ಟೀಕೆ-ಟಿಪ್ಪಣಿಗಳಿಗೆ ಕಿವಿಕೊಡದ ಶಾಸಕರು ಸದ್ದಿಲ್ಲದೆ ಕಾರ್ಯಚರಣೆ ಆಮ್ಲಜನಕ ರಕ್ಷಕರಾಗಿ ನಿಂತ ಪ್ರೀತಂ ಜೆ. ಗೌಡ

ಹಾಸನ: ಟೀಕೆ-ಟಿಪ್ಪಣಿಗಳಿಗೆ ಕಿವಿಕೊಡದ ಹಾಸನ ಕ್ಷೇತ್ರದ ಶಾಸಕರಾದ ಪ್ರೀತಂ ಜೆ ಗೌಡರು ಸದ್ದಿಲ್ಲದೆ ಕಾರ್ಯಚರಣೆ ನಡೆಸುವ ಮೂಲಕ ಜನರ ಬಹು ಬೇಡಿಕೆಯಾಗಿದ್ದ ಆಮ್ಲಜನಕ ರಕ್ಷಕರಾಗಿ ಮತ್ತು ಇತರೆ ಸಮಸ್ಯೆಗಳಿಗೆ ನಿಂತು ಪರಿಹಾರ ಕಂಡುಕೊAಡಿದ್ದಾರೆ. 


       ಕೊರೋನಾ ಎಂಬ ಮಹಾಮಾರಿ ಆವರಿಸಿ ಕಳೆದ ವರ್ಷ ಜನ ಸಮಸ್ಯೆಗೆ ಸಿಲುಕಿ ಇನ್ನೇನು ಸಲ್ಪ ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಎರಡೆನೇ ಅಲೆ ಪ್ರಾರಂಭವಾದ ದಿನದಿಂದ ಅತಿ ವೇಗವಾಗಿ ಆವರಿಸಿ ಹಾಸನದ ಜನತೆ ತತ್ತರಿಸಿ ಹೋಗಿದ್ದರು. ಈವೇಳೆ ಶಾಸಕರಾದ ಪ್ರೀತಮ್ ಜೆ. ಗೌಡರಿಗೂ ಕೊರೋನಾ ಪಾಸಿಟಿವ್ ಬಂದು ಹತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಈವೇಳೆ ಶಾಸಕರ ಮೇಲೆ ಟೀಕೆ ಟಿಪ್ಪಣಿಗಳ ಮಹಾಪೂರವೇ ಹರಿಯಿತು. ಚಿಕಿತ್ಸೆ ನಂತರ ಕ್ಷೇತ್ರಕ್ಕೆ ಮರಳಿದಾಗ ಯಾವ ಹೇಳಿಕೆ ನೀಡಲು ಮುಂದಾಗದೆ ಸದ್ದಿಲ್ಲದೆ ಮಾರನೆ ದಿನವೆ ಕಾರ್ಯಚರಣೆಗೆ ಮುಂದಾಗಿ ಎರಡು ದಿನಗಳ ಅವಕಾಶ ಕೇಳಿದರು. ಜಿಲ್ಲೆಯ ಸಮಸ್ಯೆಯ ಬಗ್ಗೆ ಚಿಂತನೆ ನಡೆಸಲು ಮುಂದಾದರು. ಕೊರೋನಾ ಪರೀಕ್ಷೆ ಮಾಡುವ ಪಲಿತಾಂಶ ತಡವಾಗಿ ನೀಡುತ್ತಿದ್ದರಿಂದ ಒಬ್ಬರಿಂದ ಅನೇಕ ಜನರಿಗೆ ಕೊರೋನಾ ಹರಡಲು ಹೆಚ್ಚಾಯಿತು. ಕೊರೋನಾ ಪರೀಕ್ಷೆ ನಂತರ ಪಲಿತಾಂಶವು ತಡವಾಗಿ ಬರುತಿದ್ದನ್ನು ಕೇವಲ ೨೪ ಗಂಟೆ ಒಳಗೆ ನೀಡಲು ವ್ಯವಸ್ಥೆ ಮಾಡಲಾಯಿತು. ದಿನೆ ದಿನೆ ಸಾವಿರಾರು ಸಂಖ್ಯೆಯಲ್ಲಿ ಪಾಸಿಟಿವ್ ಸೋಂಕಿತರು ಹೆಚ್ಚಾದ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಕಾಣಿಸಿತು. ಇದನ್ನರಿತ ಶಾಸಕರು ಮತ್ತೆ ಬೆಡ್ ವಿಸ್ತರಿಸಲು ಸೂಚಿಸಿದರು. ನಂತರ ಖಾಸಗಿ ಆಸ್ಪತ್ರೆಯನ್ನು ಕೂಡ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದರೂ ಆಕ್ಸಿಜನ್ ಕೊರತೆ ಎದ್ದು ಕಾಣುತಿತ್ತು. ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲೆ ೨೦ಕಿಲೊ ಆಕ್ಸಿಜನ್ ನೂತನ ಪ್ಲಾಂಟನ್ನು ನಿರ್ಮಿಸಲು ಮುಂದಾದರು.

