ಕೊರೋನಾಕ್ಕೆ ಡೋಂಟ್ ಕೇರ್ ಮಹಾವೀರ ವೃತ್ತದಲ್ಲಿ ಜನಜಂಗುಳಿ-ಟ್ರಾಫೀಕ್ ಜಾಮ್

ಹಾಸನ: ಕೊರೋನಾ ಆವರಿಸಿ ರಾಜ್ಯಾಧ್ಯಂತ ಲಾಕ್ ಡೌನ್ ತಂದು ಬೆಳಿಗ್ಗೆ ೬ ರಿಂದ ೧೦ರ ವರೆಗೆ ನಾಲ್ಕು ಗಂಟೆಗಳ ಕಾಲ ಅಗತ್ಯ ವಸ್ತುಗಳ ವ್ಯಾಪಾರ ಮಾಡಲು ಅವಕಾಶ ಕೊಡಲಾಗಿದ್ರೂ ಜನರ ಕೊರೋನಾಕ್ಕೆ ಡೋಂಟ್ ಕೇರ್. ಹಾಸನ ನಗರದ ಮಹಾವೀರ ವೃತ್ತದಲ್ಲಿ ವ್ಯಾಪಾರ ಮಾಡಲು ಜನಜಂಗುಳಿ-ಟ್ರಾಫೀಕ್ ಜಾಮ್ ಸಮಸ್ಯೆ ಶುಕ್ರವಾರದಂದು ಕಂಡು ಬಂದಿತು.


       ದಿನೆ ದಿನೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುವುದಲ್ಲದೇ ಸಾವಿನ ಸಂಖ್ಯೆಯೂ ಕೂಡ ಗಣನಿಯವಾಗಿ ಏರಿಕೆ ಉಂಟಾಗಿದೆ. ಕೊರೋನಾದಿಂದ ದೂರ ಇರಲು ಕಡ್ಡಾಯವಾಗಿ ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಬೇಕು. ಇನ್ನು ಆಹಾರ ಪದಾರ್ಥವನ್ನು ಕೊಳ್ಳಬೇಕು ಎಂದರೆ ಮಾತ್ರ ಬೆಳಿಗ್ಗೆ ೬ ರಿಂದ ೧೦ ರ ಒಳಗೆ ನಡೆದುಕೊಂಡು ಬಂದು ವಾಪಸ್ ಹೋಗಬೇಕು. ಆದರೇ ಜನರು ಕಾನೂನು ನಿಯಮ ಯಾವುದನ್ನು ಪಾಲಿಸದೇ ತಮ್ಮ ವಾಹನದಲ್ಲಿ ಬಂದಿದ್ದರಿAದ ನಗರದ ಮಹಾವೀರ ವೃತ್ತದ ನಾಲ್ಕು ಭಾಗಗಳಲ್ಲೂ ಜನಜಂಗುಳಿ ಜೊತೆಗೆ ವಾಹನಗಳ ಹೆಚ್ಚಳದಿಂದ ಟ್ರಾಫೀಕ್ ಸಮಸ್ಯೆ ಎದುರಾಯಿತು. ವಾಣಿವಿಲಾಸ ಸರಕಾರಿ ಶಾಲೆ ಎದುರು ರಸ್ತೆಯಲ್ಲಂತು ಫುಲ್ ಟ್ರಾಫೀಕ್ ಇದ್ದು, ಈ ವೇಳೆ ಪೊಲೀಸ್ ಜೀಪ್ ಗಳೆ ಈ ಭಾಗದಲ್ಲಿ ಸಂಚರಿಸಬೇಕಾದರೇ ಹರಸಾಹಸ ಪಟ್ಟರು. ಇನ್ನು ಬಹುತೇಕ ಜನರು ಅರ್ಧ ಬರ್ದ ಮಾಸ್ಕ್ ಹಾಕಿಕೊಂಡು ಕೊರೋನಾ ಹರಡುವಾಗಿದ್ದರು. ಅದೇಕೂ ಗೊತ್ತಿಲ್ಲ. ಈ ಸಮಯದಲ್ಲಿ ಯಾವ ಪೊಲೀಸರು ಕಾಣಿಸಲಿಲ್ಲ. ಆದರೇ ಮಾರ್ಷಲ್ಸ್ ತಂಡ ಮಾತ್ರ ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆ ನೀಡುತಿದ್ದರು. ಕಳೆದ ವರ್ಷದ ಕಟ್ಟುನಿಟ್ಟಿನ ಲಾಕ್ ಡೌನ್ ಹೋಲಿಸಿದರೇ ಈವರ್ಷ ಸಲ್ಪವು ನಿಯಮ ಪಾಲಿಸುತ್ತಿಲ್ಲ ಎಂಬAತೆ ಅನಿಸುತ್ತದೆ.


Post a Comment

Previous Post Next Post