ಕೊರೋನಾ ಎಫೆಕ್ಟ್ ಸರಳ ಬಸವ ಜಯಂತಿ ಆಚರಣೆ

ಹಾಸನ: ಎಲ್ಲೆಡೆ ಕೊರೋನಾ ಆವರಿಸಿರುವುದರಿಂದ ನಗರದ ಅರಳೇಪೇಟೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.


      ಪ್ರತಿ ವರ್ಷ ಬಸವ ವಿಗ್ರಹವನ್ನೊತ್ತ ತೇರಿನಲ್ಲಿ ವಿವಿಧ ಕಲಾತಂಡದೊಡನೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜರುಗುತಿತ್ತು. ಆದರೇ ಈ ವರ್ಷ ಕೊರೋನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಸರಕಾರದ ನಿಯಮ ಅನುಸಾರವಾಗಿ ಜಯಂತಿ ಆಚರಿಸಿದರು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಇಡಲಾಗಿದ್ದ ಶ್ರೀ ಬಸವೇಶ್ವರರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಇನ್ನು ಭಕ್ತಾಧಿಗಳು ಕೂಡ ಬೆರಳೇಣಿಕೆಯಷ್ಟು ಜನರು ಸಾಮಾಜಿಕ ಅಂತರದಲ್ಲಿ ಭಾಗವಹಿಸಿದ್ದರು. ಪೂಜೆ ನೆರವೇರಿಸಿದ ನಂತರ ಎಲ್ಲಾ ಹೊರ ನಡೆದರು.

      ಈ ಸಂದರ್ಭದಲ್ಲಿ ಶ್ರೀ ವೀರಶೈವ ಸಮಾಜದ ಕಾರ್ಯದರ್ಶಿ ಭುವನಾಕ್ಷ, ಖಜಾಂಚಿ ಈ.ಎಂ. ರುದ್ರಕುಮಾರ್, ಮಲ್ಲಿಕಾರ್ಜುನ್, ಕಿರಣ್ ಕುಮಾರ್ ಹೊಸಮನಿ, ವೈ.ಎಂ. ಪ್ರಭಾಕರ್, ಕೆ.ಹೆಚ್. ಲೋಕೇಶ್, ಮ್ಯಾನೇಜರ್ ಷಡಕ್ಷರಿ, ಕೀರ್ತಿಕುಮಾರ್ ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು


Post a Comment

Previous Post Next Post