    ಪ್ರಚಾರ ಬಯಸದೆ ಮೌನವಾಗಿಯೇ ಇದು, ಯಾರಿಗೂ ಮಾಹಿತಿ ಕೊಡದೆ ಶಾಸಕರೇ ಖುದ್ದಾಗಿ ತಮ್ಮ ವಾಹನದಲ್ಲಿ ಹೋಗಿ ರಾತ್ರಿ ೩ ಗಂಟೆಯಾದರೂ ನಿಂತು ಆಕ್ಸಿಜನ್ ತುಂಬಿಸಿಕೊAಡು ಬರುವ ಮೂಲಕ ವ್ಯವಸ್ಥೆ ಮಾಡಲಾಯಿತು. ಪಾಸಿಟಿವ್ ಬಂದಾಗ ಮನೆಯಲ್ಲೆ ಕ್ವಾರೆಂಟೈನ್ ಯಾರು ಆಗಿದ್ದಾರೆ ಅಂತವರಿಗೆ ಅವಶ್ಯಕವಾಗಿ ಬೇಕಾಗಿರುವ ಮೆಡಿಸನ್ ಗಳನ್ನು ಕರೆ ಮಾಡಿ ಮನೆಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಒಂದೆ ಕುಟುಂಬದಲ್ಲಿ ಹೆಚ್ಚು ಜನರಿಗೆ ಪಾಸಿಟಿವ್ ಬಂದವರು ಮನೆಯಲ್ಲಿ ಕ್ವಾರೆಟೈನ್ ಇರುವವರು ಅಡುಗೆ ಮಾಡಿಕೊಳ್ಳದ ಪರಿಸ್ಥಿತಿಯಲ್ಲಿದ್ದವರಿಗೆ ಆಹಾರದ ಕಿಟ್ ನೀಡದ ಶಾಸಕರು ಶ್ರಮವಹಿಸಿ ಸಿದ್ಧಪಡಿಸಿರುವ ತಿಂಡಿ-ಊಟವನ್ನು ಮೂರು ಹೊತ್ತು ಸಮಯಕ್ಕೆ ಸರಿಯಾಗಿ ಮನೆಗೆ ತಲುಪಿಸುವ ಕೆಲಸ ಮಾಡಿಸಿದ್ದಾರೆ. ಕೊರೋನಾ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಎಲ್ಲಾವುದನ್ನು ಮಾಡುವುದಕ್ಕೆ ಆಗದಿದ್ದರೂ ಅವಶ್ಯಕವಾಗಿ ಬೇಕಾಗಿರುವ ಕೆಲಸವನ್ನು ಹಗಲು-ಇರುಳು ಶ್ರಮವಹಿಸಿ ಮಾಡಿದ್ದಾರೆ. ಕೊರೋನಾ ಪಾಸಿಟಿವ್ ಕಡಿಮೆಯಾಗಿ ಹಾಸನ ಕೊರೋನಾ ಮುಕ್ತವಾಗಬೇಕು ಎಂಬುದು ಸಾರ್ವಜನಿಕರ ಉದ್ದೇಶವಾಗಿದೆ. ಇಷ್ಟೆಲ್ಲಾ ಕೆಲಸ ಮಾಡಿಸಿದರೂ ಇದುವರೆಗೂ ಯಾವುದನ್ನು ಪ್ರಚಾರ ಬಯಸದೆ ಕೆಲಸಕ್ಕೆ ಮಾತ್ರ ಹೆಚ್ಚು ಹೊತ್ತು ನೀಡಿದ್ದಾರೆ. 


Post a Comment

Previous Post Next Post