸ್ಥಳದಲ್ಲಿ ನಿರ್ಗತಿಕರು, ಬಡವರು, ಕೂಲಿ ಕಾರ್ಮಿಕರು ಇದ್ದಾರೆ ಗುರುತಿಸಿ ಊಟ- ತಿಂಡಿ ಕೊಡುವ ಕಾಯಕ ಮಾಡಲಾಗುವುದು ಎಂದರು. ಕೆಲಸವಿಲ್ಲದೆ ಯಾರು ಒಂದು ಹೊತ್ತು ಊಟಕ್ಕಾಗಿ ಬಳಲುತ್ತಿದ್ದಾರೆ ಅಂತವರ ನೆರವಿಗಾಗಿ ನಿಲ್ಲಬೇಕು ಎನ್ನುವ ಉದ್ದೇಶ ನಮ್ಮದಾಗಿದೆ. ನನ್ನ ಸ್ನೇಹಿತರು, ಹಿತೈಸಿಗಳು ಎಲ್ಲ ಸೇರಿ ಹೆಚ್ಚಿನ ರೀತಿಯ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಮ್ಮ ಉದ್ದೇಶವನ್ನು ತಿಳಿಸಿದರು. ಕೊರೋನಾ ಎಂಬುದು ಶೀಘ್ರದಲ್ಲಿ ಜನಸಾಮಾನ್ಯರಿಂದ ದೂರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಇದೆ ವೇಳೆ ಹೇಳಿದರು. 


Post a Comment

Previous Post Next Post